ಇನ್ಮುಂದೆ ಹಸುವಿನ ಗಂಜಳ (ಮೂತ್ರ) , ಸಗಣಿಯಿಂದ ತಯಾರಾಗುವ ಸೋಪು, ಶಾಂಪು, ಔಷಧಗಳು ಅಮೇಜಾನ್ ನಲ್ಲಿ ಸಿಗುತ್ತೆ.
ಮಥುರಾದಲ್ಲಿರುವ ಆರ್ ಎಸ್ ಎಸ್ ಬೆಂಬಲಿಲಿತ ದೀನ್ ದಯಾಳ್ ಗೋ ಧಾಮ ಕೇಂದ್ರ ಗೋಮೂತ್ರ, ಸಗಣಿಯಿಂದ ತಯಾರಿಸಲಾದ ಉತ್ಪನ್ನಗಳು, ವಿವಿಧ ತರಹದ ಬಟ್ಟೆಗಳನ್ನು ಅಮೇಜಾನ್ ನಲ್ಲಿ ಮಾರಾಟ ಮಾಡುವುದಾಗಿ ತಿಳಿಸಿದೆ.
ಈ ಮೊದಲು ಬೇರೆ ಬೇರೆ ವೈಬ್ ಸೈಟ್ ಗಳಲ್ಲಿ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದೆವು. ಈಗ ಅಮೇಜಾನ್ ನಲ್ಲಿ ಮಾರಾಟ ವಿಸ್ತರಿಸಲಿದ್ದೇವೆ ಎಂದು ಮ್ಯಾನೇಜರ್ ಘನಶ್ಯಾಮ್ ಗುಪ್ತಾ ಹೇಳಿದ್ದಾರೆ