ATM ಕಾರ್ಡ್ ಇಲ್ಲದೇ ಹಣ ಡ್ರಾ ಮಾಡಿಕೊಳ್ಳಿ…!

Date:

ನೀವು ಇನ್ನು ಎಟಿಎಂ ಕಾರ್ಡ್ ಇಲ್ಲದೇ ಹಣ ಡ್ರಾ ಮಾಡಿಕೊಳ್ಳಬಹುದು. ಈ ಸೌಲಭ್ಯವನ್ನು ಪ್ರಪ್ರಥಮಬಾರಿಗೆ ಎನ್ನುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿ ಐ) ಒದಗಿಸುತ್ತಿದೆ.
ಗ್ರಾಹಕರ ಎಟಿಎಂ‌ ಕಾರ್ಡ್ ಗಳನ್ನು ನಕಲು ಮಾಡುವುದು ಇಲ್ಲವೇ ದುರ್ಬಳಕೆ ಮಾಡಿಕೊಳ್ಳುವುದು , ಮಾಹಿತಿ ಕದಿಯುವುದು ಇತ್ತೀಚೆಗೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇವುಗಳಿಗೆ ಕಡಿವಾಣ ಹಾಕಲು ಎಸ್ ಬಿ ಐ ಈ ನಿರ್ಧಾರ ತೆಗೆದುಕೊಂಡಿದೆ.
ಎಟಿಎಂ ಗಳಲ್ಲಿ ಕಾರ್ಡ್ ಇಲ್ಲದೆಯೇ ಹಣ ತೆಗೆದುಕೊಳ್ಳುವ ‘ಯೋನೊ ಕ್ಯಾಶ್’ ಸೇವೆ ಜಾರಿಗೆ ತಂದಿದೆ.
16, 500 ಎಸ್ ಬಿಐ ಎಟಿಎಂಗಳಲ್ಲಿ ಈ ಸೇವೆ ಲಭ್ಯವಿದೆ. ಯೋನೋ (ಯೂ ಓನ್ಲಿ ನೀಡ್ ಒನ್) ಆ್ಯಪ್ ಅನ್ನು ಮೊಬೈಲ್ ನಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳಬೇಕು. ಅದಕ್ಕೆ 6 ಅಂಕಿಗಳ ಯೋನೊ ಕ್ಯಾಶ್ ಪಿನ್ ಅನ್ನು ಸೆಟ್ ಮಾಡಿಕೊಳ್ಳಬೇಕು.
ಆ್ಯಪ್ ಅನ್ನು ತೆರೆದು ಎಟಿಎಂಗಳಲ್ಲಿ ಹಣ ಹಿಂತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಕ್ಲಿಕ್ ಮಾಡಿದ್ರೆ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ಗೆ 6 ಅಂಕಿಗಳ ಪಿನ್ ನಂಬರ್ ಬರುತ್ತದೆ. ‌ಆ ಮೆಸೇಜ್ ಬಂದ 30 ನಿಮಿಷದೊಳಗೆ‌ ಹತ್ತಿರದ ಯೋನೊ‌ ಕ್ಯಾಶ್ ಪಾಯಿಂಟ್ ಗೆ ಹೋಗಿ ಆ ಮಷಿನ್ ನಲ್ಲಿ ನಿಮ್ಮ ಮೊಬೈಲ್ ಗೆ ಬಂದ ಪಿನ್ ಅನ್ನು ನಮೂದಿಸಿ ಹಣ ಡ್ರಾ ಮಾಡಿಕೊಳ್ಳಬಹುದು.‌

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...