ನವದೆಹಲಿ : ಎಷ್ಟೇ ಚೆನ್ನಾಗಿ ಆಡ್ತಾ ಇದ್ರು ತಂಡದಲ್ಲಿ ಖಾಯಂ ಸ್ಥಾನ ಪಡೆಯದ ಕ್ರಿಕೆಟಿಗ ಅಜಿಂಕ್ಯಾ ರಹಾನೆ. ಅವಕಾಶ ಸಿಕ್ಕಾಗಲೆಲ್ಲಾ ತನ್ನ ತಾಕತ್ತೇನು ಎಂಬುದನ್ನು ಸಾಭೀತುಪಡಿಸುತ್ತಿರುವ ಒಳ್ಳೆಯ ಕ್ರಿಕೆಟಿಗ. ಇತ್ತೀಚೆಗೆ ಮುಕ್ತಾಯವಾದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ 4 ಅರ್ಧ ಶತಕಗಳಿಸಿದರು. ಇಷ್ಟಾದರೂ ಆಸೀಸ್ ವಿರುದ್ಧದ ಟಿ-20 ಸರಣಿಗೆ ಇವರನ್ನು ಆಯ್ಕೆಮಾಡಿಲ್ಲ. ಇದು ಕ್ರಿಕೆಟ್ ಅಭಿಮಾನಿಗಳಲ್ಲಿ, ಅದರಲ್ಲಿಯೂ ಯುವ ಕ್ರಿಕೆಟಿಗ ರಹಾನೆ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಉತ್ತಮ ಫಾರ್ಮ್‍ನಲ್ಲಿದ್ದರೂ ರಹಾನೆ ಅವರನ್ನು ಕಡೆಗಾಣಿಸಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿಯೂ ಹೌದು.
ಇದೀಗ ರಹಾನೆ ಈ ಬಗ್ಗೆ ಕೊನೆಗೂ ಮೌನ ಮುರಿದು ತುಟಿ ಬಿಚ್ಚಿದ್ದಾರೆ. ಟಿ.20ಗೆ ತಮ್ಮನ್ನು ಆಯ್ಕೆ ಮಾಡದಿರುವ ಬಗ್ಗೆ ಮಾತನಾಡಿರುವ ಅಜಿಂಕ್ಯ ರಹಾನೆ ಆಯ್ಕೆಗಾರರ ನಿರ್ಧಾರ ಗೌರವಿಸುತ್ತೇನೆ. ನಾವು ಹೆಚ್ಚಿನ ಪಂದ್ಯಗಳನ್ನು ಆಡುತ್ತಿದ್ದೇವೆ. ಆರೋಗ್ಯಕರ ಸ್ಪರ್ಧೆ ತಂಡದಲ್ಲಿದ್ದು, ಇದು ಹೆಚ್ಚಾದಂತೆ ಇನ್ನಷ್ಟು ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತನ್ನ ಆಟದ ಬಗ್ಗೆ ತೃಪ್ತಿಯನ್ನು ಹೊಂದಿರುವ ರಹಾನೆ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ. ನನಗೆ ನೀಡುವ ಜವಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ನ್ಯಾಯ ಒದಗಿಸಲು ಪ್ರಯತ್ನ ಮಾಡ್ತೀನಿ’ಅಂತ ಹೇಳಿದ್ದಾರೆ.