ಸೇಬು ಕತ್ತರಿಸಿದ ನಂತರ ಏಕೆ ಕಂದು ಬಣ್ಣಕ್ಕೆ ತಿರುಗುತ್ತದೆ? ಪರಿಹಾರವೇನು..?
ದಿನ ಒಂದು ಸೇಬನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ. ಆದರೆ ಸೇಬನ್ನು ಕತ್ತರಿಸಿದ ಕೆಲವೇ ನಿಮಿಷಗಳಲ್ಲಿ ಅದು ಕಂದು ಬಣ್ಣಕ್ಕೆ ತಿರುಗುವುದು ಎಲ್ಲರಿಗೂ ಗೊತ್ತಿರಬಹುದಾದ ಸಂಗತಿಯೆ. ಆದರೆ ಇದಕ್ಕಿರುವ ವೈಜ್ಞಾನಿಕ ಕಾರಣ ಬಹುತೇಕ ಜನರಿಗೆ ತಿಳಿದಿರದು.
ಸೇಬಿನ ತಿರುಳನ್ನು ಗಾಳಿಗೆ ಒಡ್ಡಿದಾಗ, ಅದರ ಕೋಶಗಳಲ್ಲಿ ಇರುವ ಪಾಲಿಫಿನಾಲ್ ಆಕ್ಸಿಡೇಸ್ ಎಂಬ ಕಿಣ್ವ, ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ಕ್ರಿಯೆಗಿಳಿದು ಮೆಲನಿನ್ ಎಂಬ ಕಂದು ಬಣ್ಣದ ಸಂಯುಕ್ತವನ್ನು ರೂಪಿಸುತ್ತದೆ. ಇದರಿಂದಾಗಿ ಸೇಬು ಬಣ್ಣ ಬದಲಾಗುತ್ತದೆ.
ಈ ಬಣ್ಣ ಬದಲಾವಣೆಯನ್ನು ತಡೆಯಲು ಕೆಲವೊಂದು ಸರಳ ವಿಧಾನಗಳಿವೆ:
ಸೇಬಿನ ಮೇಲೆ ನಿಂಬೆ ರಸ ಹಚ್ಚುವುದು
ಉಪ್ಪು ನೀರಿನಲ್ಲಿ ನೆನೆಸುವುದು
ಅಥವಾ ಗಾಳಿಯಾಡದ ಡಬ್ಬಿಯಲ್ಲಿ ಮುಚ್ಚಿಡುವುದು
ಹೀಗೆ ಮಾಡಿದರೆ ಹಣ್ಣಿನ ತಾಜಾತನವನ್ನು ಹೆಚ್ಚು ಹೊತ್ತು ಕಾಯ್ದುಕೊಳ್ಳಬಹುದು. ಸೇಬು ಪೋಷಕಾಂಶಗಳಿಂದ ಕೂಡಿರುವ ಕಾರಣ ದಿನಕ್ಕೆ ಒಂದು ಸೇಬು ಆರೋಗ್ಯವರ್ಧಕವೆಂದು ತಜ್ಞರು ಅಭಿಪ್ರಾಯಪಡುತ್ತಾರೆ.