ಸಾವು ಹೇಗೆ ಬರುತ್ತೋ..? ಎಲ್ಲಿ ಬರುತ್ತೋ ಅಂತ ಯಾರಿಗೂ ಗೊತ್ತಾಗಲ್ಲ..! ಈ ಕ್ಷಣದಲ್ಲಿ ನಗ್ತಾ ನಗ್ತಾ ಇರೋರು ಮರು ಕ್ಷಣದಲ್ಲೇ ಸದ್ದಿಲ್ಲದೆ ಸಾವನ್ನಪ್ಪಬಹುದು..!
ನಮ್ಮ ಬೆಂಗಳೂರಿನ ಆಟೋ ಚಾಲಕರೊಬ್ಬರು ಹೀಗೆ ಸದ್ದಿಲ್ಲದಂತೆ ಸಾವನ್ನಪ್ಪಿದ್ದಾರೆ. ವೆಸ್ಟ್ ಆಫ್ ಕಾರ್ಡ್ ರೋಡ್‍ನಲ್ಲಿ ಈ ಘಟನೆ ಸಂಭವಿಸಿದೆ. ಆಟೋಚಾಲಕರೊಬ್ಬರು ಆಟೋದಲ್ಲಿ ಕುಳಿತ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ.
ನಿನ್ನೆ ರಾತ್ರಿ 11 ಗಂಟೆಗೆ ಪ್ರಯಾಣಿಕರು ಬಾಡಿಗೆಗೆ ಆಟೋ ಕೇಳಲು ಹೋದಾಗ ಮೃತಪಟ್ಟಿರೋದು ತಿಳಿದುಬಂದಿದೆ. ದೇಹದ ಮೇಲೆ ಯಾವುದೇ ಗಾಯಗಳಿಲ್ಲ. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಹೀಗೆ ದುರ್ಮರಣವನ್ನಪ್ಪಿದ ಆಟೋಚಾಲಕ ಆಸೀಪ್ ಎಂದು ಗುರುತಿಸಲಾಗಿದೆ.