ತಾಯಿ ಭುವನೇಶ್ವರಿಗೂ ಇಷ್ಟವಾಗೋ ನಿರೂಪಣೆ ಇವರದ್ದು…!

Date:

ಮಾಧ್ಯಮಲೋಕದಲ್ಲಿ ಅನೇಕ ಜನ ನಿರೂಪಕರಿದ್ದಾರೆ. ಪ್ರತಿಯೊಬ್ಬ ನಿರೂಪಕರು ಸಹ ತಮ್ಮದೇ ಆದ ವಿಭಿನ್ನ ನಿರೂಪಣೆಯಿಂದ ಗುರುತಿಸಿಕೊಂಡು, ಜನರಿಗೆ ಹತ್ತಿರವಾಗಿದ್ದಾರೆ. ಕನ್ನಡದ ಪ್ರತಿಯೊಬ್ಬ ನಿರೂಪಕರೂ ಕೂಡ ಅವರದ್ದೇ ಆದ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿ ಆಗಿದ್ದಾರೆ.
ಆದರೆ, ಅಚ್ಚಕನ್ನಡದಲ್ಲಿ ಸ್ಪಷ್ಟವಾಗಿ, ಸ್ವಚ್ಛವಾಗಿ ನಿರೂಪಣೆ ಮಾಡುವ ನಿರೂಪಕರು ಸಿಗುವುದು ಅಪರೂಪ…! ಇಂಥಾ ಅಪರೂಪದ ನಿರೂಪಕರಲ್ಲಿ ಅಪರ್ಣಾ ಅವರು ಮಂಚೂಣಿಯಲ್ಲಿ ನಿಲ್ತಾರೆ. ಅಚ್ಚಕನ್ನಡದಲ್ಲಿನ ನಿರೂಪಣೆಗೆ ಇನ್ನೊಂದು ಹೆಸರೇ ಅಪರ್ಣಾ ಎನ್ನಬಹುದು…!ಅಪರ್ಣಾ ಎಂಬ ಈ ಅಪರೂಪದ ನಿರೂಪಕಿಯ ನಿರೂಪಣೆ ಕನ್ನಡ ತಾಯಿ ಭುವನೇಶ್ವರಿಗೂ ಇಷ್ಟವಾಗುತ್ತೆ ಎಂದರೆ ಅತಿಶಯೋಕ್ತಿಯಲ್ಲ ಅನಿಸುತ್ತೆ…!


ಅಪರ್ಣಾ ಅವರು ಹುಟ್ಟಿದ್ದು, ಬೆಳೆದಿದ್ದು, ಓದಿದ್ದು, ಬದುಕು ಕಟ್ಟಿಕೊಂಡಿದ್ದು ಬೆಂಗಳೂರಲ್ಲೇ. ತಂದೆ ಕೆ.ಎಸ್ ನಾರಾಯಣ ಸ್ವಾಮಿ, ತಾಯಿ ಪದ್ಮಾ ನಾರಾಯಣ ಸ್ವಾಮಿ. ಕೆ.ಎಸ್ ನಾರಾಯಣ ಸ್ವಾಮಿಯವರು ಕನ್ನಡಪ್ರಭದ ದಿನಪತ್ರಿಕೆಯಲ್ಲಿ ಸಹ ಸಂಪಾದಕರಾಗಿದ್ದವರು. ಪ್ರಜಾವಾಣಿ, ಪ್ರಜಾಮತ ಮೊದಲಾದ ಪತ್ರಿಕೆಗಳಲ್ಲಿ ಸೇವೆಸಲ್ಲಿಸಿದ್ದವರು. ತಾಯಿ ಪದ್ಮಾ ನಾರಾಯಣ ಸ್ವಾಮಿಯರು ಗಾಯಕಿ ಹಾಗೂ ಹವ್ಯಾಸಿ ಬರಹಗಾರರು. ಪತಿ ಕವಿ, ಲೇಖಕ ನಾಗರಾಜ ವಸ್ತಾರೆ.
ಬಿಇ ಪದವೀಧರೆ ಆಗಿರುವ ಅಪರ್ಣಾ ಅವವರಿಗೆ ಕಲೆ, ಸಾಹಿತ್ಯ, ಮಾಧ್ಯಮ ಕ್ಷೇತ್ರದದ ಕಡೆಗಿನ ಆಸಕ್ತಿ ತಂದೆ-ತಾಯಿಯಿಂದಾಗಿ ಬಂತು ಎಂದರೆ ತಪ್ಪಾಗಲಿಕ್ಕಿಲ್ಲ. ಬಾಲ್ಯದಲ್ಲಿ ತಂದೆ ಭಾನುವಾರ ತಮ್ಮ ಕಚೇರಿಗೆ ಹೋಗುವಾಗ ಕೆಲವೊಮ್ಮೆ ಇವರನ್ನು ಕರೆದುಕೊಂಡು ಹೋಗುತ್ತಿದ್ದಂತೆ.


ಅಪರ್ಣಾ ಅವರು ಆಕಾಶವಾಣಿ, ಕಿರುತೆರೆ, ಬೆಳ್ಳಿತೆರೆಯಲ್ಲೂ ತನ್ನದೇಯಾದ ಛಾಪು ಮೂಡಿಸಿದ್ದಾರೆ. 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಲ್ ಅವರ ‘ಮಸಣದ ಹೂವು’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದವರು. ಚೊಚ್ಚಲ ಚಿತ್ರಕ್ಕೇ ರಾಷ್ಟ್ರಪ್ರಶಸ್ತಿ ಪಡೆದ ಕೀರ್ತಿ ಇವರದ್ದು.


ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ದೂರದರ್ಶನದಲ್ಲಿ ನಿರೂಪಕಿಯಾಗಿ ಕನ್ನಡಿಗರ ಮನೆ-ಮನ ತಲುಪಿದವರು.  ಅನೇಕ ರಾಜ್ಯಪ್ರಶಸ್ತಿ ಪ್ರಧಾನ  ಸಮಾರಂಭಗಳಲ್ಲಿ ನಿರೂಪಣೆ ಮಾಡಿದ್ದಾರೆ. ಒಮ್ಮೆ 120ಕ್ಕೂ ಹೆಚ್ಚು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. ಅದರಲ್ಲಿ ಅನೇಕ ಪುರಸ್ಕೃತರ ಹೆಸರು ಕೊನೆಕ್ಷಣದಲ್ಲಿ ಅಪರ್ಣಾ ಅವರ ಕೈ ಸೇರಿದ್ದವು. ನಿರೂಪಣೆಗೆ ಹೋಗುವಾಗ ಹಲವು ಮಂದಿಯ ಪರಿಚಯ ಇರಲಿಲ್ಲ. ಆದರೂ ಸ್ಥಳದಲ್ಲೇ ಮಾಹಿತಿ ಕಲೆಹಾಕಿ ಕಾರ್ಯಕ್ರಮಮಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡಿದ್ದರು.


ಕನ್ನಡ ಬಿಗ್ ಬಾಸ್ ಸೀಸನ್ 1ರಲ್ಲಿ ಪಾಲ್ಗೊಂಡಿದ್ದರು. ಅಪರ್ಣಾ ಅವರ ಹೆಸರು ಕೇಳುತ್ತಿದ್ದಂತೆ ನೆನಪಾಗೋದು ಇತ್ತೀಚೆಗೆ ಮುಕ್ತಾಯವಾದ ಕಲರ್ಸ್ ಕನ್ನಡ ವಾಹಿನಿ ‘ಮಜಾ ಟಾಕೀಸ್’ ನಲ್ಲಿ ಇವರ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡ ಇವರನ್ನು ಮರೆಯಲಾದೀತೆ…?
ನಿರೂಪಣೆ, ಸಿನಿಮಾ, ಧಾರವಾಹಿ ಹೀಗೆ ನಾನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಇವರು ಬರಹಗಾರರೂ ಹೌದು. ಪತ್ರಿಕೆಗಳಿಗೆ ಬರೆಯುತ್ತಿರುತ್ತಾರೆ.


ದೂರದರ್ಶನದ ಆರಂಭಿಕ ದಿನಗಳಿಂದ ಹಿಡಿದು ಇವತ್ತಿನ ಟೆಲಿವಿಷನ್ ವಾಹಿನಿಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹೆಗ್ಗಳಿಕೆ ಇವರದ್ದು. ದೃಶ್ಯಮಾಧ್ಯಮಲೋಕದ ಇವರ ಅನುಭಗಳಿಗೆ ಅಕ್ಷರ ರೂಪ ಕೊಡುವ ಬಗ್ಗೆಯೂ ಯೋಚಿಸಿದ್ದಾರಂತೆ.
ಇವರ ಜೀವನದ ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಅಂದ್ರೆ, ಇವರ ಅಜ್ಜಿ ಮನೆಯವರು ರೈತರು. ಇವರನ್ನು ನೋಡಿ ವ್ಯವಸಾಯದಲ್ಲಿ ಆಸಕ್ತಿ ಬೆಳೆದಿತ್ತಂತೆ. ಅಷ್ಟೇ ಅಲ್ಲದೆ ರೈತನನ್ನು ಮದುವೆಯಾಗಿ ಹಳ್ಳಿ ಜೀವನ ನಡೆಸೋ ಆಸೆ ಇವರದ್ದಾಗಿತ್ತಂತೆ. ಕೊನೆಗೆ ಇವರು ಮದುವೆಯಾಗಿದ್ದು ಸಾಹಿತ್ಯ ಕೃಷಿಕ ನಾಗರಾಜ ವಸ್ತಾರೆ ಅವರನ್ನು.


ವಸ್ತಾರೆ ಹಾಗೂ ಅಪರ್ಣಾ ಅವರದ್ದು ಪ್ರೇಮವಿವಾಹ. ಆಕಾಶವಾಣಿಯಲ್ಲಿ ಅಪರ್ಣಾ ಅವರ ಧ್ವನಿಯನ್ನು ಕೇಳಿ, ದೂರದರ್ಶನದ ಪರದೆಯಲ್ಲಿ ಅಪರ್ಣಾ ಅವರನ್ನು ನೋಡಿ ಇವರನ್ನು ಭೇಟಿ ಆಗಬೇಕು, ಮಾತನಾಡಿಸಬೇಕು ಅಂತ ನಾಗರಾಜ ವಸ್ತಾರೆಯವರ ಆಸೆಯಾಗಿತ್ತಂತೆ. ಅಪರ್ಣಾ ಅವರ ಧ್ವನಿ ಕೇಳಿಯೇ ನಾಗರಾಜ್ ಅವರಿಗೆ ಅಪರ್ಣಾ ಅವರು ಇಷ್ಟವಾಗಿಬಿಟ್ಟಿದ್ದರಂತೆ. ಅಪರ್ಣಾ ಅವರನ್ನು ಭೇಟಿ ಆಗಬೇಕು ಎಂದು ಸ್ನೇಹಿತರೊಬ್ಬರಲ್ಲಿ ಹೇಳಿಕೊಂಡಿದ್ದರಂತೆ. ಅದೃಷ್ಟವಶಾತ್ ಆ ಸ್ನೇಹಿತರು ಅಪರ್ಣಾ ಅವರಿಗೂ ಪರಿಚಿತರಾಗಿದ್ದರಂತೆ…! ವಸ್ತಾರೆ ಅವರ ಕಥೆ, ಲೇಖನಗಳನ್ನು ಓದಿದ್ದ ಅಪರ್ಣಾ ಅವರನ್ನು ಭೇಟಿ ಆಗಲು ಒಪ್ಪಿದರಂತೆ. ಆತ್ಮೀಯತೆ ಬೆಳೆದ ಮೇಲೆ ಒಂದು ದಿನ ವಸ್ತಾರೆ ಅವರೇ ಅಪರ್ಣಾ ಅವರಿಗೆ ಪ್ರಪೋಸ್ ಮಾಡಿದರಂತೆ…! ಒಂದಷ್ಟು ಸಮಯ ತಗೊಂಡು ಬಳಿಕ ಅಪರ್ಣಾ ಗ್ರೀನ್ ಸಿಗ್ನಲ್ ಕೊಟ್ಟರಂತೆ.


ಇನ್ನು ಕಂಗ್ಲಿಷ್ ಇಲ್ಲದೆ ಕನ್ನಡ ನಿರೂಪಣೆ ಮಾಡಲು ಆಗುವುದೇ ಇಲ್ಲ..! ಕನ್ನಡ ಕಾರ್ಯಕ್ರಮಗಳಲ್ಲಿ ಮುಕ್ಕಾಲು ಭಾಗ ಇಂಗ್ಲಿಷ್ ಇದ್ದರೇನೇ ಅದು ಚಂದದ ನಿರೂಪಣೆ ಎನ್ನುವ ಭ್ರಮೆಯಲ್ಲಿರೋರು 1ಸಾವಿರಕ್ಕೂ ಹೆಚ್ಚು ಟಿವಿ ಶೋಗಳನ್ನು ನಡೆಸಿಕೊಟ್ಟಿರುವ ಅಪರ್ಣಾ ಅವರನ್ನು ನೋಡಿ ಕಲಿಯಬೇಕು.


-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

10 ನವೆಂಬರ್ 2017 : ಈಶ್ವರ್ ದೈತೋಟ

11 ನವೆಂಬರ್ 2017 : ಭಾವನ

12  ನವೆಂಬರ್ 2017 : ಜಯಶ್ರೀ ಶೇಖರ್

13 ನವೆಂಬರ್ 2017 : ಶೇಷಕೃಷ್ಣ

14 ನವೆಂಬರ್ 2017 : ಶ್ರೀಧರ್ ಶರ್ಮಾ

15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

16 ನವೆಂಬರ್ 2017 : ಅರವಿಂದ ಸೇತುರಾವ್

17 ನವೆಂಬರ್ 2017 : ಲಿಖಿತಶ್ರೀ

18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

19 ನವೆಂಬರ್ 2017 : ಅಪರ್ಣಾ

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...