ಸಿನಿಮಾ ನಟ-ನಟಿಯರಂತೆ ಕಾಣಿಸಿಕೊಳ್ಳಬೇಕು ಅನ್ನೋ ಆಸೆ, ಮಹಾಕನಸು ಬಹುತೇಕ ಅಭಿಮಾನಿಗಳಲ್ಲಿರುತ್ತೆ…! ಕೆಲವರು ಅದಕ್ಕಾಗಿ ಏನ್ ಬೇಕಾದ್ರು ಮಾಡೋಕೆ ರೆಡಿ ಆಗಿರ್ತಾರೆ…! ಅಂತವರ ಸಾಲಿನಲ್ಲಿ ಮೊದಲು ನಿಲ್ತಾಳೆ ಈಕೆ…!
ಇರಾನಿ ಹುಡುಗಿ ತಬಾರ್. ಸೋಶಿಯಲ್ ಮೀಡಿಯಾದಲ್ಲಿ ಇವಳೀಗ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾಳೆ. ಹಾಲಿವುಡ್ ನಟಿ ಏಂಜಲೀನಾಳ ಬಹುದೊಡ್ಡ ಅಭಿಮಾನಿ ಈ ತಬಾರ್. ನಾನೂ ಏಂಜಲೀನಾಳಂತೆ ಕಾಣ್ಬೇಕು ಅಂತ 50 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಳಂತೆ…! ಇದೀಗ ಇವಳ ಈ ಕಥೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೊಳಗಾಗಿದೆ…ಟ್ರೋಲ್ ಗಳಿಗೂ ಆಹಾರವಾಗಿದೆ.