ಅನುಪಮಾ ಶೆಣೈ ಡಿವೈಎಸ್‍ಪಿ ಹುದ್ದೆಗೆ ರಾಜೀನಾಮೆ ನೀಡಿದ್ದು, ಮಾಜಿ ಸಚಿವ ಪರಮೇಶ್ವರ್ ನಾಯಕ್ ವಿರುದ್ದ ಫೇಸ್‍ಬುಕ್‍ನಲ್ಲಿ ಹರಿಹಾಯ್ದಿದ್ದು, ಕೊನೆಗೆ ಮೊನ್ನೆ ಮೊನ್ನೆ ಅದೇ ಪರಮೇಶ್ವರ್ ನಾಯಕನ್ನು ಸಚಿವ ಸಂಪುಟದಿಂದ ಕಿತ್ತೆಸೆದ ಬಳಿಕ ಅವರ ಪರ ಬ್ಯಾಟ್ ಬೀಸಿ ಅಮಾಯಕ, ಅವರು ಕೆಟ್ಟವ್ಯಕ್ತಿಯಲ್ಲ, ಅವರಿಗೂ ಅನ್ಯಾಯವಾಗಿದೆ ಎಂದು ಸರ್ಟೀಫಿಕೇಟ್ ಕೊಟ್ಟದ್ದು ಎಲ್ಲವೂ ಹಳೆವಿಚಾರ..! ಇದೇ ರೀತಿ ಈಗ ಸಚಿವ ಸ್ಥಾನ ಕಳ್ಕೊಂಡು ನೀರಿನಿಂದ ಹೊರಬಂದ ಮೀನಿನಂತೆ ವಿಲವಿಲ ಒದ್ದಾಡುತ್ತಿರುವ ಭಿನ್ನಮತೀಯ ಗುಂಪಿನ ನಾಯಕ ಶ್ರೀನಿವಾಸ ಪ್ರಸಾದರನ್ನು ನಿನ್ನೆ ಭೇಟಿ ಮಾಡಿದ್ದಾರೆ. ನಿಮನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಬೇಜಾರಾಗಿದೆ ಎಂದೂ ಹೇಳಿದ್ದಾರಂತೆ..! ಶ್ರೀನಿವಾಸ್ ಪ್ರಸಾದ್ ಕೂಡ ಅನುಪಮಾ ಪರ ಮಾತಾಡಿ, “ನಿಮ್ಮ ರಾಜೀನಾಮೆಯನ್ನು ತರಾತುರಿಯಲ್ಲಿ ಅಂಗೀಕರಿಸಿದ್ದಾರೆ. ನಾನು ಆಕ್ಷೇಪಿಸಿದ್ದೆ ಅಂತ ಹೇಳಿದ್ದಾರಂತೆ.! ನಂತರ ಮಾಧ್ಯಮದವರು ಎದುರಾದ್ರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ..!
ಓಕೆ, ಅದಿರಲಿ ಅನುಪಮಾ ಶೆಣೈ ರಾಜಕೀಯಕ್ಕೆ ಧುಮುಕುತ್ತಾರೋ ಎಂಬ ಪ್ರಶ್ನೆ ಎಲ್ಲೆಡೆ ಕೇಳಿ ಬರ್ತಾ ಇದೆ..! ಬಿಜೆಪಿ ಗಾಳ ಹಾಕುತ್ತೆ ಅಂತ ಒಂದು ವದಂತಿಯೂ ಇತ್ತು..! ಈಗ ಕಾಂಗ್ರೆಸ್ ಭಿನ್ನಮತಿಯರಿಗೆ ಬೆಂಬಲ ನೀಡ್ತೀದ್ದಾರೆ ಅನುಪಮಾ..! ಇವರು ಬಿಜೆಪಿ ಸೇರ್ತಾರಾ? ಕಾಂಗ್ರೆಸ್ ಸೇರ್ತಾರ, ಜೆಡಿಎಸ್ಸೋ? ಗೊತ್ತಿಲ್ಲ. ಯಾಕೋ ಇತ್ತೀಚಿಗಿನ ವಿದ್ಯಮಾನಗಳನ್ನು ನೋಡ್ತಾ ಇದ್ರೆ ರಾಜಕಾರಣಕ್ಕೆ ಬರ್ತಾರೆ ಅನ್ನೋದು ಕನ್ಫರ್ಮ್ ಆಗ್ತಿಲ್ವಾ? ನಿಮ್ಮ ಅಭಿಪ್ರಾಯ..?
POPULAR STORIES :
ಭಾರತೀಯ ಕ್ರಿಕೆಟ್ ದಿಗ್ಗಜರ ಎಜುಕೇಷನಲ್ ಕ್ವಾಲಿಫಿಕೇಷನ್‍ನ ಡೀಟೇಲ್ಸ್..!
ಮನೆ ಖರೀದಿಗೆ ಲೋನ್ ಬೇಕೇ????ಎಚ್ಚರ!!!!
ಅಪಘಾತ ಆಗಿದ್ದು 2009ರಲ್ಲಿ, 50,18,979 ರೂಪಾಯಿ ಸಿಕ್ಕಿದ್ದು 2016ರಲ್ಲಿ!
ಹುಡುಗಿಯರಿಗೂ ಅಂಟಿತೇ ರ‍್ಯಾಗಿಂಗ್ ರೋಗ..?? ಹೆಣ್ಣಿಗೆ ಹೆಣ್ಣೇ ಶತ್ರುವಾದಳೇ.?
ಕಬಾಲಿಗೆ ಕನ್ನಡದಲ್ಲಿ ಟಾಂಗ್ ಕೊಡುವ ಸಿನಿಮಾ ಯಾವುದು.?
ಕಾರ್ಮಿಕ ನಿದ್ರೆ ಮಾಡಿದ್ದಕ್ಕೆ ಬಟ್ಟೆ ಬಿಚ್ಚಿ ಹೊಡೆದ ಅವಿವೇಕಿ ಅಧಿಕಾರಿ..!
ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!