ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಆದರೆ, ಇದೇ ಮದ್ಯಪಾನದಿಂದ ವಿದೇಶಿ ಭಾಷೆಯನ್ನು ಆರಾಮಾಗಿ ಕಲಿಯಬಹುದು!
ಹೀಗಂತ ನಾವ್ ಹೇಳ್ತಿರೋದಲ್ಲ, ಸಂಶೋಧನೆಯೊಂದು ಹೇಳ್ತಿರೋದು.
ಆಲ್ಕೋಹಾಲ್ ಕುಡಿದು ಪ್ರಯತ್ನಪಟ್ಟರೆ ಸ್ಪಷ್ಟವಾಗಿ, ಸಲೀಸಾಗಿ ವಿದೇಶಿ ಭಾಷೆಗಳಲ್ಲಿ ಮಾತನಾಡಬಹುದು ಅಂತ ಸಮೀಕ್ಷೆ ಹೇಳಿದೆ. ಬ್ರಿಟಿಷ್ ಮತ್ತು ಡಚ್ ಸಂಶೋಧನಾಕಾರರು ಮಾಡಿದ ಪ್ರಯೋಗ ‘ ಜರ್ನಲ್ ಆಫ್ ಸೈಕೋಫಾ ರ್ಮಾಕೊಲಜಿ ‘ ಯಲ್ಲಿ ಪ್ರಕಟವಾಗಿದ್ದು, ಅದರಲ್ಲಿ ಈ ವಿಷಯ ಇದೆ.
ಒಂದು ಲೋಟ ಬಿಯರ್ ಅಥವಾ ವೈನ್ ಕುಡಿದು ವಿದೇಶಿ ಭಾಷೆ ಮಾತನಾಡಿದರೆ ಹೆದರಿಕೆ ಅಥವಾ ಭಯ ಉಂಟಾಗದೆ ಸರಾಗವಾಗಿ ಮಾತನಾಡಬಹುದು ಎಂದು ಹೇಳಲಾಗುತ್ತಿದೆ.
ನೆದರ್ ಲ್ಯಾಂಡ್ ನಲ್ಲಿ ಜರ್ಮನಿ ಮೂಲದ 50 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಅವರಿಗೆ ಡಚ್ ಭಾಷೆಯಲ್ಲಿ ಪಾಠ ಮಾಡಿ, 2 ನಿಮಿಷ ಸಂದರ್ಶನ ನಡೆಸಲಾಗಿತ್ತು.