ಆರೋಗ್ಯವಂತ ಮಗುವಿಗಾಗಿ ಸ್ವಂತ ಮಗುವನ್ನೇ ಕೊಂದ ದಂಪತಿ‌…!

admin
By admin
1 Min Read

ಮಂತ್ರವಾದಿಯ ಮಾತು ಕೇಳಿ, ಆರೋಗ್ಯವಂತ ಮಗು ಪಡೆಯಲು ತಮ್ಮ ಸ್ವಂತ ಮಗಳನ್ನೇ ದಂಪತಿ ಕೊಲೆ ಮಾಡಿ , ಮನೆಯಲ್ಲಿ ಹೂತಿಟ್ಟ ಘಟನೆ ಉತ್ತರ ಪ್ರದೇಶದ ಮೊರದಬಾದ್ ನಲ್ಲಿ ನಡೆದಿದೆ.
ಅಪೌಷ್ಟಿಕತೆ ಮತ್ತು ರಿಕೆಟ್ಸ್ ಕಾಯಿಲೆಯಿಂದ ಬಳಲುತ್ತಿದ್ದ ತಾರಾ (6) ಅಪ್ಪ-ಅಮ್ಮನಿಂದಲೇ ಕೊಲೆಯಾದ ದುರ್ದೈವಿ.
ಅನಾರೋಗ್ಯದಿಂದ ಬಳಸುತ್ತಿದ್ದ ತಾರಾಗೆ ಎಷ್ಟೇ ಚಿಕಿತ್ಸೆ ಕೊಡಿಸಿದರೂ ಆಕೆ ಗುಣಮುಖಳಾಗಿರಲಿಲ್ಲ.‌ ಇದರಿಂದ ಪೋಷಕರು ಮಂತ್ರವಾದಿಯೊಬ್ಬನ ಬಳಿ ಹೋಗಿದ್ದಾರೆ.

ಆ ಪಾಪಿ ‘ನಿಮ್ಮ ಮಗಳನ್ನು ಕೊಂದು ಮನೆಯಲ್ಲಿ ಹೂತು ಹಾಕಿದರೆ ಮುಂದೆ ಆರೋಗ್ಯವಂತ ಮಗು ಹುಟ್ಟುತ್ತದೆ ಎಂದು ಹೇಳಿದ್ದಾನೆ. ಅವನ ಮಾತಿನಂತೆ ಏನೂ ಅರಿಯದ ಕಂದಮ್ಮ ತಾರಾಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ಮನೆಯಲ್ಲಿ ಹೂತುಹಾಕುವಾಗ ನೆರೆಮನೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಪ್ರಕರಣ ಬೆಳಕಿಗೆ ಬಂದಿದೆ‌ .‌
ಮರಣೋತ್ತರ ಪರೀಕ್ಷೆಯಿಂದ ತಾರಾ ಸಾಯುವಾಗ ಯಾವುದೇ ಆಹಾರ ಸೇವಿಸಿರಲಿಲ್ಲ.‌ ಒದ್ದಾಡಿ ಒದ್ದಾಡಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ‌.

Share This Article