ಜಗತ್ತಿನ ಅತೀ ಹಳೆಯ ಸಾರಾಯಿ ಭಟ್ಟಿ ಇಸ್ರೇಲ್ ನ ರಾಖೀಫೆಟ್ ಗುಹೆಯಲ್ಲಿ ಪತ್ತೆಯಾಗಿದೆ. ಇದು ಸುಮಾರು 13,000 ವರ್ಷಗಳ ಹಿಂದಿನ ಮದ್ಯವಾಗಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಪುರಾತತ್ವ ಶಾಸ್ತ್ರಜ್ಞರು ಇಸ್ರೇಲ್ ನಲ್ಲಿ ಪತ್ತೆ ಹಚ್ಚಿರುವ ಬಿಯರ್ ಮಾದರಿ ಪಾನೀಯವನ್ನು ಸಭೆ-ಸಮಾರಂಭಗಳಲ್ಲಿ ಬಳಸಲಾಗುತ್ತಿತ್ತು ಎಂದು ಸಂಶೋಧನೆ ತಿಳಿಸಿದೆ.
ಇಸ್ರೇಲ್ ರಾಖೀಫೆಟ್ ಜಗತ್ತಿನ ಸಾರಾಯಿ ಉತ್ಪಾದನೆಯ ಮೊದಲ ಸ್ಥಳವಾಗಿದೆ.
ಹೇನಿ ವಿಶ್ವವಿದ್ಯಾಲಯದ ಪುರಾತತ್ವ ಶಾಸ್ತ್ರ ಪ್ರಾಧ್ಯಾಪಕ ಡಾನಿ ನಡೆಲ್ ಇದನ್ನು ಖಾತ್ರಿ ಪಡಿಸಿದ್ದಾರೆ. ನಡೆಲ್ ಜರ್ನಲ್ ಆಫ್ ಆರ್ಕಿಯಾಲಜಿಕಲ್ ಸೈನ್ಸ್ ನಲ್ಲಿ ಪ್ರಕಟವಾದ ಲೇಖನದ ಸಂಪಾದಕರಲ್ಲಿ ಒಬ್ಬರಾಗಿದ್ದು, ನಾಚುಫಿಯನ್ನರು ಗುಹೆಯಲ್ಲಿ ಏನು ಮಾಡ್ತಿದ್ದರು ಎಂಬುದು ನಮಗೆ ತಿಳಿದೆ ಎಂದಿದ್ದಾರೆ. ಅಂದಿನ ಮದ್ಯ ಇಂದಿನ ಬಿಯರ್ ಗಿಂತ ವಿಭಿನ್ನವಾಗಿತ್ತು , ಅದು ಹೆಚ್ಚು ಸ್ಟ್ರಾಂಗ್ ಆಗಿರ್ಲಿಲ್ಲ.
ಶವಗಳನ್ನು ಹೂಳುವಾಗ ಅವರು ಸೂಪ್ ತರಹದ ದ್ರವ ಹಾಗೂ ಆಲ್ಕೋ ಹಾಲ್ ತರಹದ ಪಾನೀಯ ತಯಾರಿಸುತ್ತಿದ್ದರು ಎಂದು ವಿವರಿಸಿದ್ದಾರೆ.