ಅವನು ಮಂಗಳೂರ ಹುಡುಗ, ಹೀಗೆ ತನ್ನ ನೋವು ಹೇಳ್ಕೋತಾನೆ..! ಬೆಂಗಳೂರಿನ ಪ್ರತಿಷ್ಟಿತ ಆಫೀಸೊಂದರಲ್ಲಿ ಅವನಿಗೆ ಒಳ್ಳೇ ಕೆಲಸ, ಕೈತುಂಬಾ ಸಂಬಳ..! ಎಲ್ಲರ ಜೊತೆ ಬಾಯಿ ತುಂಬಾ ಮಾತಾಡ್ತಿದ್ದ..! ಆಫೀಸಿನಲ್ಲಿ ಎಲ್ಲರಿಗೂ ಅವನಂದ್ರೆ ಸಖತ್ ಇಷ್ಟ.. ಎಲ್ಲರ ಮನೆಯ ಊಟದಲ್ಲೂ ಅವನಿಗೆ ಪಾಲಿತ್ತು..! ಅವತ್ತು ಜೂನ್ ತಿಂಗಳ ಮೊದಲ ಶುಕ್ರವಾರ ಅವಳು ಬಂದು ರೆಸೆಪ್ಷನ್ ನಲ್ಲಿ ಕೂತಿದ್ಲು. ನೊಡೋಕೆ ಲಕ್ಷಣವಾಗಿದ್ಲು. ಸ್ನಾನ ಮುಗಿದರೂ ಅವಳ ತಲೆಗೆ ಹಾಕಿದ್ದ ಎಣ್ಣೆ ಪಸೆ ಹಾಗೇ ಇತ್ತು..! ಅದರ ಒಂದು ಬದಿಯಲ್ಲಿ ಕ್ಲಿಪ್ಪಿಗೆ ಸಿಕ್ಕಿಹಾಕ್ಕೊಂಡಿದ್ದ ಮಲ್ಲಿಗೆ ಹೂವು..! ಇವನ ಕಣ್ಣಿಗೆ ಬಿದ್ದ ಆ ಹುಡುಗಿ ಇಂಟರೆಸ್ಟಿಂಗ್ ಅನ್ಸಿದ್ಲು..! ಯಾರು ಬೇಕು ಅಂತ ಕೇಳ್ದ, ಮನೋಜ್ ಅವರನ್ನು ನೋಡ್ಬೇಕು ಅಂತ ಹೇಳಿದ್ಲು ಅವಳು..`ಯೆಸ್ ನಾನೇ ಮನೋಜ್..!’ ಅಂದ..! ಪ್ರವೀಣ್ ನಿಮ್ಮನ್ನು ಮೀಟ್ ಮಡೋಕೆ ಹೇಳಿದ್ರು ಅಂದ್ಲು..! ಓ ಅದು ನೀವೇನಾ..? ನಿಮ್ಮ ಹೆಸರು ಸುಮ ಅಲ್ವಾ..? ಅಂತ ಅವಳನ್ನು ಆಫೀಸಿನ ಒಳಗೆ ಕರ್ಕೊಂಡ್ ಹೊರಟ.. ಕೂತು ಮಾತಾಡುವಾಗ ಅವಳು ಹೇಳಿದ್ಲು.. ` ನಾನು ಚಿಕ್ಕಮಗಳೂರಿನ ಸಮೀಪದ ಒಂದು ಹಳ್ಳಿಯಿಂದ ಬಂದಿದೀನಿ, ಡಿಗ್ರಿ ಆಗಿದೆ. ಇಂಗ್ಲೀಷ್ ಅಷ್ಟಾಗಿ ಬರಲ್ಲ, ಕಷ್ಟಪಟ್ಟು ಕೆಲಸ ಮಾಡ್ತೀನಿ, ನಂಗೊಂದು ಕೆಲಸ ಕೊಡಿ’..! ಅವಳ ಮುಗ್ದತೆಗೆ ಇವನು ಕ್ಲೀನ್ ಬೋಲ್ಡ್ ..! ಅವನ ಬಾಸ್ ಇವನಿಗೆ ಸಖತ್ ಆಪ್ತ..! ಸಾರ್ ನನ್ನ ಟೀಮಲ್ಲೇ ಟ್ರೇನ್ ಮಾಡ್ತೀನಿ, ಪ್ಲೀಸ್ ಅವಳಿಗೊಂದು ಕೆಲಸ ಕೊಡಿ ಅಂತ ಕೇಳ್ದ..! ಅವನ ಬಾಸ್ ಇಲ್ಲ ಅನ್ನಲಿಲ್ಲ..! ಅಷ್ಟೆ ಅದರ ಮಾರನೇ ದಿನ ಅವಳು ಆಫೀಸಿನ ಎಂಪ್ಲಾಯ್..!
ಅವನು ಅವಳನ್ನು ತಿದ್ದೋ ಕೆಲಸ ಶುರು ಮಾಡ್ದ, ಅವನ ಕೆಲಸ ಬೇಗಬೇಗ ಮುಗಿಸಿ ಅವಳನ್ನು ಕೂರಿಸಿಕೊಂಡು ಇಂಗ್ಲೀಷ್ ಹೇಳಿಕೊಟ್ಟ, ಬೋಲ್ಡ್ ಆಗಿ ಮಾತಾಡೋದು ಹೇಳಿಕೊಟ್ಟ, ಅವಳು ನೋಡನೋಡ್ತಿದ್ದ ಹಾಗೇ ಬದಲಾಗ್ತಾ ಹೋದ್ಲು..! ಇನ್ನು ಅವಳನ್ನು ಬೆಂಗಳೂರಿನ ಸ್ಟೈಲಿಗೆ ಬದಲಾಯಿಸೋ ಕೆಲ ಬಾಕಿ ಇತ್ತು..! ಅದಕ್ಕೆ ಮುಂಚೆ ತನ್ನ ಮನಸ್ಸಿನಲ್ಲಿರೋದನ್ನು ಹೇಳಿಬಿಡ್ತೀನಿ ಅಂತ ಡಿಸೈಡ್ ಮಾಡಿ ಅವಳ ಎದುರು ನಿಂತ..` ಸುಮ ಐ ಲವ್ ಯೂ, ನಿಮ್ಮನ್ನ ಮದ್ವೆ ಆಗ್ಬೇಕು ಅನ್ಕೊಂಡಿದೀನಿ..!’ ಅವಳು ಮುಖಮುಖ ನೋಡಿದ್ಲು..! `ತಮಾಷೆ ಮಾಡಬೇಡಿ’ ಅಂದ್ಲು… `ಐ ಆಮ್ ವೆರಿ ಸೀರಿಯಸ್’ ಅಂದ..! ಅವಳು ಮೀ ಟೂ ಅಂತ ನಾಚಿ ಅಲ್ಲಿಂದ ಹೊರಟೇ ಬಿಟ್ಲು.. ಇವನ ಖುಷಿಗೆ ಏನು ಹೇಳಬೇಕು..! ಇಂತಹ ಮುದ್ದಾದ ಹುಡುಗಿ ನಂಗೆ ಸಿಕ್ಕಿದ್ರೆ ಅದೇ ಅದೃಷ್ಟ ಅಂತ ಅವಳನ್ನು ಕರ್ಕೊಂಡು ಒಂದು ಬ್ಯೂಟಿ ಪಾರ್ಲರ್ ಒಳಗೆ ಬಿಟ್ಟ..! ಅವಳು ಅಲ್ಲಿಂದ ಹೊರಗೆ ಬರುವಾಗ ಹಳ್ಳಿ ಸುಮ ಆಗಿರಲಿಲ್ಲ, ಮಾರ್ಡನ್ ಸುಮ ಆಗಿದ್ಲು.. ನಂಬೋಕೆ ಸಾಧ್ಯವಿಲ್ಲದ ಹಾಗೆ ಅವಳ ಚೇಂಜ್ ಓವರ್ ಆಗಿತ್ತು.. ಅಲ್ಲಿಂದ ಒಂದು ಬಟ್ಟೆ ಶೋರೂಂಗೆ ಕರ್ಕೊಂಡು ಹೋಗಿ ಅವಳಿಗೆ 20-30 ಸಾವಿರದಷ್ಟು ಬಟ್ಟೆ ಕೊಡಿಸ್ದ..! ಅದಾದ ಮೇಲೆ ಅವಳ ಲುಕ್, ಲೈಫ್ ಎಲ್ಲಾ ಚೇಂಜ್ ಆಗೋಯ್ತು.. ತಾನು ಮದ್ವೆ ಆಗೋ ಹುಡುಗಿ ಅಂದಮೇಲೆ ಅವಳಿಗೆ ಖಚರ್ು ಮಾಡೋಕೆ ಅವನು ಹಿಂದೆಮುಂದೆ ನೋಡಲೇ ಇಲ್ಲ..! ಅವಳ ಪಿ.ಜಿ ಫೀಸ್, ಊಟದ ಖಚರ್ು, ಪಿಕಪ್ ಡ್ರಾಪಗ್ ಎಲ್ಲಾ ಮನೋಜ್ ನೋಡ್ಕೋತಿದ್ದ. ಟೋಟಲಿ ಅವಳ ಪ್ರೀತಿಯಲ್ಲಿ ಮನೋಜ್ ಮುಳುಗಿ ಹೋಗಿದ್ದ..! ಹೀಗೇ ದಿನಗಳು ಕಳೀತು.. ಮನೋಜ್ ತನ್ನ ಮನೆಯವರಿಗೆಲ್ಲಾ ಮಾತನಾಡಿಸಿ ಮದ್ವೆಗೆ ಒಪ್ಪಿಸಿದ್ದ..! ಟೈಂ ಬಂದಾಗ ತಾನೂ ಮನೇಲಿ ಒಪ್ಪಿಸ್ತೀನಿ ಅಂದಿದ್ಲು ಸುಮ..! ಹೀಗೇ ಒಂದು ವರ್ಷ ಕಳೀತು, ಅವನಿಗೆ ಮತ್ಯಾವುದೋ ಕಂಪನಿಯಲ್ಲಿ ಕೆಲಸ ಸಿಗ್ತು.. ಆದ್ರೂ ಪ್ರೀತಿ ಹಾಗೇ ಸಾಗ್ತಾ ಇತ್ತು..! ಆದ್ರೆ ಇದ್ದಕ್ಕಿದ್ದ ಹಾಗೇ ಸುಮ ಮನೋಜ್ ಗೆ ಫೋನ್ ಮಾಡೋದು ಕಮ್ಮಿ ಮಾಡಿಬಿಟ್ಲು.. ಯಾವಾಗ ಫೋನ್ ಮಾಡಿದ್ರು `ಐ ಆಮ್ ಬಿಜಿ’ ಅಂತ ರಿಪ್ಲೆ ಬತರ್ಿತ್ತು..! ಆದ್ರೆ ಅವಳ ಪ್ರಪಂಚ ಚೇಂಜ್ ಆಗಿತ್ತು..! ಬೈಕಿನ ಹಿಂದೆ ಕೂತು ಸುಮಳಿಗೆ ಬೋರ್ ಆಗಿತ್ತು..! ಅವಳಿಗೆ ಮತ್ಯಾರದೋ ಪ್ರಪೋಸಲ್ ಬಂದಿತ್ತು, ಅವನ ಬಿ.ಎಂ.ಡಬ್ಲೂ ಕಾರು ನೋಡಿ ಒಪ್ಪಿಕೊಳ್ಳದೇ ಇರೋಕೆ ಚಾನ್ಸ್ ಇಲ್ಲ..! ಓಕೆ ಅಂದವಳು ಅವನ ಜೊತೆ ಬಾರ್, ಪಬ್ ಅಂತ ಹೊಸ ಪ್ರಪಂಚದಲ್ಲಿ ಮುಳುಗಿದ್ಲು..! ಮನೋಜ್ ಫೋನ್ ಮಾಡಿದ್ರೆ ಇವಳಿಗೆ ಇರಿಟೇಟ್ ಆಗ್ತಿತ್ತು..! ಬದುಕು ರೂಪಿಸಿದವನು ಬೇಡವಾಗಿಬಿಟ್ಟಿದ್ದ..! ಅವತ್ತು ಸಂಜೆ ಎಲ್ಲಾದ್ರೂ ಹೊರಗೆ ಹೋಗೋಣ ಅಂತ ಮನೋಜ್ ಡಿಸೈಡ್ ಮಾಡಿದ್ದ..! ಅದಕ್ಕೇ ಅವಳಿಗೆ ಹೇಳೋಣ ಅಂತ ನೂರು ಸಲ ಕಾಲ್ ಮಡಿದ್ದ, ಅವತ್ತೇ ಜ್ವರ ಅಂತ ಹೇಳಿದ್ದಕ್ಕೆ ಅವಳ ಪಿ.ಜಿ ಹತ್ತಿರ ಹೋಗಿ ಮಳೆಯಲ್ಲಿ ಗಂಟೆಗಟ್ಲೆ ಕಾದಿದ್ದ..! ಆದ್ರೆ ಅವನು ನೋಡಿದ್ದೇ ಬೇರೆ..! ಏನು ಮಾಡಬೇಕೋ ಗೊತ್ತಾಗಲಿಲ್ಲ..! ತನ್ನ ಹುಡುಗಿ ತನಗೆ ಕೈಕೊಟ್ಟಿದ್ದು ಗೊತ್ತಾಗಿಹೋಗಿತ್ತು..! ಅವಳಿಗೆ ಹೋಗಿ ಕೆನ್ನೆಗೆ ಬಾರಿಸಿ ಕೋಪ ತೋರಿಸ್ಕೋಬೇಉ ಅನ್ನಿಸ್ತು..! ಮನಸಾಗಲಿಲ್ಲ…. ಹೋಗಿ ಅವಳ ಕಾಲು ಹಿಡಿದು `ನಂಗೆ ಮೋಸ ಮಾಡ್ಬೇಡ ಅಂತ ಅಳಬೇಕು ಅನ್ನಸ್ತು’..! ಮನಸಾಗಲಿಲ್ಲ… ಮನಸ್ಸು ಬೇರೆ ಹೇಳ್ತು.. `ಮನೋಜ್, ಅವಳು ನಿನ್ನಂತಹ ಹುಡುಗನಿಗೆ ಸರಿ ಹೊಂದಲ್ಲ, ಹೋಗು ನೀನು ಅವಳನ್ನು ಪ್ರೀತಿಸೋ ಬದಲು, ನಿನ್ನ ಬದುಕು ಪ್ರೀತಿಸು..!’ ಅಷ್ಟೆ..! ಮನಸ್ಸಿನ ಮತು ಕೇಳಿ ಅಲ್ಲಿಂದ ಹೊರಟವನು ಮತ್ಯಾವತ್ತೂ ಅವಳಿಗೆ ಫೋನ್ ಮಡಲಿಲ್ಲ.. ಮೆಸೇಜ್ ಮಾಡಲಿಲ್ಲ..! ಅವಳೀಗ ಮೂರು ಹುಡುಗರನ್ನು ಬದಲಿಸಿ, ಎಲ್ಲೂ ಬದುಕು ಸಿಗದೇ, ಮನೆಯವರಿಂದಲೂ ದೂರಾಗಿ ಅತಂತ್ರವಾಗಿದ್ದಾಳೆ..! ಅತ್ತ ಅವನು, ಮನೆಯಲ್ಲಿ ತೋರಿಸಿದ ಹುಡುಗಿಯನ್ನು ಮದುವೆಯಾಗಿ ನೆಮ್ಮದಿಯಾಗಿ ಜೀವನ ನಡೆಸ್ತಿದ್ದಾನೆ..! ಏನೂ ಇಲ್ಲದವಳನ್ನು ಅವನು ಏನೋ ಮಾಡಿದ. ಏನೋ ಆದವಳು ಅವನಿಗೆ ಮೋಸ ಮಾಡಿ ಇನ್ನೇನೋ ಆದಳು..!