ನಟ-ನಟಿಯರದ್ದು ಬಣ್ಣದ ಲೋಕ..! ಸಿನಿಮಾ, ಧಾರವಾಹಿಗಳಲ್ಲಿ ನಟಿಸ್ತಾ ಇದ್ದಾರೆ ಅಂದ್ರೆ ಅವ್ರು ಆರಾಮಾಗಿರ್ತಾರೆ..! ಅವ್ರಿಗೆ ಯಾವ್ದೇ ಕಷ್ಟಗಳಿರಲ್ಲ ಅಂತ ಅನ್ಕೊಂಡಿರೋರು ತುಂಬಾ ಮಂದಿ..! ಆದ್ರೆ, ವಾಸ್ತವವೇ ಬೇರೆ..! ನಟ-ನಟಿಯರ ಬಣ್ಣದ ಬದುಕಿನ ಹಿಂದೆ ಹೇಳಿಕೊಳ್ಳಲಾಗದ ಕಷ್ಟಗಳಿಗೆ..! ಮಾಸಿದ ಬದುಕು ಅವರದ್ದಾಗಿರುತ್ತೆ..!
ಅಂತೆಯೇ ಮಲೆಯಾಳಂನ ಜನಪ್ರಿಯ ನಟಿ ಕವಿತಾ ಲಕ್ಷ್ಮೀ ಅವ್ರ ಬದುಕೂ ಕೂಡ ನೆರಳು-ಬೆಳಕಿನಾಟ..! ಮಲೆಯಾಳಂ ಧಾರವಾಹಿಗಳ ಮೂಲಕ ಮನೆ ಮಾತಾಗಿರೋ ಕವಿತಾ ಲಕ್ಷ್ಮೀ ತನ್ನ ಮಗನಿಗೆ ವಿದ್ಯಾಭ್ಯಾಸ ಕೊಡಿಸೋಕೆ ಎಷ್ಟೆಲ್ಲಾ ಕಷ್ಟ ಪಡ್ತಿದ್ದಾರೆ ಗೊತ್ತಾ..? ಇವ್ರ ಕತೆಯನ್ನು ಕೇಳಿದ್ರೆ ನಿಮಗೆ ಅಚ್ಚರಿಯೂ ಆಗುತ್ತೆ..ಅದೇ ಕ್ಷಣದಲ್ಲಿ ಬೇಜಾರ್ ಕೂಡ ಆಗುತ್ತೆ..! ಅಯ್ಯೋ ಪಾಪಾ ಅಂತೀರ…!
ಕವಿತಾ ಅವ್ರು 13 ವರ್ಷಗಳ ಹಿಂದೆಯೇ ಗಂಡನಿಂದ ವಿಚ್ಛೇದನ ಪಡೆದಿದ್ದು, ತನ್ನ ಇಬ್ಬರು ಮಕ್ಕಳ ಜವಬ್ದಾರಿಯನ್ನು ತಾನೇ ಹೊತ್ತುಕೊಂಡಿದ್ದಾರೆ..! ತಮ್ಮ ಮಗನಿಗೆ ವಿದೇಶದಲ್ಲಿ ಎಜುಕೇಷನ್ ಕೊಡ್ಸ್ ಬೇಕು ಅಂತ ಆಸೆಪಟ್ಟ ಕವಿತಾ ಏಜೆಂಟ್ ಒಬ್ರ ಬಳಿ ಹೋಗ್ತಾರೆ..! ಆ ಏಜೆಂಟ್ ಕವಿತಾ ಅವ್ರ ಮಗನಿಗೆ ಇಂಗ್ಲೆಂಡ್‍ನಲ್ಲಿ ಶಿಕ್ಷಣ ಕೊಡ್ಸೋ ಬಗ್ಗೆ ಮಾಹಿತಿ ನೀಡ್ತಾರೆ. ಅಷ್ಟೇ ಅಲ್ಲದೇ ಅಲ್ಲಿ ಓದ್ತಾ ಓದ್ತಾ ನೇ ಪಾಲ್‍ಟೈಮ್ ಕೆಲ್ಸ ಮಾಡಿ ಗಂಟೆಗೆ 10 ಪೌಂಡ್ (860.45 ರೂ) ಹಣವನ್ನು ಅವ್ನೇ ಸಂಪಾದಿಸಬಹುದು ಅಂತ ಬೊಗಳೆ ಕೂಡ ಬಿಟ್ಟಿದ್ದ..! ಇದನ್ನು ನಂಬಿದ ಕವಿತಾ 1 ಲಕ್ಷ ರೂ ನೀಡಿ ಮಗನನ್ನು ಇಂಗ್ಲೆಂಡ್‍ಗೆ ಕಳುಹಿಸಿಕೊಟ್ಟಿದ್ರು..! ಅಲ್ಲಿಗೆ ಹೋದಮೇಲೆ ಗೊತ್ತಾಯ್ತು.. ಗಂಟೆಗೆ 10 ಪೌಂಡ್ ಸಿಗೋ ಪಾಲ್‍ಟೈಮ್ ಕೆಲ್ಸ ಮಾಡಿ ಓದೋದ್ ಅಸಾಧ್ಯ ಅಂತ. ಆದ್ರೆ, ಕವಿತಾ ಮಗನ ವಿದ್ಯಾಭ್ಯಾಸ ಅರ್ಧಕ್ಕೆ ಸ್ಟಾಪ್ ಆಗ್ಬಾರ್ದು, ಮಗನಿಗೆ ಪ್ರತಿ 6 ತಿಂಗಳಿಗೆ ನಡೆಯುವ ಸೆಮಿಸ್ಟರ್ ಎಕ್ಸಾಮ್‍ಗೆ ಫೀಸ್ ಕಟ್ಟೋಕೆ ಹಾಗೂ ಅಲ್ಲಿನ ಖರ್ಚುವೆಚ್ಚಗಳಿಗೆ ಹಣ ನೀಡೋಕೋಸ್ಕರವಾಗಿ ಹೈವೇ ಬದಿ ಕ್ಯಾಂಟಿನ್ ತೆರೆದಿದ್ದಾರೆ..! ಆರಂಭದಲ್ಲಿ ಗ್ರಾನೈಟ್ ಶೋರೂಂ ತೆರೆದು ಲಾಸ್ ಮಾಡಿಕೊಂಡ ಬಳಿಕ ಸ್ಟ್ರೀಟ್ ಕ್ಯಾಂಟಿನ್ ತೆರೆದು ಮಗನಿಗೆ ವಿದ್ಯಾಭ್ಯಾಸವನ್ನು ನೀಡ್ತಾ ಇದ್ದಾರೆ ಕವಿತಾ..
ಇದು ಬಣ್ಣದ ಲೋಕದವರ ಪರದೆ ಹಿಂದಿನ ರಿಯಲ್ ಸ್ಟೋರಿಗೆ ಉದಾಹರಣೆ ಮಾತ್ರ. ಹುಡುಕುತ್ತಾ ಹೋದರೆ.. ತುಂಬಾ ಜನ ಕವಿತಾ ಲಕ್ಷ್ಮೀ ನಮಗೆ ಸಿಗ್ತಾರೆ.