ಸಿ.ಜೆ ರಾಯ್ ಆತ್ಮಹತ್ಯೆ ಪ್ರಕರಣ: ರಾಜ್ಯ ಸರ್ಕಾರದಿಂದ SIT ತನಿಖೆಗೆ ಆದೇಶ

Date:

ಸಿ.ಜೆ ರಾಯ್ ಆತ್ಮಹತ್ಯೆ ಪ್ರಕರಣ: ರಾಜ್ಯ ಸರ್ಕಾರದಿಂದ SIT ತನಿಖೆಗೆ ಆದೇಶ

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ಐಟಿ (ವಿಶೇಷ ತನಿಖಾ ತಂಡ)ಗೆ ವಹಿಸಿ ಆದೇಶ ಹೊರಡಿಸಿದೆ. ಈ ಮೂಲಕ ರಾಯ್ ಆತ್ಮಹತ್ಯೆ ಹಿಂದಿನ ನಿಖರ ಕಾರಣವನ್ನು ಬಹಿರಂಗಪಡಿಸಲು ಸರ್ಕಾರ ಮುಂದಾಗಿದೆ.

ಪ್ರಕರಣದ ತನಿಖೆಗಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಅವರ ನೇತೃತ್ವದಲ್ಲಿ ಎಸ್ಐಟಿ ತಂಡವನ್ನು ರಚಿಸಲಾಗಿದ್ದು, ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಅವರು ಈ ತಂಡದ ಸದಸ್ಯರಾಗಿರಲಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಗಮನಾರ್ಹವಾಗಿ, ಉದ್ಯಮಿ ಸಿ.ಜೆ ರಾಯ್ ಅವರು ನಿನ್ನೆ ತಮ್ಮ ನಿವಾಸದಲ್ಲಿ ಐಟಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಈ ಘಟನೆಯ ನಂತರ ಅವರ ಸಾವಿನ ಕುರಿತು ಹಲವು ಅನುಮಾನಗಳು ಮೂಡಿದ್ದವು.

ಈ ಹಿನ್ನಲೆಯಲ್ಲಿ ಪ್ರಕರಣದ ಎಲ್ಲಾ ಆಯಾಮಗಳನ್ನು ಸಮಗ್ರವಾಗಿ ಪರಿಶೀಲಿಸಲು ಎಸ್ಐಟಿ ತನಿಖೆಗೆ ವಹಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.

Share post:

Subscribe

spot_imgspot_img

Popular

More like this
Related

ವಿದೇಶಿಗರಿಗೆ ವೀಸಾ ವಿಸ್ತರಣೆ ಹಕ್ಕು ಇಲ್ಲ: ಹೈಕೋರ್ಟ್ ಸ್ಪಷ್ಟನೆ

ವಿದೇಶಿಗರಿಗೆ ವೀಸಾ ವಿಸ್ತರಣೆ ಹಕ್ಕು ಇಲ್ಲ: ಹೈಕೋರ್ಟ್ ಸ್ಪಷ್ಟನೆ ಬೆಂಗಳೂರು: ವಿದೇಶಗಳಿಂದ ಭಾರತಕ್ಕೆ...

ಸಿ.ಜೆ. ರಾಯ್ ಸಾವು: ಉನ್ನತ ಮಟ್ಟದ ತನಿಖೆ – ಡಿ.ಕೆ. ಶಿವಕುಮಾರ್ ಭರವಸೆ

ಸಿ.ಜೆ. ರಾಯ್ ಸಾವು: ಉನ್ನತ ಮಟ್ಟದ ತನಿಖೆ – ಡಿ.ಕೆ. ಶಿವಕುಮಾರ್...

ಕೋರಮಂಗಲದಲ್ಲಿ ಡಾ. ಸಿ.ಜೆ. ರಾಯ್ ಅಂತಿಮ ದರ್ಶನ: ಕಾಸಾಗ್ರ್ಯಾಂಡ್ ನಲ್ಲಿ ಅಂತ್ಯಕ್ರಿಯೆ

ಕೋರಮಂಗಲದಲ್ಲಿ ಡಾ. ಸಿ.ಜೆ. ರಾಯ್ ಅಂತಿಮ ದರ್ಶನ: ಕಾಸಾಗ್ರ್ಯಾಂಡ್ ನಲ್ಲಿ ಅಂತ್ಯಕ್ರಿಯೆ ಬೆಂಗಳೂರು:...

ಶೂಟ್ ಮಾಡಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿಜೆ ರಾಯ್ ಆತ್ಮಹತ್ಯೆ!

ಶೂಟ್ ಮಾಡಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿಜೆ ರಾಯ್ ಆತ್ಮಹತ್ಯೆ! ಬೆಂಗಳೂರು: ಕಾನ್ಫಿಡೆಂಟ್...