ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಎ ಬಿ ಡಿವಿಲಿಯರ್ಸ್ ಜ್ವರದಿಂದ ಚೇತರಿಸಿಕೊಂಡು ತಂಡ ಸೇರಿಕೊಂಡ ಬೆನ್ನಲ್ಲೇ ದಕ್ಷಿಣ ಆಫ್ರಿಕಾದ ಬ್ಯಾಟ್ಸಮನ್ , ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ ತವರು ದಕ್ಷಿಣ ಆಫ್ರಿಕಾಕ್ಕೆ ಮರಳಿದ್ದಾರೆ.
ಸತತ ಸೋಲಿನಿಂದ ಕಂಗೆಟ್ಟಿರುವ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಇನ್ನುಳಿದ ಪಂದ್ಯಗಳಲ್ಲಿ ಕೆಲವು ಪಂದ್ಯಗಳಿಗೆ ಡಿಕಾಕ್ ಅನುಪಸ್ಥಿತಿ ಕಾಡಲಿದೆ. ಹತ್ತಿರದ ಸಂಬಂಧಿಕರೊಬ್ಬರ ಮದುವೆ ನಿಮಿತ್ತ ಡಿಕಾಕ್ ದ.ಆಫ್ರಿಕಾಕ್ಕೆ ಹೋಗಿರುವುದಾಗಿ ಕೋಚ್ ಡ್ಯಾನಿಯಲ್ ವೆಟೋರಿ ತಿಳಿಸಿದ್ದಾರೆ.
ಡಿಕಾಕ್ ಅನುಪಸ್ಥಿತಿಯಲ್ಲೂ ಮುಂಬೈ ವಿರುದ್ಧ ಗೆದ್ದು ಗೆಲವಿನ ಹಳಿಗೆ ಮರಳಿರುವ ಆರ್ ಸಿ ಬಿ ಇಂದು ಪುಣೆಯಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಎಬಿಡಿ ತಂಡಕ್ಕೆ ವಾಪಾಸ್ಸಾಗಿದ್ದು ,ಆರ್ ಸಿಬಿಗೆ ನೆಮ್ಮದಿ ತಂದಿದೆ.