ನೀವು ನನ್ನ ಕೈ ಬಿಟ್ರೆ ಹಾಡು ಹೇಳಿಕೊಂಡು, ನಾಟಕವಾಡಿಕೊಂಡು ಜೀವನ ಮಾಡ್ತೀನಿ ಎಂದು ಶಾಸಕ ಅನ್ನದಾನಿ ತಿಳಿಸಿದ್ರು. ಈ ಬಗ್ಗೆ ಮಳವಳ್ಳಿ ಪಟ್ಟಣದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನೊಬ್ಬ ಸಾಂಸ್ಕೃತಿಕ ವ್ಯಕ್ತಿ, ಬರೀ ರಾಜಕೀಯವನ್ನೇ ನೆಚ್ಚಿಕೊಂಡಿಲ್ಲ. ರಾಜಕೀಯದಿಂದಲೇ ಆಸ್ತಿ ಮಾಡಿ ಶ್ರೀಮಂತ ಆಗಬೇಕೆಂಬುದು ನನಗಿಲ್ಲ. ನಾನು ಹಾಡು ಹೇಳುತ್ತೇನೆ, ನಾಟಕ ಕಲಿತಿದ್ದೇನೆ..
ನೀವೇನಾದ್ರು ನನ್ನ ತೆಗೆದ್ರೆ ಆರ್ಕೆಸ್ಟ್ರಾದಲ್ಲಿ ಹಾಡು ಹೇಳ್ಕೊಂಡು ಜೀವನ ಮಾಡಲು ತೊಂದರೆ ಇಲ್ಲ.
ನನಗೆ ಹಲವು ಕಲಾವಿದ ಸ್ನೇಹಿತರಿದ್ದು, 4 ಒಳ್ಳೆಯ ಹಾಡುಗಳನ್ನು ಹೇಳಿದ್ರೆ ಬದುಕು ನಡೆಸಿಕೊಂಡು ಹೋಗಬಹುದು. HDD, HDK ಅವರು ಸಣ್ಣ ಲೋಪ ಇಲ್ಲದೆ ಆಡಳಿತ ನಡೆಸಿದ್ದು, ಅವರ ಶಿಷ್ಯನಾಗಿ ಇಲ್ಲಿ ಏನ್ ಮಾಡ್ಬೇಕು ಎಂಬ ಚಿಂತನೆ ನಡೆಸ್ತಿದ್ದೇನೆ ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದ್ದಾರೆ. ಇನ್ನ
ಶಾಸಕ ಅನ್ನದಾನಿ ಹೇಳಿಕೆ ಚರ್ಚೆಗೆ ಗ್ರಾಸವಾಗಿದ್ದು, ಅವರಿಗೆ ಸೋಲಿನ ಭಯ ಕಾಡ್ತಿದ್ಯಾ ಎಂಬ ಪ್ರಶ್ನೆ ಉದ್ಭವವಾಗಿದೆ.
ಹಾಡು ಹೇಳಿಕೊಂಡು ನಾಟಕವಾಡಿಕೊಂಡು ಜೀವನ ಮಾಡ್ತೀನಿ
Date: