Samantha Marriage; ನಿರ್ದೇಶಕನ ಜೊತೆ 2ನೇ ಮದುವೆಯಾದ ನಟಿ ಸಮಂತಾ ರುತ್ ಪ್ರಭು
ನಾಗಚೈತನ್ಯ ಜೊತೆಗಿನ ವಿಚ್ಛೇದನದ ನಂತರ ನಟಿ ಸಮಂತಾ, ನಿರ್ದೇಶಕ ರಾಜ್ ನಿಡಿಮೋರು ಅವರನ್ನು ಕೊಯಮತ್ತೂರಿನ ಇಶಾ ಫೌಂಡೇಶನ್‌ನಲ್ಲಿ ವರಿಸಿದ್ದಾರೆ. ಬಹುದಿನಗಳ ಡೇಟಿಂಗ್ ವದಂತಿಗೆ ತೆರೆ ಎಳೆದು, ಈ ಜೋಡಿ ಈಗ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಸಮಂತ ಈ ಹಿಂದೆ ನಟ ನಾಗ ಚೈತನ್ಯ ಅವರನ್ನು ವಿವಾಹವಾಗಿದ್ದರು. ಅವರ ವಿವಾಹದ ನಾಲ್ಕು ವರ್ಷಗಳ ನಂತರ ದಂಪತಿಗಳು ಬೇರ್ಪಟ್ಟರು. ನಂತರ ನಾಗಚೈತನ್ಯ ಅವರು ನಟಿ ಸೋಭಿತಾ ಧುಲಿಪಾಲ ಅವರನ್ನು ವಿವಾಹವಾದರು.
ಮತ್ತೊಂದೆಡೆ, ರಾಜ್ ನಿಧಿಮೋರು 2022 ರಲ್ಲಿ ವಿಚ್ಛೇದನ ಪಡೆಯುವ ಮೊದಲು ಶ್ಯಾಮಲಿ ದೇ ಅವರನ್ನು ವಿವಾಹವಾಗಿದ್ದರು. ಹೀಗಾಗಿ ಇಂದಿನ ವಿವಾಹವು ನಟಿ ಸಮಂತಾ ಹಾಗೂ ನಿರ್ದೇಶಕ ರಾಜ್ ನಿಡಿಮೋರು ಇಬ್ಬರಿಗೂ ಎರಡನೇ ವಿವಾಹ. ಮಾಜಿ ಪತಿ ನಾಗಚೈತನ್ಯ 2ನೇ ವಿವಾಹವಾದ ಬಳಿಕ ಈಗ ನಟಿ ಸಮಂತಾ ಕೂಡ ಎರಡನೇ ವಿವಾಹವಾಗಿದ್ದಾರೆ.






