ಖಾಸಗಿ ವೈದ್ಯರು ಈ ಡ್ರೈವರನ್ನು ನೋಡಿ ಕಲಿಯಬೇಕು…! ಮಗುವನ್ನು ಉಳಿಸಲು ಆ್ಯಂಬುಲೆನ್ಸ್ ಡ್ರೈವರ್ ಮಾಡಿದ್ದೇನು..?!

Date:

ಕರ್ನಾಟಕದಲ್ಲಿ ಖಾಸಗಿ ವೈದ್ಯರ ಮುಷ್ಕರಿಂದ ಜನ ಸಾಯ್ತಿದ್ದಾರೆ..! ಖಾಸಗಿ ವೈದ್ಯರು ಹಾಗೂ ಸರ್ಕಾರದ ನಡುವಿನ ಹಗ್ಗಜಗ್ಗಾಟದಿಂದ ಜನ ನರಳುತ್ತಿದ್ದಾರೆ. ಅಮಾಯಕ ಜನರನ್ನು ಒತ್ತೆಯಾಳಂತೆ ಇಟ್ಕೊಂಡು ವೈದ್ಯರು ಸ್ವಲ್ಪವೂ ಮಾನವೀಯತೆ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಇಂಥವರಿಗೆ ನಾಚಿಕೆ ಆಗುವಂತೆ ಕೇರಳದ ಆ್ಯಂಬುಲೆನ್ಸ್ ಚಾಲಕರೊಬ್ಬರು ಮಗುವಿನ ಜೀವವನ್ನು ಉಳಿಸಿದ್ದಾರೆ..! ಖಾಸಗಿ ವೈದ್ಯರು ಈ ಡ್ರೈವರನ್ನು ನೋಡಿ ಕಲಿಯಬೇಕು..


ಹೌದು, ಕೇರಳದ ಲೈಬಾ ಎಂಬ 31ದಿನದ ಮಗುವನ್ನು ಪೆರಿಯಾಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗು ಉಳಿಯಬೇಕೆಂದರೆ ತರ್ತು ಹೃದಯ ಚಿಕಿತ್ಸೆ ಆಗಬೇಕೆಂದು ಅಲ್ಲಿನ ವೈದ್ಯರು ಸೂಚಿಸಿದ್ದರು. ಮಗುವನ್ನು ಕೂಡಲೇ ತಿರುವಂತಪುರಕ್ಕೆ ಕರೆದುಕೊಂಡು ಹೋಗುವುದು ಅನಿವಾರ್ಯವಾಗಿತ್ತು. ಮಗುವನ್ನು ತಿರುವನಂತಪುರ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಹೊಣೆ ಹೊತ್ತಿದ್ದು ಕಾಸರಗೋಡು ಮೂಲದ ತಮೀಮ್ ಎಂಬ ಆ್ಯಂಬುಲೆನ್ಸ್ ಡ್ರೈವರ್. ರಾತ್ರೋರಾತ್ರಿ ಕೇವಲ 6 ಗಂmಯಲ್ಲಿ 508 ಕಿಮೀ ಕ್ರಮಿಸಿ ಮಗುವನ್ನು ತಿರುವನಂತಪುರದ ಶ್ರೀ ತಿರುನಲ್ ವೈದ್ಯಕೀಯ ಮಹಾವಿಜ್ಞಾನ ಸಂಸ್ಥೆಗೆ ಕರೆದೊಯ್ಯದರು.


ಮಗುವನ್ನು ಆದಷ್ಟು ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂಬ ವಿಚಾರವನ್ನು ತಮೀಮ್‍ಗೆ ಮೊದಲೇ ತಿಳಿಸಲಾಗಿತ್ತು. ಆಗಲ್ಲ ಅಂತ ಅವರು ಸುಮ್ಮನೇ ಕೂರಲಿಲ್ಲ. ಸವಾಲಾಗಿ ಸ್ವೀಕರಿಸಿ ಮಗುವಿನ ಜೀವ ಉಳಿಸಲು ತನ್ನ ಪ್ರಾಣ ಲೆಕ್ಕಿಸದೆ ಆ್ಯಂಬುಲೆನ್ಸ್ ಅನ್ನು ಚಾಲನೆ ಮಾಡಿದರು. ಕೋಝಿಕೋಡ್‍ನಲ್ಲಿ 20 ನಿಮಿಷ ನಿಲ್ಲಿಸಿದ್ದು ಬಿಟ್ಟರೆ ಬೇರೆಲ್ಲೂ ನಿಲ್ಲಿಸದೇ 508 ಕಿಮೀ ಕ್ರಮಿಸಿದ್ರು. ಒಟ್ಟು 6 ಗಂಟೆ45 ನಿಮಿಷದಲ್ಲಿ ಮಗುವನ್ನು ತಿರುವನಂತಪುರ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಿಳಿದು ಬಂದಿದೆ.

Share post:

Subscribe

spot_imgspot_img

Popular

More like this
Related

ರೈತರ ಬೇಡಿಕೆಗೆ ಮಣಿದ ಸರ್ಕಾರ: ಕಬ್ಬು ಟನ್‌ʼಗೆ 3300 ರೂ. ಬೆಲೆ ನಿಗದಿ

ರೈತರ ಬೇಡಿಕೆಗೆ ಮಣಿದ ಸರ್ಕಾರ: ಕಬ್ಬು ಟನ್‌ʼಗೆ 3300 ರೂ. ಬೆಲೆ...

ಸಕ್ಕರೆ ಲಾಬಿಯ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ ಇದೆ: ಹೆಚ್.ಡಿ. ಕುಮಾರಸ್ವಾಮಿ

ಸಕ್ಕರೆ ಲಾಬಿಯ ಒತ್ತಡಕ್ಕೆ ಸಿಎಂ ಮಣಿದಿರುವ ಸಾಧ್ಯತೆ ಇದೆ: ಹೆಚ್.ಡಿ. ಕುಮಾರಸ್ವಾಮಿ ಮೈಸೂರು:...

ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ: ಹವಾಮಾನ ಇಲಾಖೆ

ಕರ್ನಾಟಕದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣ ಮಳೆ: ಹವಾಮಾನ ಇಲಾಖೆ ಬೆಂಗಳೂರು: ಕರ್ನಾಟಕದಲ್ಲಿ...

ಬೆಳಿಗ್ಗೆ ನುಗ್ಗೆಕಾಯಿ ರಸ ಕುಡಿಯುವ ಅಭ್ಯಾಸ ಮಾಡಿಕೊಂಡ್ರೆ ಪ್ರಯೋಜನಗಳೇನು ಗೊತ್ತಾ..?

ಬೆಳಿಗ್ಗೆ ನುಗ್ಗೆಕಾಯಿ ರಸ ಕುಡಿಯುವ ಅಭ್ಯಾಸ ಮಾಡಿಕೊಂಡ್ರೆ ಪ್ರಯೋಜನಗಳೇನು ಗೊತ್ತಾ..? ನುಗ್ಗೆಕಾಯಿ (Drumstick)...