ಸ್ಮಾರ್ಟ್ ಫೋನ್ ಮಾರುಕಟ್ಟೆಯ ದಿಗ್ಗಜ ಅಮೆರಿಕಾದ ಆ್ಯಪಲ್ ಸಂಸ್ಥೆ ಐಫೋನ್ ಗಳಿಂದಾಗಿ ಜಗತ್ತಿನಾದ್ಯಂತ ಹೆಸರು ಮಾಡಿದೆ. ಗುಣಮಟ್ಟದ ವಿಚಾರದಲ್ಲಿ ಯಾವತ್ತು ರಾಜಿ ಮಾಡಿಕೊಳ್ಳದ ಆ್ಯಪಲ್ ಸಂಸ್ಥೆ ಈಗ ಗ್ರಾಹಕರ ಕ್ಷಮೆ ಕೋರಿದೆ…!
ಆ್ಯಪಲ್ ಹಳೆ ಮಾದರಿಯ ಐಫೋನ್ ಮೊಬೈಲ್ ಗಳಲ್ಲಿ ಕಡಿಮೆ ಗುಣಮಟ್ಟದ ಬ್ಯಾಟರಿಗಳನ್ನು ಅಳವಡಿಸುತ್ತಿದೆ ಎಂದು ಶಾಂಘೈನ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಶಾಂಘೈನ ಗ್ರಾಹಕರ ನ್ಯಾಯಲಯ ಆ್ಯಪಲ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿತ್ತು. ಈಗ ಆ್ಯಪಲ್ ಸಂಸ್ಥೆ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದೆ. ಈ ಕುರಿತು ಆ್ಯಪಲ್ ತಪ್ಪೊಪ್ಪಿಗೆ ಹೇಳಿಕೆ ಬಿಡುಗಡೆ ಮಾಡಿದೆ.