ಇಂದು ಆಟೋಗಳಲ್ಲಿ ಬೀಳಲ್ಲ ಮೀಟರ್ ಬೋರ್ಡ್..!!!

Date:

ಆಟೋ… ಯಲಹಂಕ ಹೋಗಬೇಕು ಬರ್ತೀರಾ..? ಬನ್ನಿ ಹತ್ತಿ. ಎಷ್ಟಾಗತ್ತೇ..? ಸಾವಿರ ರೂಪಾಯಿ ಆಗತ್ತೆ. ಎಷ್ಟು…? 1000 ರೀ… ಬರೋದಿದ್ರೆ ಬನ್ನಿ.. ಇದು ಬೆಂಗಳೂರಿನ ಸುತ್ತಾಮುತ್ತಾ ನಡಿತಾ ಇರೋ ಆಟೋ ಚಾಲಕರ ಸುಲಿಗೆ..
ಹೌದು. ಇಂದು ರಾಜ್ಯ ವ್ಯಾಪ್ತಿ ಸಾರಿಗೆ ನೌಕರರು ನಡೆಸುತ್ತಿರುವ ಸಾರಿಗೆ ಮುಷ್ಟರದಿಂದ ಲಾಭ ಪಡೆಯತ್ತಿರುವುದು ಮಾತ್ರ ಖಾಸಗೀ ವಾಹನ ಚಾಲಕರು ಮತ್ತು ಮಾಲಿಕರು. ಅದೇನೋ ಇಬ್ಬರ ಜಗಳ ಮೂವರಿಗೆ ಲಾಭ ಅಂತಾರಲ್ಲ ಆ ಸನ್ನಿವೇಶ ನಿರ್ಮಾಣವಾಗಿದೆ ನೋಡಿ.
ವೇತನ ಪರಿಷ್ಟರಣೆ ಮಾಡುವಂತೆ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಬಿಸಿ ಮಟ್ಟಿಸಲು ಎಲ್ಲಾ ಸಾರಿಗೆ ನೌಕರರು ರಾಜ್ಯಾದ್ಯಂತ ಅಘೋಷಿತ ಮುಷ್ಕರ ಹೂಡಿದೆ ಆದರೆ ಇದರ ಬಿಸಿ ಸರ್ಕಾರಕ್ಕೆ ತಟ್ಟಿದಿಯೋ ಗೊತ್ತಿಲ್ಲ ಪ್ರಯಾಣಿಕರಿಗಂತೂ ಖಂಡಿತಾ ತಟ್ಟಿದೆ ಬಿಡಿ..
ಮುಷ್ಕರದಿಂದ ಯಾವೊಂದು ಸರ್ಕಾರಿ ಬಸ್‍ಗಳೂ ರಸ್ತೆಗಿಳಿಯಲಿಲ್ಲ. ಇದನ್ನೇ ಲಾಭವಾಗಿಸಿಕೊಂಡು ಜನರಲ್ಲಿ ಸುಲಿಗೆ ಮಾಡಲು ಶುರು ಮಾಡಿದೆ ಆಟೋ ಮತ್ತಿತರ ವಾಹನಗಳು. ಇಷ್ಟ ಇದ್ರೆ ಬನ್ನಿ ಕಷ್ಟ ಆದ್ರೆ ಹೋಗಿ ಇಂದು ನಾವು ಮೀಟರ್ ಹಾಕೊಲ್ಲ ಎಂದು ಸಾರ್ವಜನಿಕರಿಗೆ ಧಮ್ಕಿ ಹಾಕ್ತಾ ಇದ್ದಾರೆ..!
ಪ್ರತಿ ದಿನಕ್ಕಿಂತ 5 ಪಟ್ಟು ಜಾಸ್ತಿ ಹಣ ಸುಲುಗೆ ಮಾಡುತ್ತಿರುವ ಆಟೋ ಚಾಲಕರು ಕನಿಷ್ಟ ಚಾರ್ಜ್ ಬರೋಬ್ಬರಿ 100 ರಿಂದ 150 ರೂ. ಇನ್ನು ದೂರದ ಪ್ರಯಾಣಕ್ಕೆ ಎಷ್ಟು ಹಣ ಕಸಿಯಬಹುದು ನೀವೇ ಯೋಚಿಸಿ..! ಸರ್ಕಾರ ಅಧಿಕ ಹಣ ಕೇಳಿದರೆ ಕೂಡಲೇ ಪೊಲೀಸರ ಗಮನಕ್ಕೆ ತನ್ನಿ ಎಂದು ಹೇಳಿದ್ದರೂ ಅವಕ್ಕೆಲ್ಲಾ ಕ್ಯಾರೆ ಮಾಡುತ್ತಿಲ್ಲ ಇಂದು.
ದುಡ್ಡಿದ್ದವರು ಅನಿವಾರ್ಯತೆಯಿಂದ ಹಣಕೊಟ್ಟು ತಾವು ತಲುಪಬೇಕಾದ ಜಾಗಕ್ಕೆ ತಲುಪಿಬಿಡುತ್ತಾರೆ ಆದರೆ ಬಡಜನರ ಪಾಡೇನು…? ಸುಲಿಗೆ ನಡೆಯುತ್ತಿದ್ದರೂ ಎಷ್ಟು ಜನರ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ..? ಇದು ನಮ್ಮ ಪ್ರಶ್ನೆಯಲ್ಲ.. ಬೆಂಗಳೂರು ಜನರ ಪ್ರಶ್ನೆ. ಇದು ಹೀಗೆ ಮುಂದುವರೆದರೆ ಇಂದು ಸಾರಿಗೆ ನೌಕರರು ನಾಳೆ ಸಾರ್ವಜನಿಕರು ಸರ್ಕಾರದ ವಿರುದ್ದ ತಿರುಗಿ ಬಿದ್ದರೂ ಆಶ್ಚರ್ಯ ಪಡಬೇಕಿಲ್ಲ..

 

POPULAR  STORIES :

ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!

ಕೃಷ್ಟ ಮೃಗ ಬೇಟೆ ಪ್ರಕರಣದಿಂದ ನಟ ಸಲ್ಮಾನ್ ನಿರಾಳ…!

ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video

ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!

ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!

6 ಸಾವಿರ ಕೋಟಿಯ ಒಡೆಯನ ಮಗ ಕೆಲಸ ಮಾಡುತ್ತಿರುವುದು ಬೇಕರಿಯಲ್ಲಿ..!

ಟ್ವಿಟರ್‍ನಲ್ಲಿ ತಾಳ್ಮೆ ಕಳೆದುಕೊಂಡ ಹರ್ಭಜನ್ ಸಿಂಗ್..!

ನಮ್ಮ ದೇಶದ ಸೈನಿಕರಿಗೆ ತರಬೇತಿ ನೀಡುವ ಏಕೈಕ ಮಹಿಳೆ ಸೀಮಾ ರಾವ್-ನಮ್ಮ ದೇಶ ಕಂಡ ಅದ್ಭುತ ಮಹಿಳೆ

ಇವಳ ಅಂದವೇ ಈಕೆಗೆ ಶಾಪವಾದಾಗ !!!

ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇದೆಯೇ? ಅದರಿಂದ ಸ್ವಲ್ಪ ಎಚ್ಚರವಿರಲಿ.

Share post:

Subscribe

spot_imgspot_img

Popular

More like this
Related

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರು: ರೌಡಿಗಳನ್ನು,...

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ! ಎಲ್ಲಿ ನಡೆಯಲಿದೆ?

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್...

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ ಎಚ್ಚರ!

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ!

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ! ನವದೆಹಲಿ:- ದೇಶದಲ್ಲಿ ಪ್ರತಿ...