ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು….
ಬೆಂಗಳೂರು: ಅರವಿಂದ ವೆಂಕಟೇಶ ರೆಡ್ಡಿ ಟಿಎನ್ ಐಟಿ ಮೀಡಿಯಾದೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ಆದ ಪ್ರಕರಣ ಸೇರಿದಂತೆ ಅವರ ಹಿನ್ನಲೆ , ಅವರು ನಡೆಸುತ್ತಿರುವ ಬ್ಯುಸಿನೆಸ್ ಗಳು ಹಾಗೂ ಕ್ರಿಕೆಟ್ ಬಗ್ಗೆ ಕೂಡಾ ಮಾತನಾಡಿದ್ದಾರೆ.
ನಮ್ಮ ದಿ ನ್ಯೂ ಇಂಡಿಯನ್ ಟೈಮ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಸಂಪೂರ್ಣ ವೀಡಿಯೋ ಹಾಕಲಾಗಿದೆ.
ಅರವಿಂದ್ ಅಂತರಾಳ..!
ಬೆಳೆಸಿದ್ದಲ್ಲ.. ಬೆಳೆದದ್ದು..!
EXCLUSIVE INTERVIEW
Like, Subscribe and Share
https://www.youtube.com/@Thenewindiantimes
ಇನ್ನೂ ಈ ಪ್ರಕರಣದ ಬಗ್ಗೆ ನೋಡೊದಾದ್ರೆ , ಸ್ಯಾಂಡಲ್ ವುಡ್ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಲ್ಲಿ ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದರು. ಆರೋಪಿ ಅರವಿಂದ್ ರೆಡ್ಡಿ, ಎವಿಆರ್ ಗ್ರೂಪ್‌ನ ಮಾಲೀಕ, 2021ರಲ್ಲಿ ಪರಿಚಯವಾಗಿದ್ದ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಪ್ರಕರಣವನ್ನು ಗೋವಿಂದರಾಜನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಆರೋಪಿ ಬಂಧನಕ್ಕಾಗಿ ಎಸಿಪಿ ಚಂದನ್ ಹಾಗೂ ಸುಬ್ರಹ್ಮಣಿಯ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಶ್ರೀಲಂಕದಿಂದ ಬೆಂಗಳೂರಿಗೆ ಬರುವ ವೇಳೆ ಆರ್. ರೆಡ್ಡಿಯನ್ನು ಬಂಧಿಸದ್ದು, ನಂತರ ಬೇಲ್ ಮೇಲೆ ಆಚೆ ಬಂದರು. ಮೊದಲು ಬಂಧನಕ್ಕಾಗಿ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿತ್ತು.
ಅರವಿಂದ್ ರೆಡ್ಡಿ, ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಮಹಾರಾಜ ಬಳ್ಳಾರಿ ಟಸ್ಕರ್ಸ್ ಕ್ರಿಕೆಟ್ ತಂಡದ ಮಾಲೀಕ, ಸಿನಿಮಾದ ನಿರ್ಮಾಪಕರಾಗಿ ಕೂಡ ಹೆಸರು ಮಾಡಿದಿದ್ದಾರೆ. ಅವರು ನಟ–ನಟಿಯರಿಗಾಗಿ ವಿವಿಧ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸುತ್ತಿದ್ದರು. ಎವಿಆರ್ ಗ್ರೂಪ್ ತನ್ನ ಈ ಸಂಘಟನೆಯನ್ನು ದುಬೈ, ಶ್ರೀಲಂಕಾ ಸೇರಿದಂತೆ ಹಲವಾರು ಸ್ಥಳಗಳಲ್ಲಿ ನಡೆದ ಟೂರ್ನಮೆಂಟ್‌ಗಳಿಗೆ ಸ್ಪಾನ್ಸರ್ ಮಾಡಿತ್ತು.






