‘ಮುಖ್ಯಮಂತ್ರಿ ಸಿದ್ದರಾಮಯ್ಯ ವೋಟಿನ ಆಸೆಗಾಗಿ ಏನ್ ಬೇಕಾದ್ರು ಮಾಡ್ತಾರೆ..! ವೋಟಿನ ಆಸೆಗಾಗಿ ಯಾರ್ಬೇಕೋ ಅವ್ರ ಬೂಟ್ ಸಹ ನೆಕ್ಕುವ ಸ್ಥಿತಿಗೆ ಬಂದಿದ್ದಾರೆ’..!
ಹೀಗಂತ ನಾಲಿಗೆ ಹರಿಬಿಟ್ಟಿರೋದು ಕೇಂದ್ರ ಕೌಶಲ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತ ಕುಮಾರ್ ಹೆಗಡೆ…! ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಅನಂತಕುಮಾರ್ ಹೆಗಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮತ್ತೆ ಸಿದ್ದರಾಮಯ್ಯ ಸರ್ಕಾರ ಬಂದರೆ ಕಸಬ್, ಒಸಾಮಾ ಬಿನ್ ಲಾಡನ್, ಟಿಪ್ಪು ಅಪ್ಪ ಹೈದರಾಲಿ ಜಯಂತಿ ಮಾಡಿಸ್ತಾನೆ ಅಂತ ಏಕವಚದಲ್ಲೇ ಟೀಕಿಸಿದರು…! ಉಗ್ರರಿಗೆ ಕರ್ನಾಟಕ ಸೇಫ್ ಝೋನ್ ಆಗಿದೆ…! ಸುಮಾರು 4.5 ಲಕ್ಷ ಬಾಂಗ್ಲಾ ವಲಸಿಗರಿದ್ದಾರೆ. ಇದನ್ನು ಪೊಲೀಸರೇ ಒಪ್ಪಿಕೊಂಡಿದ್ದಾರೆ ಎಂದರು. ಮೊನ್ನೆ ಟಿಪ್ಪು ಜಯಂತಿ ನಡೆಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಏಕಕೀಕರಣಕ್ಕೆ ಶ್ರಮಿಸಿದವರ ನೆನಪಾಗಲ್ಲ..! ರನ್ನ, ಜನ್ನ, ಕುವೆಂಪು ಅಂತವರು ನೆನಪಾಗಲ್ಲ..! ಕಿತ್ತೂರು ಉತ್ಸವಕ್ಕೆ ಬರೋಕೆ ಆಗಲ್ಲ ಎಂದು ಹೇಳಿದರು.