ಅನೈತಿಕ ಸಂಬಂಧ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
ಅನೈತಿಕ ಸಂಬಂಧಕ್ಕೆ ಶಿಕ್ಷೆ ನೀಡಲು ಅವಕಾಶವಿದ್ದ ಐಪಿಸಿ ಸೆಕ್ಷನ್ 497ನ್ನು ರದ್ದು ಮಾಡಿ ಸುಪ್ರೀಂ ಕೋರ್ಟ್ ಇಂದು ತೀರ್ಪು ಪ್ರಕಟಿಸಿದೆ.
ಅನೈತಿಕ ಸಂಬಂಧ ಅಸಂತುಷ್ಟ ದಾಂಪತ್ಯಕ್ಕೆ ಕಾರಣವಾಗದೇ ಇರಬಹುದು. ಆದ್ರೆ ಅಸಂತುಷ್ಟ ದಾಂಪತ್ಯ ಅನೈತಿಕ ಸಂಬಂಧಕ್ಕೆ ಎಡೆ ಮಾಡಿಕೊಡಬಹುದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ.
ಮದುವೆಯಾದ ನಂತರ ಮಹಿಳೆ ತನ್ನ ಲೈಂಗಿಕ ಸ್ವಾಯತ್ತತೆಯನ್ನು ಗಂಡನಿಗೆ ಅರ್ಪಿಸುವುದಿಲ್ಲ. ದಾಂಪತ್ಯದಲ್ಲಿ ಗಂಡ ಅಥವಾ ಹೆಂಡತಿ ತಮ್ಮ ಲೈಂಗಿಕತೆಯನ್ನು ಅಡ ಇಡುವುದಿಲ್ಲ. ಮದುವೆ ನಂತರ ತನ್ನ ಒಪ್ಪಿಗೆಯಂತೆ ಬೇರೊಬ್ಬ ಪುರುಷನೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಆಯ್ಕೆಗೆ ಕಡಿವಾಣ ಹಾಕಬಾರದು ಎಂದು ಕೋರ್ಟ್ ಹೇಳಿದೆ.