ತಮಿಳುನಾಡಿನ ಅಮ್ಮಾ ಇನ್ನು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇದೀಗ ಎಲ್ಲೆಲ್ಲೂ ಅಮ್ಮಾ ಸಾಧನೆಯದ್ದೆ ಮಾತು. ಅದರಲ್ಲೂ ಮುಖ್ಯವಾಗಿ ಜಯಾ ಜೊತೆ ಇದ್ದ ಕುರ್ಚಿಯ ಬಗ್ಗೆ ವಿಶೇಷ ಆಸಕ್ತಿ ತೋರ್ತಾ ಇದ್ದಾರೆ ಜನ..! ಹೌದು.. ಜಯಲಲಿತಾ ಅವರು ಎಲ್ಲೇ ಹೋದರೂ ಅವರ ಜೊತೆಯಲ್ಲಿಯೇ ಒಂದು ಕುರ್ಚಿಯೂ ಕೂಡ ಹೋಗ್ತಾ ಇತ್ತಂತೆ..! ರಾಷ್ಟ್ರಪತಿಯಿಂದ ಹಿಡಿದು ಪ್ರಧಾನಿಯವರ ಭೇಟಿಯವರೆಗೂ ಜಯಲಲಿತಾ ಅದೇ ಕುರ್ಚಿಯನ್ನೇ ಬಳಕೆ ಮಾಡಿಕೊಳ್ಳುತ್ತಿದ್ದರು. ಅರೇ ಅದೆಂತಾ ಕುರ್ಚಿ..? ಅದೇನು ಬಂಗಾರದ್ದೇ ಅಂತೀರಾ..? ಖಂಡಿತ ಇಲ್ಲ ಈ ಕುರ್ಚಿ ತೇಗದ ಮರದಿಂದ ನಿರ್ಮಾಣ ಮಾಡಲಾಗಿದ್ದು ಮೂಲಗಳ ಪ್ರಕಾರ ಜಯಾ ಅವರ ಅನಾರೋಗ್ಯದ ಕಾರಣ ವೈದ್ಯರು ಈ ಕುರ್ಚಿಯನ್ನು ಬಳಕೆ ಮಾಡಬೇಕು ಎಂದು ಹೇಳಿದ್ದರಿಂದ ಈ ಕುರ್ಚಿಯನ್ನು ಬಳಕೆ ಮಾಡುತ್ತಿದ್ದರು ಎನ್ನಲಾಗಿದೆ. ಆದ್ರೆ ಕೆಲವರು ಹೇಳೋ ಪ್ರಕಾರ ಜಯಲಲಿತಾ ಅವರಿಗೆ ಈ ಕುರ್ಚಿ ತುಂಬಾ ಲಕ್ಕಿ ಅಂತೆ..! ಅವರು ಈ ಕುರ್ಚಿಯಲ್ಲಿ ಕುಳಿತರೆ ಅವರು ಅಂದುಕೊಂಡ ಕೆಲಸವೆಲ್ಲಾ ನೆರವೇರುತ್ತೆ ಅನ್ನೋ ನಂಬಿಕೆ ಅವರಿಗಿದ್ದ ಕಾರಣ ಎಲ್ಲೇ ಹೋದರೂ ಈ ಕುರ್ಚಿ ಜೊತೆಯಲ್ಲೇ ಹೋಗುತ್ತೆ ಎನ್ನುತ್ತಾರೆ. 2012ರ ಕಾವೇರಿ ವಿವಾದ ಸಂದರ್ಭದಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಮುಖ್ಯಮಂತ್ರಿಗಳು ಸಭೆ ನಡೆಸಿ ನಿರ್ಧಾರ ಕೈಗೊಳ್ಳಿ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು ಈ ವೇಳೆ ಮಾತುಕತೆಗೆ ಕರ್ನಾಟಕಕ್ಕೆ ಬಂದಿದ್ದ ಸಿಎಂ ಜಯಲಲಿತಾ ಜೊತೆ ಈ ವಿಶೇಷ ಕುರ್ಚಿಯನ್ನೂ ತಂದಿದ್ರು. ಈ ಸಂದರ್ಭದಲ್ಲಿ ಅಂದಿನ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ಕರ್ನಾಟಕದ ಒಂದು ಹನಿ ನೀರನ್ನು ತಮಿಳುನಾಡಿಗೆ ಕೊಡಲು ಸಾಧ್ಯವಿಲ್ಲ ಎಂದಾಗ ಜಯಾ ಸಭೆಯ ಅರ್ಧದಲ್ಲೆ ಎದ್ದು ಹೊರ ನಡೆದಿದ್ದರು.
https://www.youtube.com/watch?v=Bm_Gf09eiMY
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಸಂಜನಾ ಐ ಲವ್ ಯೂ ಎಂದ ಪ್ರಥಮ್..! ಆಕೆ ಕೊಟ್ಟ ಉತ್ತರ ಏನು..?
ಸಿಎಂ ಜಯಲಲಿತಾ ಹೃದಯಾಘಾತಕ್ಕೆ ಕಾರಣವೇನು..?
ಎಚ್ಚರ ಗ್ರಾಹಕರೇ..! ಜಸ್ಟ್ 6 ಸೆಂಕೆಂಡ್‍ನಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗುತ್ತೆ..!!
ಬಿಗ್‍ಬಾಸ್‍ನ ಹೊಸ ಕಂಟೆಸ್ಟೆಂಟ್ ಮಸ್ತಾನ್ ಭಾಯ್ ಯಾರು ಗೊತ್ತಾ..?
ವೆಬ್ ಹುಡುಕಾಟದಲ್ಲಿ ಜನರು ಯಾರ ಹೆಸರನ್ನು ಅತೀ ಹೆಚ್ಚಾಗಿ ಬಳಸಿದ್ದಾರೆ ಗೊತ್ತಾ..?