ವೈದ್ಯೆ ಆತ್ಮಹತ್ಯೆ; ಬಲವಂತದಿಂದ ಡೆತ್ ನೋಟ್ ಬರೆಸಲಾಯಿತೇ…?

Date:

ಕಾನ್ಫರೆನ್ಸ್ ಗೆಂದು ಕೊಚ್ಚಿಗೆ‌ ಹೋಗಿದ್ದ 26 ವರ್ಷದ ವೈದ್ಯೆಯೊಬ್ಬರು ಆತ್ಮಹತ್ಯೆಗೆ‌ ಶರಣಾಗಿದ್ದಾರೆ.‌ ಮಮತಾ ರೈ ಸಾವನ್ನಪ್ಪಿರೋ ಯುವತಿ.


ದೆಹಲಿಯ ಆಲ್ ಇಂಡಿಯಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಎಐಎಮ್ ಎಸ್) ವಿದ್ಯಾರ್ಥಿನಿ ಮಮತಾ ಅವರು ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಅಲ್ಲಿಯೇ ಕೆಲಸಕ್ಕೆ ಸೇರಿಕೊಂಡಿದ್ದರು.


ಜಾರ್ಖಂಡ್ ‌ ಜೆಮ್ಶೆಡ್ ಪುರದವರಾದ ಮಮತ ಜನವರಿ 18ರಂದು‌ ಕಾನ್ಫರೆನ್ಸ್ ಪ್ರಯುಕ್ತ ಕೊಚ್ಚಿಗೆ ಹೋಗಿದ್ರು. 22ರವರೆಗೆ ಅಲ್ಲಿಯೇ ಇರ್ಬೇಕಿತ್ತು. ಕೊಚ್ಚಿ ಹೋಟೆಲ್ ನಲ್ಲಿ ರೂಂ ಮಾಡಿದ್ದರು.


ಸೀಲಿಂಗ್ ಫ್ಯಾನ್ ಗೆ ನೇಣು ಬಿಗದ ಸ್ಥಿತಿಯಲ್ಲಿ ಇವರ ಮೃತ ದೇಹ ಪತ್ತೆಯಾಗಿದೆ.ರೂಂನಲ್ಲಿ ಡಿಪ್ರೆಷನ್ ಮಾತ್ರೆಗಳು ಸಹ ಪತ್ತೆಯಾಗಿವೆ. ಡೆತ್ ನೋಟ್ ಸಿಕ್ಕಿದ್ದು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರೋದಾಗಿ‌ ಮಮತಾ ಬರೆದಿದ್ದಾರೆ. ಮೃತೆ‌ ಮಮತಾ ಅವರ ಪೋಷಕರು ತನಿಖೆಗೆ ಆಗ್ರಹಿಸಿದ್ದಾರೆ.


ಮಮತಾ ಟಾಪರ್.‌ ಏಮ್ಸ್ ನಲ್ಲಿ ಚಿನ್ನದ ಪದಕ‌ ಪಡೆದಿದ್ದಾಳೆ. ಅಂತರರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಹಾಗೂ ಸಮ್ಮೇಳನಗಳಲ್ಲಿ ಪ್ರಶಸ್ತಿ ಪಡೆದಿದ್ದಳು. ಅವಳು ಸೂಸೈಡ್ ಮಾಡಿಕೊಳ್ಳೋಕೆ ಸಾಧ್ಯವೇ ಇಲ್ಲ. ಇದೊಂದು ಪಿತೂರಿ ಎಂದು ತಂದೆ ಆರೋಪಿಸುತ್ತಿದ್ದಾರೆ.


ಮಮತಾ ಗೆ ಏಮ್ಸ್ ನ ಡಾ. ಸಂಜಯ್ ಹಾಗೂ ಆತನ ಸ್ನೇಹಿತರಾದ ಅಲೋಕ್ ಮತ್ತು ನೇಹಾ ಕಿರುಕುಳ ನೀಡಿದ್ದಾರೆ. ಸಂಜಯ್ ಮಮತಾ ಗೆ ಮದುವೆ ಆಗುವಂತೆ ಕೇಳಿದ್ದ. ಅದಕ್ಕೆ ಆಕೆ ನಿರಾಕರಿಸಿದ್ದಳು. ಜನವರಿ 2ರಂದು ಆತ ಮಮತಾ ಮೇಲೆ ದಾಳಿ ಮಾಡಿದ್ದ.

ಆತನಿಂದ ಆಕೆಗೆ ಬೆದರಿಕೆ ಇತ್ತು. ಜನವರಿ 19 ರಂದು ಈ ಬಗ್ಗೆ ನನ್ನೊಂದಿ ಮಾತಾಡಿದ್ದಳು.‌ಕಾನ್ಫರೆನ್ಸ್ ನಿಂದ ಬಂದ್ಮೇಲೆ ಮಾತಾಡ್ತೀನಿ ಅಂದಿದ್ದಳು.‌ಸ್ನೇಹಿತೆ ರಿಮಿಗೆ ಬೆಳಗ್ಗೆ 10.30ಕ್ಕೆ ಫೋನ್ ಮಾಡಿ ತಾನು ಈಗಲೇ‌ ಕೊಚ್ಚಿಯಿಂದ ಹೊರಡಬೇಕೆಂದು ಅತ್ತಿದ್ದಳು. ಡಾ. ಸಂಜಯ್ ಆಕೆಯಿಂದ ಬಲವಂತವಾಗಿ ಡೆತ್ ನೋಟ್ ಬರೆಸಿ ನೇಣು ಹಾಕಿಕೊಳ್ಳುವಂತೆ ಮಾಡಿದ್ದಾನೆ ಎಂದು ತಂದೆ‌ ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ!

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ! ಬೆಂಗಳೂರು: ಬಾಗಲಗುಂಟೆ...

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು!

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು! ಬೆಂಗಳೂರು: ಬಾರ್‌ಗೆ ಕುಡಿಯಲು...

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ 

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ  ಬೆಂಗಳೂರು: ರಾಜ್ಯದ...

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ ಸೇವಿಸಿ

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ...