ಆಂಟಿ ಪ್ರೀತ್ಸೆ ಪ್ರೀತ್ಸೆ…ನಿನ್ನ ನಾ ಮದುವೆಯಾಗ್ತೀನೆ..!

Date:

ಅವನಿಗಿನ್ನೂ 20 ವರ್ಷ ವಯಸ್ಸು..! ಆಂಟಿಯರ ಬಾಳಲ್ಲಿ ಆಡುವುದೇ ಕೆಲಸ..! ಕೊನೆಗೂ ಇವನ ರಂಗಿನಾಟಕ್ಕೆ ಬ್ರೇಕ್ ಬಿದ್ದಿದೆ. ಈ ಸ್ತ್ರೀಲೋಲ ನ ಕತೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರ..!


ಆಂಟಿ ಪ್ರೀತ್ಸೆ ಪ್ರೀತ್ಸೆ..ನಿನ್ನ ನಾ ಮದುವೆ ಆಗ್ತೀನೇ ಎಂದು ಅಸಹಾಯಕ ಮಹಿಳೆಯರ ಹಿಂದೆ ಬಿದ್ದು ಅವರನ್ನು ವಂಚಿಸುತ್ತಿದ್ದ ಯುವಕ ತುಮಕೂರಿನ ಇಮ್ರಾನ್ (20).
ಆಂಟಿಯರನ್ನು ಪಟಾಯಿಸಿ ತನ್ನ ಕೆಲಸ ಮುಗಿಸಿಕೊಂಡು ನಡುರಸ್ತೆಯಲ್ಲಿ ಕೈಬಿಟ್ಟು ಹೋಗುತ್ತಿದ್ದ ಈ ಯುವಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.


ಅಸಹಾಯಕ ಕುಟುಂಗಳನ್ನೇ ಟಾರ್ಗೆಟ್ ಮಾಡಿಕೊಂಡು ಅಲ್ಲಿನ ಅಸಹಾಯಕ ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸುತ್ತಿದ್ದ ಎನ್ನಲಾಗಿದೆ. ಈತ ವಂಚಿಸಿದ್ದು ಒಬ್ಬರು-ಇಬ್ಬರು ಮಹಿಳೆಯರನ್ನಲ್ಲ. ಐದು ಮಂದಿ ಮಹಿಳೆಯರನ್ನು ಎಂದು ತಿಳಿದುಬಂದಿದೆ.
ಈತ ವಿವಾಹಿತ ಮಹಿಳೆಯರನ್ನು ಹಣದ ಆಸೆ ತೋರಿಸಿ ಬಳಸಿಕೊಳ್ಳುತ್ತಿದ್ದ, ಮೂಗನ ಪತ್ನಿ ಸೇರಿದಂತೆ ಅಂಗವಿಕಲರ ಹೆಂಡತಿಯರು ಹಾಗೂ ವಿಧವೆಯರೇ ಈತನ ಗುರಿಯಾಗಿದ್ರಂತೆ. ಹಣದ ಆಮಿಷವೊಡ್ಡಿ, ಬಾಳು ಕೊಡ್ತೀನಿ ಎಂದು ನಂಬಿಸಿ ಕೈ ಕೊಡುತ್ತಿದ್ದ ಇವನ ಕಾಟಕ್ಕೆ ತುಮಕೂರಿನ ನಜರಾಬಾದ್‍ನ ನಿವಾಸಿಗಳು ಸಿಟ್ಟಿಗೆದ್ದು, ತಿಲಕ್‍ಪಾರ್ಕ್ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಪುಣ್ಯಾತ್ಮ ತನ್ನಿಂದ ಮೋಸಕ್ಕೆ ಒಳಗಾದ ಕೆಲ ಮಹಿಳೆಯರಿಗೆ ಸ್ನೇಹಿತರ ಜೊತೆ ಮದುವೆ ಮಾಡಿಸಿದ್ದಾನೆ ಎಂಬ ಆರೋಪ ಸಹ ಕೇಳಿಬಂದಿದೆ.

Share post:

Subscribe

spot_imgspot_img

Popular

More like this
Related

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...