Axiom 4 Mission Launch: ಶುಭಾಂಶು ಶುಕ್ಲಾ ಗಗನಯಾನಕ್ಕೆ ಕೌಂಟ್’ಡೌನ್ ಶುರು..!
ಹಲವಾರು ವಿಘ್ನಗಳ ಬಳಿಕ ಇದೀಗ ಶುಭಾಂಶು ಶುಕ್ಲ ಮತ್ತು ಇತರ ಮೂವರು ಇಂದು ಸಾದ ಕೆನಡಿ ಸ್ಪೇಸ್ ಸೆಂಟರ್ನಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39ಎನಿಂದ ಬೆಳಗ್ಗೆ 12.31ಕ್ಕೆ ಆಕ್ಸಿಯಂ ಮಿಷನ್ ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಹೌದು ಹಲವು ವಿಳಂಬಗಳ ಬಳಿಕ ನಾಸಾ, ಆಕ್ಸಿಯಂ ಸ್ಪೇಸ್ ಮತ್ತು ಸ್ಪೇಸ್ಎಕ್ಸ್ನ ಬಹು ನಿರೀಕ್ಷಿತ ಯೋಜನೆಯಾದ ಆಕ್ಸಿಯಂ ಮಿಷನ್ 4 (ಆಕ್ಸ್-4) ಅನ್ನು ಇಂದು ಮುಂಜಾನೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾವಣೆ ಮಾಡಲು ಸಜ್ಜಾಗಿವೆ.
ಮಧ್ಯಾಹ್ನ 12.01ಕ್ಕೆ ನೌಕೆ ಆಕಾಶಕ್ಕೆ ಜಿಗಿಯಲಿದೆ. ಗುರುವಾರ ಸಂಜೆ 4.30 ವೇಳೆಗೆ ಅಂತಾರಾಷ್ಟ್ರೀಯ ಬಾಹ್ಯಾ ಕಾಶ ಕೇಂದ್ರ ತಲುಪುವ ಸಾಧ್ಯತೆ ಇದೆ. ಅಮೆರಿಕಾ, ಭಾರತ, ಪೋಲೆಂಡ್, ಹಂಗೇರಿ ದೇಶದ ನಾಲ್ವರು ಗಗನಯಾತ್ರಿಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಪ್ರಯಾಣ ಬೆಳೆಸುತ್ತಿದ್ದಾರೆ. ಈ ನಾಲ್ವರು 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 60 ವೈಜ್ಞಾನಿಕ ಪ್ರಯೋಗ ನಡೆಸಲಿದ್ದಾರೆ.
ಕಮಾಂಡರ್ ಪೆಗ್ಗಿ ವಿಟ್ಸನ್ ಅವರು, ಆ್ಯಕ್ಸಿಯಂ–4 ವಾಣಿಜ್ಯ ಕಾರ್ಯಾಚರಣೆಯ ನೇತೃತ್ವವಹಿಸಿದ್ದು, ಶುಕ್ಲಾ ಮಿಷನ್ ಪೈಲಟ್ ಆಗಿ, ಹಂಗೇರಿಯನ್ ಗಗನಯಾತ್ರಿ ಟಿಬೋರ್ ಕಾಪು ಮತ್ತು ಪೋಲೆಂಡ್ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮಿಷನ್ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.