ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಸಚಿವ ಸ್ಥಾನ ಮತ್ತು ಪಕ್ಷದ ಒಳಗಿನ ಅಧಿಕಾರಕ್ಕಾಗಿ ನಡೆಯುತ್ತಿರುವ ಕಿತ್ತಾಟ ಈಗ ವ್ಯಾಪಾರ ಮಟ್ಟಕ್ಕೆ ಇಳಿದಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರು ಜಿಕೆವಿಕೆ ಕ್ಯಾಂಪಸ್ನಲ್ಲಿ ನಡೆದ ಸಂಸದ್ ಕ್ರೀಡಾ ಮಹೋತ್ಸವ ಸಮಾರೋಪ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, “ಕಾಂಗ್ರೆಸ್ನಲ್ಲೇ ತಮ್ಮದೇ ಪಕ್ಷದ ಶಾಸಕರನ್ನು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಕಳಂಕ” ಎಂದು ಟೀಕಿಸಿದರು.
ಹಿಂದೆ ಒಬ್ಬ ಶಾಸಕರನ್ನು ಖರೀದಿಸಲು 50 ಕೋಟಿ ರೂ. ಕೊಡುತ್ತಿದ್ದರು. ಈಗ ದರ ಹೆಚ್ಚಾಗಿದೆ; ಕೆಲವರು 75 ಕೋಟಿ ರೂ., ಮತ್ತೆ ಕೆಲವರು 100 ಕೋಟಿ ರೂ. ತನಕ ಕೇಳುತ್ತಿದ್ದಾರೆ. ಕೇವಲ ಹಣವಲ್ಲ, ಜೊತೆಗೆ ಒಂದು ಫ್ಲ್ಯಾಟ್, ಫಾರ್ಚುನರ್ ಕಾರು ಕೊಡುತ್ತೇವೆ ಎಂದು ಆಫರ್ಗಳು ಬರುತ್ತಿವೆ. ಕಾಂಗ್ರೆಸ್ ಒಳಗೇ ಇಂಥ ವ್ಯವಹಾರಗಳು ನಡೆಯುತ್ತಿವೆ. ಇದೇ ಸಂದರ್ಭದಲ್ಲಿ, ರಾಜ್ಯ ಕಾಂಗ್ರೆಸ್ನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಮೇಲೂ ಅವರು ಗಂಭೀರ ಆರೋಪ ಹೊರಿಸಿದರು.
ಕಾಂಗ್ರೆಸ್ʼನಲ್ಲೇ ತಮ್ಮದೇ ಪಕ್ಷದ ಶಾಸಕರನ್ನು ಖರೀದಿಸುವ ಪರಿಸ್ಥಿತಿ ನಿರ್ಮಾಣ: ಛಲವಾದಿ ನಾರಾಯಣಸ್ವಾಮಿ