ಹತ್ತು ವರ್ಷ ವಯಸ್ಸಿನಲ್ಲೇ ನನ್ನ ತಾಯಿ ಶಾಲೆಯನ್ನು ಬಿಟ್ಟಳು, ತುತ್ತು ಅನ್ನಕ್ಕಾಗಿ ಅಜ್ಜಿಯ ಜೊತೆ ಇಡ್ಲಿ ಮಾರಲು ಆರಂಭಿಸಿದವಳು.!

Date:

ನನ್ನ ಅಜ್ಜಿ… ಹೆಸರು ಲಕ್ಷ್ಮಿ ಅಮ್ಮಾಳ್.. ತಮಿಳು ನಾಡಿನ ವಿರುಧು ನಗರ್ ಜಿಲ್ಲೆಯ ಒಂದು ಸಣ್ಣ ಗ್ರಾಮವಾದ ಕೊಟ್ಟಾಯೂರ್‍ನಲ್ಲಿ ಬೆಳೆದವಳು. ಈಕೆ ಮದುವೆಯಾಗಿದ್ದು 1961ರಲ್ಲಿ. ಮದುವೆಯಾದ ಕೆಲವು ವರ್ಷಗಳಲ್ಲಿಯೇ ನನ್ನ ತಾಯಿಗೆ ಜನ್ಮ ಕೊಟ್ಟಳು, ಜೊತೆಗೆ ನನ್ನ ಮಾವನನ್ನು. ನನ್ನ ತಾತ ಬೇರೆ ರಾಜ್ಯಕ್ಕೆ ಹೋಗಿ ಕೆಲಸ ಮಾಡುತ್ತಿರುವುದರಿಂದ ಆತ ಅಲ್ಲೇ ತನ್ನ ಕುಟುಂಬ ವರ್ಗದವರ ಜೊತೆಯಲ್ಲಿದ್ದ. ತಿಂಗಳಂತ್ಯಕ್ಕೆ ತಪ್ಪದೇ ಮನಿ ಆರ್ಡರ್ ಮಾಡುತ್ತಿದ್ದ ಬಿಟ್ಟರೆ ಮಕ್ಕಳನ್ನು ಪೊಷಿಸಿ ಬೆಳಸಿದ್ದೆಲ್ಲಾ ಅಜ್ಜಿನೆ.. ಆ ಅಲ್ಪ ಹಣದಲ್ಲೆ ಮಕ್ಕಳ ವಿದ್ಯಭ್ಯಾಸಕ್ಕೂ, ಜೀವನ ನಡೆಸಲಿಕ್ಕೂ ಹೇಗೋ ಹರಸಾಹಸ ಪಡುತ್ತಿದ್ದಳು.
ಕೆಲವು ವರ್ಷಗಳ ಬಳಿಕ ಪುನಃ ಹಳ್ಳಿಗೆ ಬಂದ ನನ್ನ ಅಜ್ಜ, ಹೆಂಡತಿಯೊಂದಿಗೆ ಪದೇ ಪದೇ ಕಿತ್ತಾಡಿಕೊಳ್ಳುತ್ತಾ ಅಜ್ಜಿಯನ್ನು ಮನ ಬಂದಂತೆ ಥಳಿಸುತ್ತಿದ್ದ, ಅದಾದ ಕೆಲವೇ ದಿನಗಳ ಬಳಿಕ ಅಜ್ಜ ತನ್ನ ಹೆಂಡತಿಯನ್ನು ಬಿಟ್ಟು ತನ್ನ ದೊಡ್ಡಣ್ಣನ ಮನೆಗೆ ಹೋಗಿ ಬಿಟ್ಟರು. ಅಜ್ಜಿಗೆ ಬಾಡಿಗೆ ಮನೆಯ ತಿಂಗಳ ಬಾಡಿಗೆಯನ್ನು ಕಟ್ಟಲೂ ದುಡ್ಡಿಲ್ಲದೇ, ಆ ಮನೆಯನ್ನು ಬಿಟ್ಟು ತನ್ನ ತವರು ಮನೆ ದಾರಿ ಹಿಡಿದಳು. ಅಲ್ಲಿಯೂ ಸಹ ಹಣಕಾಸಿನ ಅಭಾವದಿಂದ ಮಕ್ಕಳ ಪೋಷಣೆ ಅಸಾಧ್ಯವಾಗ್ತಾ ಇದ್ರೂ ಸಹ ಹೇಗೋ ಜೀವನ ನಡೆಸುತ್ತಿದ್ದಳು.
ಕೊನೆಗೆ ಅಜ್ಜಿ ಒಂದು ನಿರ್ಧಾರಕ್ಕೆ ಬಂದು ತಾನು ಗಂಡನ ಮನೆಯಲ್ಲಿ ನೆಲೆಸಬೇಕೆಂದು ತೀರ್ಮಾನಿಸಿ ಅಮ್ಮಾ ಹಾಗೂ ಮಾವನ ಜೊತೆ ಹೊರಟಳು. ಆದರೆ ಅಜ್ಜನ ಮನೆಯವರು ಅಜ್ಜಿ ಅಲ್ಲಿ ಬಂದು ತಂಗುವುದು ಇಷ್ಟವಿರದ ಕಾರಣ ಭಾರೀ ವಿರೋಧ ವ್ಯಕ್ತ ಪಡಿಸಿದರು. ಕೊನೆಗಳಿಗೆಯಲ್ಲಿ ಅವರಿಗೆ ಸಿಕ್ಕ ಜಾಗ ದನದ ಕೊಟ್ಟಿಗೆ… ಬಿಸಿಲು ಚಳಿ ಮಳೆಗಾಲದಲ್ಲೂ ಅಜ್ಜಿ ಅವರೆಲ್ಲಾ ಕೊಟ್ಟಿಗೆ ಮನೆಯಲ್ಲಿಯೇ ಜೀವನ ಸಾಗಿಸುತ್ತಿದ್ದರು. ತುತ್ತು ಅನ್ನಕ್ಕೂ ಗತಿ ಇಲ್ಲದೇ ನನ್ನ ತಾಯಿಯನ್ನು ಅಜ್ಜಿ ಶಾಲೆಯನ್ನು ಬಿಡಿಸಿ ಜೀವನ ನಿರ್ವಣೆಗೆ ಇಡ್ಲಿ ಮಾರಲು ಆರಂಭಿಸಿದರು. ಆಗ ನನ್ನಮ್ಮನ ವಯಸ್ಸು ಕೇವಲ 10 ವರ್ಷ..!
ಅದಷ್ಟೇ ಅಲ್ಲ. ನನ್ನ ತಾಯಿ ಸರಸ್ವತಿ ಪ್ರತಿ ದಿನ ಬೆಳಿಗ್ಗೆ 10 ರಿಂದ 15 ಕಿಮೀ ದೂರಕ್ಕೆ ನಡೆದುಕೊಂಡು ಹೋಗಿ ಒಂದು ಬ್ರಿಕ್ಸ್ ಫ್ಯಾಕ್ಟರಿಯಲ್ಲಿ ಕೂಲಿ ಮಾಡುತ್ತಿದ್ದಳು. ಕಟ್ಟಡ ನಿರ್ಮಾಣ… ಗದ್ದೆ ಕೆಲಸ… ಒಂದಾ ಎರಡಾ ಅವಳು ಮಾಡಿರದ ಕೆಲಸವೇ ಇಲ್ಲ ಆ ವಯಸ್ಸಿನಲ್ಲಿ.. ಆಕೆ ಎಂದೂ ಸುಖವಾಗಿ ನಿದ್ರೆ ಮಾಡಿದ್ದ ಉದಾಹರಣೆಗಳೇ ಇಲ್ಲವೇನೋ..? ಆದರೆ ಅದು ಅವಳ ಆಯ್ಕೆ ಅಲ್ಲ, ಜೀವನಕ್ಕಾಗಿ ಅವಳು ತೆಗೆದುಕೊಂಡಿರುವ ನಿರ್ಧಾರ..
ಕೆಲವು ವರ್ಷಗಳ ನಂತರ ಅಜ್ಜ ತನ್ನ ಹೆಂಡತಿಗೆ ಒಂದು ಸಣ್ಣ ಭೂಮಿಯನ್ನು ನೀಡಿದ್ದ. ಅದೂ ಬಂದ ಬೆಳೆಯಲ್ಲಿ ಎಲ್ಲರಿಗೂ ಸಮಾನ ಪಾಲು ನೀಡಬೇಕು ಎಂಬ ಷರತ್ತಿನ ಮೇರೆಗೆ. ಆ ಸಣ್ಣ ಒಣ ಭೂಮಿಯಲ್ಲಿ ಏನು ಬೆಳೆಯೋದು..? ಇಷ್ಟು ಸಣ್ಣ ಭೂಮಿಯಲ್ಲಿ ಕೂಲಿಯಾಳುಗಳನ್ನಿಟ್ಟು ಕೆಲಸ ಮಾಡಿಸಿದರೆ ನಮಗೆ ಸಿಗುವ ಲಾಭವಾದರೂ ಏನು ಎಂಬ ಯೋಚನೆಯಿಂದ ತಾನೊಬ್ಬಳೇ ಹೊಲದಲ್ಲಿ ಕೆಲಸ ಮಾಡಲು ಆರಂಭಿಸಿದಳು. ಅಜ್ಜಿಯ ಸಹಾಯಕ್ಕೆ ಅಮ್ಮ ಮತ್ತು ಮಾವ ಇದ್ದರು. ಕೈಯಲ್ಲಿ ಬಿಡಿಗಾಸು ಇರಲಿಲ್ಲ ಪ್ರತಿ ದಿನ ರಾಗಿ ಅಂಬಲಿಯೇ ಅವರಿಗೆ ಮೃಷ್ಟ ಬೋಜನ.
ಸಣ್ಣದೊಂದು ಇಡ್ಲಿ ಅಂಗಡಿ ಇಟ್ಟಾಗಂತೂ ಬೆಳಿಗ್ಗ 3 ಗಂಟೆಗೆ ಎಲ್ಲಾ ತಯಾರಿ ನಡೆಯುತ್ತಿತ್ತು. ಅದು ಮುಗಿಯುವಷ್ಟರಲ್ಲಿ ರಾತ್ರಿ 12 ರಿಂದ 1 ಗಂಟೆಯೂ ಆಗುತ್ತಿತ್ತೇನೋ. ಬೆಳಿಗ್ಗ 3-5ರವರೆಗೆ ಅಜ್ಜಿ ಇಡ್ಲಿ, ದೋಸೆಗೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಳು. ಅದಕ್ಕೆ ಅಮ್ಮ 5 ಗಂಟೆಗೆ ಎದ್ದು ಚಟ್ನಿ ಮಾಡಿಟ್ಟು ಅಜ್ಜಿಗೆ ಸಹಕರಿಸಿ ನಂತರ ತನ್ನ ಕೆಲಸಕ್ಕೆ ಹೋಗ್ತಾ ಇದ್ಲು. ಕೆಲವೋಮ್ಮೆ ಅಜ್ಜಿಯ ಜೊತೆಗೂಡಿ ಊರೆಲ್ಲಾ ಸುತ್ತಾಡಿಕೊಂಡು ವ್ಯಾಪಾರ ಮಾಡಿ ರಾತ್ರಿ 8 ಗಂಟೆಗೆ ಮನೆಗೆ ಬಂದು ಬಿಡ್ತಾ ಇದ್ರು.
ಹೀಗೆ ಅಜ್ಜಿ ಊರೆಲ್ಲಾ ಸುತ್ತಾಡಿಕೊಂಡು ಇಡ್ಲಿ ಮಾರಿ ಅದರಲ್ಲಿ ಬಂದ ಲಾಭದಲ್ಲಿ ಒಂದು ಸಣ್ಣ ಮಣ್ಣಿನ ಮನೆಯನ್ನು ಕಟ್ಟಿದ್ದಾಳೆ. ಮಾವನಿಗೂ ಒಂದೊಳ್ಳೆ ಕಡೆ ಕೆಲಸ ಸಿಕ್ಕಿತು, ಅದರ ಸ್ವಲ್ಪ ದಿನದಲ್ಲೇ ಅಮ್ಮಂಗೂ ಮದುವೆ ಮಾಡಿದರು, ಆದರೂ ಅಮ್ಮ ತನ್ನ ಕೆಲಸವನ್ನು ನಿಲ್ಲಿಸಲಿಲ್ಲ. ಇಡ್ಲಿ ಮಾರಾಟದಿಂದ ಬಂದ ಲಾಭದ ಹಣವನ್ನೆಲ್ಲಾ ಉಳಿತಾಯ ಮಾಡುತ್ತಿದ್ದಾಳೆ, ಅಲ್ಲದೇ ಒಂದಿಷ್ಟು ಆಸ್ತಿಯನ್ನೂ ಸಹ ಮಾಡಿಕೊಂಡು ಲೀಸ್‍ಗೆ ಬಿಟ್ಟಿದ್ದಾಳೆ. ಇಷ್ಟೆಲ್ಲಾ ಮೈ ಮುರಿದು ಕೆಲಸ ಮಾಡಿ ಅದರಲ್ಲೇ ಒಂದು ಮಟ್ಟಕ್ಕೆ ಬೆಳೆದ ನನ್ನ ತಾಯಿ ಇಂದಿಗೂ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಇಡ್ಲಿ ಮಾರುವುದು ಬಿಟ್ಟಿಲ್ಲ…
ಅವಳ ಜೀವನದ ಬಂಡಿ ಎಂದೂ ನಿಲ್ಲೊಲ್ಲವೇನೋ..? ನಾನೂ ಹಲವಾರು ಭಾರಿ ಅಮ್ಮಾ ಈಗಲಾದರೂ ಇದನ್ನೆಲ್ಲಾ ಬಿಟ್ಟು ವಿಶ್ರಾಂತಿ ತಗೋ ಎನ್ನುವಾಗ… ಇದು ನನಗೆ ಅಭ್ಯಾಸವಾಗಿ ಬಿಟ್ಟಿದೆಯಮ್ಮಾ… ಎಂದು ನಗುತ್ತಲೇ ಉತ್ತರಿಸುತ್ತಾಳೆ.

  • ಪ್ರಮೋದ್ ಲಕ್ಕವಳ್ಳಿ.

ಸೋರ್ಸ್ : ದಿ ಲಾಜಿಕಲ್ ಇಂಡಿಯನ್

POPULAR  STORIES :

ತಲೆ ಇಲ್ಲ… ಆದ್ರೂ ನಡೆದಾಡುತ್ತೆ ಕೋಳಿ..?!

ಅಲ್ಲಾಹ್… ಅಂದಿದಕ್ಕೆ ವಿಮಾನದಿಂದ ಗೇಟ್ ಪಾಸ್ ಶಿಕ್ಷೆ…!

ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಕ್ಲಾಸ್ ತೆಗೆದ ಬಯಾಲಜಿ ಮೇಡಂ..!

ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!

ಅತ್ಯಾಚಾರ ಮಾಡುವ ವಿಡಿಯೋ 50-100ರೂ ಗೆ ಬಿಕರಿ…!

ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!

ಪಲ್ಲವಿ ನೀನು ಹೀಗೆ ಮಾಡಬಾರದಿತ್ತವ್ವ.. ಹೋಗೋದು ಹೋದಿ.. ಜೊತೆಗೆ ಎಲ್ಲರ ನೆಮ್ಮದಿನ ಕಿತ್ಕೊಂಡೋದ್ಯಲ್ಲ..?

ರಿಯಾಲಿಟಿ ಶೋನಲ್ಲಿ ಸ್ಟಂಟ್ ಮಾಡಲು ಹೋಗಿ ಎಡವಟ್ಟು – Just Miss Video

ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...