ರಿಯಲ್ ಎಸ್ಟೇಟ್​ ಹೆಸರಿನಲ್ಲಿ ವಂಚಿಸಿದಕ್ಕೆ ನಿರ್ಮಾಪಕನ ಬಂಧನ

Date:

ಬೆಂಗಳೂರು : ಸಿನಿಮಾಗೆ ಬಂಡವಾಳ ಹಾಕಿ ಲಾಸ್ ಆದ ಬಳಿಕ ಅಡ್ಡದಾರಿ ಹಿಡಿದಿದ್ದ ಸ್ಯಾಂಡಲ್ ವುಡ್ ನಿರ್ಮಾಪಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ ಸೇರಿ ನಾಲ್ವರನ್ನ ರಾಜಾಜಿನಗರ ಠಾಣೆ ಪೊಲೀಸರಿಂದ ಬಂಧನ ಮಾಡಲಾಗಿದೆ. ಮಂಜುನಾಥ, ಶಿವಕುಮಾರ, ಗೋಪಾಲ, ಚಂದ್ರಶೇಖರ ಬಂಧಿತ ಆರೋಪಿಗಳು. ರಿಯಲ್ ಎಸ್ಟೇಟ್​ ಹೆಸರಿನಲ್ಲಿ ವಂಚಿಸಿದಕ್ಕೆ ನಿರ್ಮಾಪಕನ ಬಂಧನ ಮಾಡಲಾಗಿದೆ. ಸಿನಿಮಾಗೆ ಕೋಟ್ಯಂತರ ರೂ. ಬಂಡವಾಳ ಹೂಡಿದ್ದ ಮಂಜುನಾಥ, ಸಿನಿಮಾ ನಿರೀಕ್ಷಿತ ಪ್ರದರ್ಶನ ಕಾಣದೆ ನಷ್ಟವಾಗಿತ್ತು. ರಾಜಾಜಿನಗರದಲ್ಲಿ ಈಗಲ್ ಟ್ರೀ ಬಿಲ್ಡರ್ಸ್ ಆಯಂಡ್​ ಡೆವಲಪರ್ಸ್​ ಡಾಟ್​ ಹೆಸರಿನಲ್ಲಿ ಮಂಜುನಾಥ ರಿಯಲ್ ಎಸ್ಟೇಟ್​ ಕಚೇರಿ ತೆರೆದಿದ್ದ. ಜಾಹೀರಾತು ನೀಡಿದ್ದ ಮಂಜುನಾಥನನ್ನು ಪುಷ್ಪಕುಮಾರ್​ ಎನ್ನುವವರು ಸಂಪರ್ಕಿಸಿದ್ದಾರೆ. ಕಡಿಮೆ ಬೆಲೆಗೆ ಸೈಟ್ ಕೊಡಿಸುವುದಾಗಿ ಮಂಜುನಾಥ 2 ಲಕ್ಷ ಪಡೆದಿದ್ದ. ಯಾರದ್ದೋ ಸೈಟ್ ತೋರಿಸಿ ಕೊಡಿಸುವುದಾಗಿ ನಂಬಿಸಿದ್ದ. ದಾಖಲೆ ಕೇಳಿದಾಗ ಮಂಜುನಾಥನ ವಂಚನೆ ಜಾಲ ಬಯಲಾಗಿತ್ತು. ರಾಜಾಜಿನಗರ ಪೊಲೀಸ್​ ಠಾಣೆಗೆ ಪುಷ್ಪಕುಮಾರ್ ದೂರು ನೀಡಿದ್ದು, ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸ್ ಸಿಬ್ಬಂದಿ, ನಿರ್ಮಾಪಕ ಮಂಜುನಾಥ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು:...