ಐಸ್ ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಡ್ರಾ ಕ್ಕೆ ತೃಪ್ತಿಪಟ್ಟು, ಕ್ರೂವೇಷಿಯಾ ವಿರುದ್ಧ ಸೋಲನುಭವಿಸಿದ ಅರ್ಜೆಂಟೀನಾ ಫಿಫಾ ವಿಶ್ವಕಪ್ ನಲ್ಲಿ ಜೀವಂತವಾಗಿ ಉಳಿದುಕೊಳ್ಳಲು ಇಂದು ನೈಜೀರಿಯಾ ವಿರುದ್ಧ ಗೆಲ್ಲಲೇ ಬೇಕಿದೆ.
ಪ್ರಶಸ್ತಿಗೆ ಮುತ್ತಿಕ್ಕುವ ನೆಚ್ಚಿನ ತಂಡ ಎಂಬ ಹಣೆಪಟ್ಟಿಯೊಂದಿಗೆ ವಿಶ್ವಕಪ್ ಅಖಾಡಕ್ಕೆ ಇಳಿದಿದ್ದ ಅರ್ಜೆಂಟೀನಾ ನಾಕೌಟ್ ತಲುಪಲು ಇಂದಿನ ಪಂದ್ಯದ ಗೆಲುವು ಅನಿವಾರ್ಯವಾಗಿದೆ.
ನೈಜಿರಿಯಾ ವಿರುದ್ಧ ಅರ್ಜೆಂಟನಾ ಗೆಲ್ಲುವುದಲ್ಲದೆ , ಅರ್ಜೆಂಟೀನಾ ಉಳಿಯಲು ಕ್ರೋವೇಷಿಯಾ ವಿರುದ್ಧ ಐಸ್ ಲ್ಯಾಂಡ್ ಸೋಲಬೇಕು. ಒಂದು ವೇಳೆ ಐಸ್ ಲ್ಯಾಂಡ್ ಗೆದ್ದರೆ ಅರ್ಜೆಂಟೀನಾ ಗೋಲುಗಳ ವ್ಯತ್ಯಾಸದಲ್ಲಿ ಮುನ್ನಡೆ ಸಾಧಿಸಬೇಕಿದೆ.