ಆದಿಚುಂಚನ ಮಠದ ಶ್ರೀ ನಿರ್ಮಲಾನಂದ ಸ್ವಾಮಿಗಳು ಐದು ವರ್ಷದ ಮುಸ್ಲಿಂ ಬಾಲಕಿಗೆ ಅಕ್ಷರ ದೀಕ್ಷೆಯನ್ನು ನೀಡಿದ ವಿಶಿಷ್ಟ ಸನ್ನಿವೇಶವೊಂದು ನಡೆದಿದೆ. ಮಗಳು ರಿಯಾನಾಬಾನು ಸರಸ್ವತಿ ಪೂಜೆಯ ದಿನದಂದು ಶ್ರೀಗಳಿಂದ ಅಕ್ಷರ ದೀಕ್ಷೆ ಮಾಡಿಕೊಳ್ಳುತ್ತಿದ್ದರೆ.. ತಾಯಿ ಆಯಿಷಾ ಭಾವ ಪರವಶವಾಗಿ ಕೂತಿದ್ದ ದೃಶ್ಯ ಎಲ್ಲರಲ್ಲೂ ಚಕಿತಗೊಳಿಸಿತ್ತು.
ಮುಸ್ಲಿಂ ಸಮುದಾಯದ ಮಹಿಳೆ ತನ್ನ ಪುತ್ರಿಗೆ ಆದಿಚುಂಚನಗಿರಿ ಶ್ರೀಗಳ ಕೈಯಿಂದ ಅಕ್ಷರಭ್ಯಾಸ ಮಾಡಿಸುತ್ತಿದ್ದ ಸಂದರ್ಭದಲ್ಲಿ ಇಡೀ ಮಠದಲ್ಲೇ ಧರ್ಮ ಸಮಾಭಾವದ ಪರಂಪರೆ ಮತ್ತೆ ನೆನಪಿಸುವಂತಿತ್ತು.. ಶ್ರೀಗಳ ಮಠದಲ್ಲಿ ಸೆ.30 ರಿಂದ ಅ.11ರ ವರೆಗೆ ನಡೆಯುತ್ತಿರುವ ಶ್ರೀ ಶರನ್ನವರಾತ್ರಿ ಉತ್ಸವದಲ್ಲಿ ಸರಸ್ವತಿ ಪೂಜೆ ಮತ್ತು ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಉತ್ಸವಕ್ಕೆ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ಚುಂಚನ ಶ್ರೀ ಸ್ವಾಮಿಯ ಆಶಿರ್ವಾದ ಪಡೆದರು. ಈ ವಾರ್ಷಿಕ ಪರಂಪರೆಯ ಬಗ್ಗೆ ತಿಳಿದುಕೊಂಡಿದ್ದ ನಾಗಮಂಗಲ ತಾಲ್ಲೂಕಿನ ಹೊಳಗೇಪುರ ಗ್ರಾಮದ ಆಯಿಷಾ-ನಯಾಜ್ ಪಾಷಾ ದಂಪತಿ ತಮ್ಮ ಪುತ್ರಿಗೆ ಶ್ರೀಗಳಿಂದಲೇ ಅಕ್ಷರದೀಕ್ಷೆ ಕೊಡಿಸುವ ಸಂಕಲ್ಪ ಮಾಡಿದ್ದರು. ಐದು ವರ್ಷದ ಮಗಳು ರಿಯಾನಾಬಾನು ಕೈಯಲ್ಲಿ ನವಿಲುಗರಿಯನ್ನು ನೀಡಿ ಓಂ ಎಂದು ಬರೆಸುವ ಮೂಕಲ ಶ್ರೀಗಳು ಆ ಮಗುವಿಗೆ ಅಕ್ಷರ ದೀಕ್ಷೆ ನೀಡಿದ್ದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಅಕ್ಷರಭ್ಯಾಸ ಮಾಡಿಸುವ ವಿಚಾರ ಮೊದಲೇ ತಿಳಿದುಕೊಂಡಿದ್ದೆವೆವು. ಅಪಾರ ಜ್ಞಾನವುಳ್ಳ ಶ್ರೀಗಳಿಂದ ನಮ್ಮ ಮಗಳಿಗೆ ಅಕ್ಷರದೀಕ್ಷೆ ಕೊಡಿಸಬೇಕೆಂಬ ಮಹದಾಸೆ ಈಗ ನೆರವೇರಿತು ಎಂದು ತಾಯಿ ಆಯಿಷಾ ಸಂತಸ ವ್ಯಕ್ತಪಡಿಸಿದರು.
POPULAR STORIES :
ಹುಡುಗಿಯೊಬ್ಳು ಐಫೋನ್ ತಗೊಳೋಕೆ ನಿಮ್ಮತ್ರ ದುಡ್ ಕೇಳುದ್ರೆ..?
Oxford ಇಂಗ್ಲೀಷ್ ಡಿಕ್ಷನರಿಯಲ್ಲಿ ದಕ್ಷಿಣ ಭಾರತದ ಎರಡು ಸಾಮಾನ್ಯ ಪದಗಳ ಸೇರ್ಪಡೆ..!
ಇನ್ನು ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್ ಬಂದ್..!
ಏಳು ಸಾವಿರ ವರ್ಷಗಳ ಹಿಂದಯೇ ಏಲಿಯನ್ಸ್ ವಿಮಾನ ನಿಲ್ದಾಣ ನಿರ್ಮಿಸಿಕೊಂಡಿದ್ವು : ಇರಾಕ್ ಸಚಿವ..!
ಇನ್ನು ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್ ಬಂದ್..!
ನಾನು ನಿನ್ನ ಮದ್ವೆ ಆಗ್ತೀನಿ.. ಅಂದಿದಕ್ಕೆ ತಲೆ ತಿರುಗಿ ಬಿದ್ಲು ನಾರಿ..! ಯಾಕೆ ಗೊತ್ತಾ..
ನೀವು ಕುಡಿಯೋದು ಕೂಲ್‍ಡ್ರಿಂಕ್ಸ್ ಅಲ್ಲ ಬದಲಾಗಿ ವಿಷ..!