ಮಲ್ಲಿಕಾರ್ಜುನ ಬಂಡೆ ಮಕ್ಕಳನ್ನು ದತ್ತು ಪಡೆದ ಅಮಿತ್ ಶಾ…!

Date:

ಹುತಾತ್ಮ ಪಿಎಸ್ ಐ ಮಲ್ಲಿಕಾರ್ಜುನ ಬಂಡೆ ಅವರ ಇಬ್ಬರು ಮಕ್ಕಳಾದ ಶಿವಾನಿ ಹಾಗೂ ಸಾಯಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದತ್ತು ಪಡೆದಿದ್ದಾರೆ.


ಕಲಬುರಗಿಯ ಸೇಡಂ ರಸ್ತೆಯ ಇಎಸ್ ಐ ಆಸ್ಪತ್ರೆಯ ಆಡಿಟೋರಿಯಂ ನಲ್ಲಿ ನಡೆದ ಬಿಜೆಪಿ ವಿಭಾಗೀಯ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ , ಬಂಡೆ‌ ಮಕ್ಕಳ ಪರಿಸ್ಥಿತಿ ಬಗ್ಗೆ ಹೇಳಿದರು. ಸರ್ಕಾರ ತಿಂಗಳಿಗೆ ಕೇವಲ 1 ಸಾವಿರ ರೂ ಮಾತ್ರ ನೀಡುತ್ತಿದೆ. ಇದರಿಂದ ಶಿಕ್ಷಣಕ್ಕೆ ತೊಂದರೆ ಆಗುತ್ತದೆ ಎಂದು ಪರಿಸ್ಥಿತಿಯ ಬಗ್ಗೆ ಮರುಕ‌ಪಟ್ಟರು.


ಬಳಿಕ ಕೂಡಲೇ ಸ್ಪಂದಿಸಿದ ಅಮಿತ್ ಶಾ ಮಕ್ಕಳ ಸಂಪೂರ್ಣ ವೆಚ್ಚವನ್ನು ಬಿಜೆಪಿಯೇ ಭರಿಸುವುದು. ಹಾಗೂ ಈ ಇಬ್ಬರು ಮಕ್ಕಳನ್ನು ದತ್ತು ಪಡೆಯುವುದಾಗಿ ತಿಳಿಸಿದರು. ಮಲ್ಲಿಕಾರ್ಜುನ ಬಂಡೆಯವರು 2014 ಜನವರಿ 8 ರಂದು ಶಾರ್ಪ್ ಶೂಟರ್ ಮುನ್ನಾ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಗುಂಡೇಟು ತಿಂದು ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದರು.

Share post:

Subscribe

spot_imgspot_img

Popular

More like this
Related

ಕರ್ನಾಟಕದಲ್ಲಿ ಭಾರಿ ಮಳೆಯ ಮುನ್ಸೂಚನೆ: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಕರಾವಳಿ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಣೆ

ಕರ್ನಾಟಕದಲ್ಲಿ ಭಾರಿ ಮಳೆಯ ಮುನ್ಸೂಚನೆ: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಕರಾವಳಿ...

ಮನಬಂದಂತೆ ವಿದ್ಯಾರ್ಥಿಗೆ ಥಳಿಸಿದ ಕೇಸ್:‌ ಆರೋಪಿ ಶಿಕ್ಷಕ ಅರೆಸ್ಟ್.!‌

ಮನಬಂದಂತೆ ವಿದ್ಯಾರ್ಥಿಗೆ ಥಳಿಸಿದ ಕೇಸ್:‌ ಆರೋಪಿ ಶಿಕ್ಷಕ ಅರೆಸ್ಟ್.!‌ ಚಿತ್ರದುರ್ಗ: 9 ವರ್ಷದ...

ಟ್ಯೂನ ಮೀನು: ಆರೋಗ್ಯ, ಕೂದಲು, ಮೂಳೆಗಳಿಗೊಂದು ಸೂಪರ್‌ಫುಡ್! ತಪ್ಪದೇ ಸೇವಿಸಿ

ಟ್ಯೂನ ಮೀನು: ಆರೋಗ್ಯ, ಕೂದಲು, ಮೂಳೆಗಳಿಗೊಂದು ಸೂಪರ್‌ಫುಡ್! ತಪ್ಪದೇ ಸೇವಿಸಿ ಮೀನು ಪ್ರಿಯರಿಗೆ...

GST ಬದಲಾವಣೆಯಿಂದ ರಾಜ್ಯದ ಜನರಿಗೆ 15 ಸಾವಿರ ಕೋಟಿ ರೂಪಾಯಿ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

GST ಬದಲಾವಣೆಯಿಂದ ರಾಜ್ಯದ ಜನರಿಗೆ 15 ಸಾವಿರ ಕೋಟಿ ರೂಪಾಯಿ ನಷ್ಟ:...