ಇಂದು ರಾಜ್ಯಸಭೆ ಚುನಾಚಣೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಕೆಪಿಸಿಸಿ ಸಿಬ್ಬಂದಿಯೊಬ್ಬರು ಮತ ಹಾಕಲು ಬರುವಂತೆ ಶಾಸಕ ಅಂಬರೀಶ್ ಅವರಿಗೆ ಕರೆ ಮಾಡಿದ್ದಾರೆ. ಅಂಬರೀಶ್ ಆ ಕರೆಯನ್ನು ಸ್ವೀಕರಿಸಿರಲಿಲ್ಲ.
ಮೂರ್ನಾಲ್ಕು ಬಾರಿ ಕರೆ ಮಾಡಿದ್ರೂ ಸ್ವೀಕರಸದ ಅಂಬಿ ಐದನೇ ಬಾರಿ ಕರೆ ಸ್ವೀಕರಿಸಿದ್ದಾರೆ….! ಕರೆ ಸ್ವೀಕರಿಸಿ ತನ್ನದೇ ಶೈಲಿಯಲ್ಲಿ ಆ ಸಿಬ್ಬಂದಿಗೆ ಪ್ರೀತಿಯಿಂದಲೇ ಗದರಿದ್ದಾರೆ. ಈಗ ಸ್ನಾನಕ್ಕೆ ಹೊರಟಿದ್ದೇನೆ ಇರ್ಲಾ…ಸಂಜೆ 4ಗಂಟೆಯವರೆಗೂ ಟೈಮ್ ಅಯ್ತೆ ಎಂದಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ನಿಂದ ಹನುಮಂತಯ್ಯ, ನಸೀರ್ ಹುಸೇನ್, ಜೆ.ಸಿ ಚಂದ್ರಶೇಖರ್, ಬಿಜೆಪಿಯಿಂದ ರಾಜೀವ್ ಚಂದ್ರಶೇಖರ್, ಜೆಡಿಎಸ್ ನಿಂದ ಬಿ.ಎಂ ಫಾರೂಕ್ ಚುನಾವಣಾ ಕಣದಲ್ಲಿದ್ದಾರೆ.