ಇದು ಅಂಧ ಡಾಕ್ಟರ್‍ನ ಅಮೇಜಿಂಗ್ ಸ್ಟೋರಿ..!

Date:

ಕನ್ವೆನ್ಷನ್ ಹಾಲ್ ನಲ್ಲಿ ನೆರೆದಿದ್ದ 10,000 ಜನರು ಅಲ್ಲಿ ನಡೆದ ಒಂದು ಅದ್ಭುತ ದೃಶ್ಯವನ್ನು ನೋಡಿ ಎದ್ದು ನಿಂತರು, ಚಪ್ಪಾಳೆ ತಟ್ಟಿ ಸಂತೋಷದಿಂದ ಕುಣಿದಾಡಿದರು ಹಾಗೂ ಕಂಬನಿಯನ್ನೂ ಮಿಡಿದರು…. ಯಾಕೆ ಗೊತ್ತಾ???
ಹಲವು ವರುಷಗಳ ಹಿಂದಿನ ಸನ್ನಿವೇಶ.ಅಮೇರಿಕಾದ ಟೆಂಪಲ್ ಮೆಡಿಕಲ್ ಯೂನಿವರ್ಸಿಟಿಯ ಕನ್ವೆನ್ಷನ್ ಹಾಲ್. ಅಲ್ಲಿ ಸುಮಾರು 10,000 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಜನಸ್ತೋಮ.‍ಆಗ ನಡೆದ ಒಂದು ಅದ್ಭುತ ದೃಶ್ಯದಿಂದ ಅಲ್ಲಿ ನೆರೆದ ಸಮಸ್ತ ಜನಸ್ತೋಮ,‍ತೀರಾ ಭಾವಾವೇಶಕ್ಕೊಳಗಾಗುತ್ತ,‍ ಚಪ್ಪಾಳೆಯೊಂದಿಗೆ ಎದ್ದು ನಿಂತು ಸಂತೋಷದಿಂದ ಕುಣಿದಾಡುತ್ತಾ ಕಣ್ಣೀರು ಸುರಿಸುತ್ತಾರೆ,ಹೌದು ಅದು ಕಣ್ಣೀರಲ್ಲ! ಆನಂದ ಭಾಷ್ಪ…ಕಷ್ಟಗಳು,ಸೋಲುಗಳು ಪ್ರವಾಹದಂತೆ ಬಂದೆರಗಿದಾಗ ಅದರ ವಿರುದ್ದ ಸೆಣಸಾಡುತ್ತಾ ಯಶಸ್ಸಿನ ತುತ್ತ ತುದಿಗೇರೋ ಸಾಹಸ ಮಾಡಿದ ಒಬ್ಬ ಅಂಧ ಡಾಕ್ಟರ್ ನ ಸಾಧನೆಗೆ ಭಾವುಕರಾದ ಜನ…..
ಸಾಧನೆಗೈದ ಆ ವ್ಯಕ್ತಿಯಾರೆಂದು ನಿಮಗೆ ಗೊತ್ತೇ???
ಡಾಕ್ಟರ್ ಡೇವಿಡ್ ಹಾರ್ಟ್ ಮನ್ ಆ ಸಾಧನೆಗೈದ ಅಮೇರಿಕಾದ ಮೊತ್ತಮೊದಲನೇಯ ಅಂಧ ಸೈಕಿಯಾಟ್ರಿಸ್ಟ್. ಸಂಪೂರ್ಣ ಕತ್ತಲಿನ ಜಗತ್ತಿನಲ್ಲಿ ಬಾಳಿ ಬದುಕಿದ ಈ ಸಾಹಸಿ ನಿಜಕ್ಕೂ ಒಬ್ಬ ಛಲಗಾರನೇ ಸರಿ. ಈತ ಹುಟ್ಟು ಕುರುಡನೇನಲ್ಲ, ಬೆಳಕೆಂದರೇನು ಎಂದು ನೋಡಿದ ಅನುಭವಿಸಿದ ವ್ಯಕ್ತಿ. ಬೆಳಕಿನ ಬಗ್ಗೆ ಹುಟ್ಟಿನಿಂದಲೇ ಏನೆಂದೇ ತಿಳಿಯದ ಒಬ್ಬ ವ್ಯಕ್ತಿಗೂ ಬೆಳಕನ್ನು ಅನುಭವಿಸಿ ನೋಡಿದ ಬಳಿಕ ಅದು ಇನ್ನು ತನ್ನ ಪಾಲಿಗೇ ಇಲ್ಲ, ಈ ಜಗತ್ತೇ ನನಗೆ ಕತ್ತಲು ಅನ್ನೋ ವ್ಯಕ್ತಿಗೂ ಅಜಗಜಾಂತರ ವ್ಯತ್ಯಾಸವಿದೆ. ಸ್ವಲ್ಪ ಹೊತ್ತು ಕರೆಂಟ್ ಹೋದ್ರೆ ಎಲೆಕ್ಟ್ರಿಸಿಟಿ ಬೋರ್ಡ್ ನವರನ್ನು ಶಪಿಸುತ್ತಾ ಕೂರೋ ನಾವುಗಳು, ಕ್ಷಣ ತೀರಾ ಉಸಿರುಗಟ್ಟಿಸುವ ವಾತಾವರಣದ ಅನುಭವ ನಮಗಾಗುತ್ತದೆ, ಆದ್ರೆ ಹಾರ್ಟ್ ಮನ್ ರವರದ್ದು ಜೀವನವಿಡೀ ಯಾವತ್ತೂ ಕರೆಂಟ್ ಬಾರದೇ ಇರೋ ಒಂದು ಮನೆಯಂತಾಗಿತ್ತು, ಸೂರ್ಯನೇ ಇಲ್ಲದ ಪ್ರಪಂಚದಂತೆ, ಉಹಿಸಿದ್ರೂ ಕ್ಷಣ ಜುಮ್ ಅನ್ನುತ್ತೆ. ಪರ್ಮನೆಂಟ್ ಬ್ಲೈಂಡ್ ನೆಸ್. ಆತನಿಗೆ ಇದ್ದಕ್ಕಿದ್ದಂತೆ ತನ್ನ 8 ನೇ ವಯಸ್ಸಿನಲ್ಲಿ ಗ್ಲುಕೋಮ ಬಾಧಿಸಿತ್ತು, ಕಣ್ಣಿನ ಹಿಂಬದಿಯ ಮಾಂಸ ಪೇಶಿಗಳಿಂದ ರೆಟಿನಾ ಬೇರ್ಪಟ್ಟಾಗ ಅಲ್ಲಿ ಸಂಭವಿಸುವ ದೃಶ್ಟಿ ಹಾನಿ ,ಇಂತಹ ಕಾಯಿಲೆಗೆ ಬಲಿಯಾಗಿದ್ದ ಹಾರ್ಟ್ ಮಾನ್. 3 ಆಪರೇಷನ್ ಬಳಿಕವೂ ಆತನ ದೃಷ್ಟಿ ಮರಳಿ ಬರಲಿಲ್ಲ. ಸಣ್ಣ ಹುಡುಗ ಮೊದಮೊದಲು ಕತ್ತಲೆಯ ಜಗತ್ತು ತೀರಾ ಭಯ ಹುಟ್ಟಿಸುತ್ತಿತ್ತಂತೆ, ಮಗನ ದು:ಖ ತಾಯಿಗಲ್ಲದೆ ಯಾರಿಗೆ ತಾನೆ ಅರ್ಥ ಮಾಡಿಕೊಳ್ಳಲು ಸಾಧ್ಯ? ತಾಯಿಯ ತುಂಬು ಕಾಳಜಿ, ಪ್ರೀತಿ ಆಸರೆಯೊಂದಿಗೆ ದಿನ ಕಳೆಯುತ್ತಿದ್ದ ಡೇವಿಡ್. ಆತನ ತಂದೆ ಒಬ್ಬ ಬ್ಯಾಂಕರ್ ಆಗಿದ್ದ. ಆತನಿಗೆ ಸೋದರಿಯೂ ಇದ್ದಳು. ಸೋದರಿಗಿಂತಲೂ ಆಕೆ ತನ್ನ ಮಾರ್ಗದರ್ಶಿ ಅನ್ನುತ್ತಾರೆ ಡೇವಿಡ್. ಯಾವುದು ಸಾಧ್ಯವಿಲ್ಲವೋ ಅದನ್ನೇ ಮಾಡುವಂತೆ, ತನ್ನ ಎಲ್ಲಾ ಕೆಲಸಗಳನ್ನೂ ತಾನೇ ಮಾಡುವಂತೆ ಪ್ರೇರೇಪಿಸುತ್ತಿದ್ದಳಂತೆ ಆಕೆ. ತನ್ನ ತಂದೆಯವರ ಒಂದು ಮಾತಿನಿಂದ ಪ್ರಭಾವಿತನಾದ ಡೇವಿಡ್ ಯಶಸ್ಸನ್ನು ಹುಡುಕಿ ಹೊರಟವನು ಮತ್ತೆಂದೂ ಹಿಂತಿರುಗಿ ನೋಡಲಿಲ್ಲವಂತೆ. ಒಮ್ಮೆ ಡೇವಿಡ್ ಹೇವರ್ ಫೋರ್ಡ್ ಹೈಸ್ಕೂಲ್ ನಲ್ಲಿ ನಡೆಯಲಿರೋ ಒಂದು ರೆಸ್ಟ್ಲಿಂಗ್ ಕಾಂಪಿಟೀಷನ್ನಲ್ಲಿ ಭಾಗವಹಿಸಲು ಸಾಧ್ಯವಿಲ್ಲವೆಂದು ದು:ಖಿತನಾಗಿ ಸುಮ್ಮನೆ ಕೂತಾಗ, ಆತನ ತಂದೆ ಹೇಳಿದ ಮಾತುಗಳು ಅವನ ಜೀವನದ ದಿಕ್ಕನ್ನೇ ಬದಲಿಸಿತಂತೆ”ಎಲ್ಲಿಯವರೆಗೆ ನೀನು ಪ್ರಯತ್ನ ಪಡುವುದಿಲ್ಲವೋ ಅಲ್ಲಿಯ ತನಕ ನೀನೇನು ಮಾಡಲು ಸಾಧ್ಯ ಎಂಬುದು ನಿನಗೆಂದಿಗೂ ಅರ್ಥವಾಗಲಾರದು” ಎಂಬುದು ತನ್ನ ಜೀವನಕ್ಕೆ ಪ್ರೇರಣಾ ಶಕ್ತಿಯಾಯಿತಂತೆ. ಮತ್ತೊಬ್ಬ ರನ್ನರ್ ಹಿಡಿದ ರೋಪ್ ಸಹಾಯದಿಂದ ರೆಸ್ಟ್ಲಿಂಗ್ ಮಾಡಿದನಂತೆ ಡೇವಿಡ್ .ಹೀಗೆ ತನ್ನ ತಾಯಿ,ಸಹೋದರಿ ಹಾಗೂ ತಂದೆಯವರ ಪ್ರೇರಣೆಯಿಂದ ಒಬ್ಬ ಡಾಕ್ಟರ್ ಆಗಬೇಕೆಂಬ ದೃಡ ನಿಶ್ಚಯ ಮಾಡುತ್ತಾನೆ ಈ ಡೇವಿಡ್.
ಆದ್ರೆ ಅಲ್ಲೂ ಅವನು ಹೋಗುತ್ತಿದ್ದ ದಾರಿಗಳಲ್ಲಿ ಅನೇಕ ತೊಂದರೆಗಳು ಅಡ್ಡಿಯಾದವು.ಆತ 10 ಮೆಡಿಕಲ್ ಕಾಲೇಜ್ ಗೆ ಅರ್ಜಿ ಹಾಕಿದ್ದರೂ ಅವನ ದೌರ್ಭಾಗ್ಯಕ್ಕೆ ಅವನ ಅಂಗ ವೈಕಲ್ಯ ಅಡ್ಡಿಯಾಯಿತು.9 ಕಾಲೇಜಿನಲ್ಲೂ ಆತನ ಅಪ್ಲಿಕೇಷನ್ ರಿಜೆಕ್ಟ್ ಆಯ್ತು. ಹತಾಶನಾದ ಡೇವಿಡ್.ಸೋಲಿನ ಮೇಲೆ ಸೋಲು ಅನುಭವಿಸಿದ ಆತನಿಗೆ ಜೀವನದಲ್ಲಿ,ತಾನೆಂದೂ ಡಾಕ್ಟರ್ ಆಗಲು ಸಾಧ್ಯವಿಲ್ಲ ಎಂದು ಖಿನ್ನನಾಗಿ ಕುಳಿತಾಗ ಅವನಿಗೆ ಸಂತೋಷದ ಸುದ್ದಿ ಬರುತ್ತದೆ.ಅಮೇರಿಕಾದ ಟೆಂಪಲ್ ಯೂನಿವರ್ಸಿಟಿಯು ಅವನಲ್ಲಿದ್ದ ಟ್ಯಾಲೆಂಟ್ ನ್ನು ಗುರುತಿಸಿ ಅವನಿಗೆ ಒಂದು ಅವಕಾಶ ನೀಡಲು ಮುಂದೆ ಬರುತ್ತದೆ.ಅವನಿಗೆ ಅಷ್ಟೇ ಸಾಕಿತ್ತು.ನೀರಲ್ಲಿ ಮುಳುಗಿದವನಿಗೆ ಹುಲ್ಲು ಕಡ್ಡಿ ಆಸರೆ ಎಂಬಂತೆ ಅವನು ಡಾಕ್ಟರ್ ಆಗಲು ಪಣ ತೊಟ್ಟ,ಈ ನಿಟ್ಟಿನಲ್ಲಿ ಅವನು ತನ್ನ ಅನೇಕ ಸಹಪಾಠಿಗಳ ಹಾಗೂ ಗುರುಗಳ ಸಹಾಯವನ್ನು ಸ್ಮರಿಸುತ್ತಾನೆ. ಮೈಕ್ರೋಸ್ಕೋಪ್ ನಿಂದ ಸತ್ತ ಅಂಗಾಂಶಗಳನ್ನು ನೋಡಿ ಕಲಿಯುವ ಬದಲಾಗಿ ಆತ ಅದೇ ಅಂಗಾಂಶಗಳ ಮೇಲೆ ತನ್ನ ಕೈಯ ಸ್ಪರ್ಶಗಳಿಂದ ಹಾಗೂ ಅಧ್ಯಾಪಕರ ವಿವರಣೆಗಳಿಂದ ಕಲಿಯಲು ಪ್ರಯತ್ನ ಪಡುತ್ತಾ ಪಡುತ್ತ ಒಬ್ಬ ಸಕ್ಸಸ್ ಫುಲ್ ಡಾಕ್ಟರ್ ಆದ,ಒಬ್ಬ ಪ್ರಸಿದ್ದ ಸೈಕಿಯಾಟ್ರಿಸ್ಟ್.ಅಮೇರಿಕಾದ ಮೊತ್ತಮೊದಲನೇಯ ಅಂಧ ಡಾಕ್ಟರ್ ಎಂಬ ಖ್ಯಾತಿಯನ್ನು ಹೊಂದಿದ.
ಪ್ರತೀಯೊಬ್ಬರೂ ಜೀವನ ದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅಂಗವಿಕಲರು,ನನ್ನ ಅಂಧತ್ವ ನನ್ನ ಜೀವನಕ್ಕೇ ಒಂದು ಬೆಳಕಾಯ್ತು ಅನ್ನುತ್ತಾರೆ ಡೇವಿಡ್.
ಅವರು ಬರೆದ ಪುಸ್ತಕವಾದ “White Coat,White Cane: A Blind Doctor’s Remarkable Triumph Against Incredible Odds” ಎಂಬುದನ್ನಾಧರಿಸಿ ಒಂದು ಸಿನಿಮಾ ಕೂಡಾ ಮಾಡಲಾಗಿತ್ತು.
ದಿ ಗ್ರೇಟ್ ರೈಟರ್ ಆಗಿರೋ ರಾಬಿನ್ ಶರ್ಮಾ ಹೇಳುತ್ತಾರೆ”ನಿಮ್ಮ ಜೀವನದ C.E.O ನೀವಾಗಿ”ಎಂದು.ನಮ್ಮನ್ನು ನಾವು ಜೀವನದ ವಾಸ್ತವತೆಗೆ ತೆರೆದಿಡಬೇಕು.ನಾವು ಜೀವನ್ದಲ್ಲಿ ಕಾರ್ಯೋನ್ಮುಖರಾಗದಿದ್ದರೆ,ಅದು ನಮ್ಮ ಮೇಲೆ ಕಾರ್ಯವಹಿಸುತ್ತದೆ ಹಾಗೂ ನಮಗೆ ಬೇಡದ ಫಲವನ್ನು ನೀಡುತ್ತದೆ,ಎಲ್ಲಾ C.E.O ಗಳು ಇದು ನನ್ನದು ನನಗೆ ಸೇರಿದ್ದು ಎಂಬುದಾಗಿ ವರ್ತಿಸುತ್ತಾರೆ ಹಾಗೂ ತನ್ನ ಧ್ಯೇಯದಂತೆ ನಡೆಯುತ್ತಾರೆ ಅದರಂತೆ ನೀವೂ ಅದೃಷ್ಟವನ್ನು ಕಾಯುತ್ತಾ ಕೂರುವ ಬದಲು,ಅದನ್ನು ನಿಮ್ಮದಾಗಿಸುವತ್ತ ಪ್ರಯತ್ನ ಪಡಿ.
ಸ್ನೇಹಿತರೇ! ನಿಮ್ಮ ಕನಸನ್ನು ಸಾಕಾರಗೊಳಿಸಲು,ನಿಮ್ಮ ಗುರಿ ತಲಪಲು ನಿಮ್ಮಲ್ಲಿರೋ ಅಂಗ ವೈಕಲ್ಯ ಎಂದಿಗೂ ತೊಂದರೆ ನೀಡದು.ಯಾವನು ಆರೋಗ್ಯವಂತನಾಗಿದ್ದೂ,ವೃಥಾ ಕಾಲಹರಣ ಮಾಡುತ್ತ,ತನ್ನ ಉದಾಸೀನತೆಗೆ ಇಲ್ಲದ ಸಬೂಬು ನೀಡುತ್ತಾ ಏನನ್ನೂ ಸಾಧಿಸಲಾರದೆ, ಸುಮ್ಮನೆ ಕುಳಿತಿರುತ್ತಾನೋ ಅವನೇ ನಿಜವಾದ ಅಂಗವಿಕಲ.ಸಾಧನೆಗೆ ಯಾವ ಅಂಗವೈಕಲ್ಯತೆಗಳೂ ಅಡ್ಡಿ ಬರಲಾರದು ಎಂಬುದನ್ನು ಸಾಧಿಸಿ ತೋರಿಸಿದಂತಹ ವ್ಯಕ್ತಿ ಡಾ!ಡೇವಿಡ್.
ಡಿಯರ್ ಪ್ರೆಂಡ್ಸ್!!!!! ನೀವೂ ಏನನ್ನಾದರೂ ಸಾಧಿಸಲು ಪ್ರಯತ್ನ ಪಡಿ,ಆಗ ನಿಮ್ಮನ್ನು ಯಾರು ತಡೆಯುತ್ತಾರೋ ನೋಡಿಯೇ ಬಿಡೋಣ!!!!!

  • ಸ್ವರ್ಣಲತ ಭಟ್

POPULAR  STORIES :

ಹ್ಯಾಟ್ರಿಕ್ ಹೀರೋ ಶಿವಣ್ಣ ಕ್ರಿಕೆಟ್ ಆಡಿದ್ರು..! ಬ್ಯಾಟಿಂಗ್, ಬೌಲಿಂಗ್ ಮಾಡಿ ಮಿಂಚಿದ್ರು..,!

ಕೊನೆಯುಸಿರೆಳೆಯುತ್ತಿದ್ದ ಅವಳ ಮದುವೆಯಾಯ್ತು..! ಅವಳಿಷ್ಟದಂತೆ ಮದುವೆ, ಮುಂದೇನಾಯ್ತು?

ರವಿಬೆಳೆಗೆರೆಗೆ ಆರು ತಿಂಗಳು ಜೈಲು ಶಿಕ್ಷೆ..!!!

ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ಕಿ ಸ್ವಾತಂತ್ರ್ಯದ ದುರ್ಬಳಕೆ : ಸಲ್ಮಾನ್‍ಖಾನ್

ಅವನನ್ನು ಅವಮಾನಿಸಿದ ಅವಳೆಲ್ಲಿದ್ದಾಳೆ..! ಅವಳು, ಅವನು ಮತ್ತು ಆ ಉಪನ್ಯಾಸಕ..!

ಅವನು ಅವರ ತಂದೆಗೆ ರಕ್ತ ಕೊಡಲಿಲ್ಲ..ಆಮೇಲೇನಾಯ್ತು? ರಕ್ತದಾನ ಮಹಾದಾನ

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...