ರಜಾ ದಿನ ಬಂದ್ರೆ ಸಾಕು ರಾಜ್ಯದ ಪ್ರಖ್ಯಾತ ಪ್ರವಾಸೋದ್ಯಮ ತಾಣದಲ್ಲಿಲ್ಲೊಂದಾದ ಚಿಕ್ಕಬಳ್ಳಾಪುರದ ಆವಲಬೆಟ್ಟದಲ್ಲಿ ಪ್ರವಾಸಿಗರ ಹಿಂಡೆ ಸೇರಿರುತ್ತೆ. ಅದ್ರಲ್ಲೂ ಮುಖ್ಯವಾಗಿ ಇಲ್ಲಿಗೆ ಬರೋ ಪ್ರತಿಯೊಬ್ಬ ಪ್ರವಾಸಿಗನೂ ಕೂಡ ಆವಲಬೆಟ್ಟದಲ್ಲಿರೊ ಕೊಕ್ಕರೆ ಕೊಕ್ಕಿನಂತಿರೊ ಸೆಲ್ಫಿ ಬಂಡೆ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳೊಕೆ ಕ್ಯೂನಲ್ಲಿ ನಿಂತಿರ್ತಾರೆ. ಅಲ್ಲಿ ನಿಂತು ಒಂದು ಸೆಲ್ಫಿ ತಗೊಂಡು ಫೇಸ್ಬುಕ್‍ಗೆ ಹಾಕುದ್ರೆ ಸಾಕು.. ನೋಡಿದ ಗೆಳೆಯರೆಲ್ರೂ ನಾವು ಕೂಡ ಒಮ್ಮೆ ಈ ಸ್ಥಳಕ್ಕೆ ಭೇಟಿ ಮಾಡ್ಲೆ ಬೇಕು ಅಂತ ಶಪಥ ಮಡ್ಕೊಳ್ತಾರೆ..! ಅಷ್ಟೊಂದು ಫೇಮಸ್ ನೋಡಿ ಈ ಆವಲಬೆಟ್ಟ. ಆದ್ರೆ ಈ ಭಾಗಕ್ಕೆ ಪ್ರಯಾಣ ಬೆಳೆಸೊ ಪ್ರವಾಸಿಗರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಕಾದಿದೆ ನೋಡಿ..!
ಅದೇನಂದ್ರೆ ಇನ್ಮುಂದೆ ಆವಲಬೆಟ್ಟದ ಸೆಲ್ಫಿ ಬಂಡೆಯ ಬಳಿ ಸೆಲ್ಫಿಗೆ ಕಡಿವಾಣ ಹಾಕಿದೆ ಅಲ್ಲಿನ ಜಿಲ್ಲಾಡಳಿತ..! ಅಷ್ಟೇ ಅಲ್ಲ ಸೆಲ್ಫಿ ಬಂಡೆಯ ಬಳಿ ಪ್ರವಾಸಿಗರಿಗೆ ನೋ ಎಂಟ್ರಿಯೂ ಕೂಡ..! ಪ್ರವಾಸಿಗರ ಸುರಕ್ಷತೆಯ ದೃಷ್ಠಿಯಿಂದ ಜಿಲ್ಲಾಡಳಿತ ಈ ನಿರ್ಧಾರಕ್ಕೆ ಬಂದಿದ್ದು ನಿಯಮ ಮೀರಿಯೂ ಸ್ಥಳಕ್ಕೆ ಭೇಟಿ ನೀಡ್ತಾರೆ ಎಂಬ ಕಾರಣದಿಂದ ಆ ಸ್ಥಳದಲ್ಲಿ ಕಾವಲುಗಾರರನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ಈ ಸ್ಥಳದಲ್ಲಿ ಅಕ್ರಮ ಪ್ರವೇಶ ನಿಷೇಧಿಸಲಾಗಿದೆ ಅಂತ ಬೋರ್ಡ್ ಕೂಡ ತೂಗುಹಾಕಲಾಗಿದೆ. ಇನ್ನು ಜಿಲ್ಲಾಡಳಿತ ಈ ಕ್ರಮವನ್ನು ಕೆಲ ಪ್ರವಾಸಿಗರು ಸ್ವಾಗತಿಸಿದ್ರೆ, ಇನ್ನು ಕೆಲವರು ಬೇಸರ ವ್ಯಕ್ತ ಪಡಿಸಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಮೋದಿಗೆ ಪತ್ರ ಬರೆದು ಜಿಲ್ಲಾಡಳಿತಕ್ಕೆ ಶಾಕ್ ಕೊಟ್ಟ ನಮನ.! ಪತ್ರದಲ್ಲೇನಿತ್ತು.?
ಗುಡ್‍ನ್ಯೂಸ್ : ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 4 ಲಕ್ಷಕ್ಕೆ .?
ಮುಸ್ಲಿಂ ಉದ್ಯೋಗಿಗಳಿಗೆ ಶುಕ್ರವಾರ ಪ್ರಾರ್ಥನೆ ಸಲ್ಲಿಸಲು 90 ನಿಮಿಷ ವಿರಾಮ
ಎಟಿಎಂ ಮುಂದೆ ಕ್ಯೂ ನಿಲ್ಲೊರ್ಗೆ ಇಲ್ಲಿದೆ ಸಂತಸದ ಸುದ್ದಿ