ಮುದ್ರಣ ಮಾಧ್ಯಮ, ದೃಶ್ಯಮಾಧ್ಯಮ ಎರಡರಲ್ಲೂ ಕೆಲಸ ಮಾಡಿರುವ ಅನುಭವ ಇವರದ್ದು. ಇವರ ಗರಡಿಯಲ್ಲಿ ಬೆಳೆದ ಪತ್ರಕರ್ತರು ಲೆಕ್ಕವಿಲ್ಲದಷ್ಟು. ಇವರು ಮಾಧ್ಯಮ ಕೋಟೆಯಲ್ಲಿ ತನ್ನದೇಯಾದ ಛಾಪು ಮೂಡಿಸಿರುವ ಚಿತ್ರದುರ್ಗದ ವೀರ ಸಮೀವುಲ್ಲಾ.
ಹೆಚ್ಚುಕಡಿಮೆ 25 ವರ್ಷಗಳಿಂದ ಪತ್ರಿಕೋದ್ಯಮ ಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಹಿರಿಯರು. ಚಿತ್ರದುರ್ಗದ ಬೆಲಗೂರು ಎಂಬ ಹಳ್ಳಿಯಲ್ಲಿ ಹುಟ್ಟಿದ ಇವರು ಹೀಗೇ ಆಗಬೇಕು, ಇದನ್ನೇ ಮಾಡಬೇಕು ಎಂದುಕೊಂಡು ಇಲ್ಲಿಯವರೆಗೆ ಪಯಣಿಸಿದವರಲ್ಲ. ಉದ್ಯೋಗವನ್ನರಸಿ ರಾಜಧಾನಿ ಬೆಂಗಳೂರಿಗೆ ಬಂದಾಗ ಕೈ ಹಿಡಿದಿದ್ದು ಮಾಧ್ಯಮ ಕ್ಷೇತ್ರ.
ಸಮೀವುಲ್ಲಾ ಅವರ ತಂದೆ ಶಫಿ, ತಾಯಿ ಜೈಬುನ್ನೀಸಾ. ಬಯಲು ಸೀಮೆಯ ಕಷ್ಟಗಳನ್ನು, ಬಡತನವನ್ನು ಸ್ವತಃ ಅನುಭವಿಸಿದವರು. ಕಣ್ಣಾರೆ ಕಂಡವರು. ಕಷ್ಟಗಳ ನಡುವೆ ಹುಟ್ಟೂರಿನಲ್ಲಿ ಶಿಕ್ಷಣಪಡೆದರು. ವಿಜ್ಞಾನ ವಿದ್ಯಾರ್ಥಿಯಾಗಿದ್ದ ಇವರಿಗೆ ಬಾಲ್ಯದಿಂದಲೂ ಬರವಣಿಗೆ ಎಂದರೆ ಎಲ್ಲಿಲ್ಲದ ಆಸಕ್ತಿ. ಆ ಆಸಕ್ತಿಯೇ ಮುಂದೆ ಮಾಧ್ಯಮ ಕ್ಷೇತ್ರಕ್ಕೆ ಕರೆದುಕೊಂಡು ಬರುತ್ತೆ ಅಂತ ಅಂದುಕೊಂಡಿರಲಿಕ್ಕಿಲ್ಲ.
ಉದ್ಯೋಗವನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದಾಗ ಟಿ.ವೆಂಕಟೇಶ್ ಅವರ ಪರಿಚಯ ಆಗುತ್ತೆ. ವೆಂಕಟೇಶ್ ಅವರ ಅಭಿಮಾನಿ ಗ್ರೂಪ್ ಮೂಲಕ ಮಾಧ್ಯಮಕ್ಕೆ ಎಂಟ್ರಿಕೊಡುವ ಅವಕಾಶ ಸಮೀವುಲ್ಲಾ ಅವರದ್ದಾಯಿತು. ಅಲ್ಲಿ, ಅಭಿಮಾನಿ, ಅರಗಣಿ, ಈ ಸಂಜೆಯಲ್ಲಿ ಕೆಲಸ ಮಾಡಿದ್ರು. ಆರಂಭದಲ್ಲಿ ಫಿಲ್ಮ್ ಜರ್ನಲಿಸ್ಟ್ ಆಗಿ ಗುರುತಿಸಿಕೊಂಡವರು. ಪ್ರೀಯಾಂಕ ನಿಯತಕಾಲಿಕೆಯ ಫೌಂಡರ್ ಎಡಿಟರ್ ಇದೇ ಸಮೀವುಲ್ಲಾ ಅವರು.
ಮುಂದೆ ಉದಯ ಟಿವಿಯಲ್ಲಿ ಕೆಲಸ ಮಾಡೋ ಅವಕಾಶ ಸಿಕ್ತು. ಉದಯ ಟಿವಿಯ ಆರಂಭದ ದಿನಗಳಲ್ಲಿ ಮೂರ್ನಾಲ್ಕು ವರ್ಷ ವರದಿಗಾರರಾಗಿ ಕೆಲಸ ಮಾಡಿದ್ರು. ಅಲ್ಲಿಂದ ನಂತರ ‘ವಿಜಯ ಕರ್ನಾಟಕ’ ದಿನಪತ್ರಿಕೆಗೆ ವಿಶೇಷ ಪ್ರತಿನಿಧಿಯಾದ್ರು. ವೀರಪ್ಪನ್‍ಗೆ ಸಂಬಂಧಿಸಿದ ಎಕ್ಸ್‍ಕ್ಲ್ಯೂಸೀವ್, ಸೆನ್ಸೇಷನಲ್ ನ್ಯೂಸ್‍ಗಳನ್ನು, ರಾಜಕೀಯ ತನಿಖಾ ವರದಿಗಳನ್ನು ಮಾಡಿದ ಶ್ರೇಯ ಇವರದ್ದು.
ನಂತರ ವಿಜಯ ಕರ್ನಾಟಕ ಬಿಟ್ಟು ಈ ಟಿವಿಯ ವಿಶೇಷ ಪ್ರತಿನಿಧಿಯಾಗಿ ಮತ್ತೊಂದು ಇನ್ನಿಂಗ್ಸ್ ಆರಂಭ ಮಾಡಿದ್ರು. ಈ ಟಿವಿಯ ಆರಂಭದಿಂದಲೂ ಜೊತೆಗಿದ್ದು, ಸುಮಾರು 5 ವರ್ಷಗಳ ಕಾಲ ಸೇವೆಸಲ್ಲಿಸಿ ಮತ್ತೆ ಪುನಃ ಉದಯ ಬಳಗ ಸೇರಿದ್ರು. ಅಲ್ಲಿ ನ್ಯೂಸ್ ಹೆಡ್ ಆಗಿದ್ದ ಇವರು ನಡೆಸಿಕೊಟ್ಟ ಡಿಸ್ಕಷನ್ ಗಳಿಗೆ ಲೆಕ್ಕವಿಲ್ಲ. ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದ ಚರ್ಚೆಗಳಿರಲಿ ಸಮೀವುಲ್ಲಾ ಅವರಿಂದ ಆಗಲ್ಲ ಅನ್ನೋ ಮಾತೇ ಇಲ್ಲ…!
ಈಗ ಸುದ್ದಿ ಟಿವಿಯಲ್ಲಿದ್ದಾರೆ. ತಾನೊಬ್ಬ ಪತ್ರಕರ್ತ. ನಿರೂಪಣೆ ನನ್ನ ಕೆಲಸದ ಒಂದು ಭಾಗವಷ್ಟೇ ಎಂದು ಹೇಳುವ ಸಮೀವುಲ್ಲಾ ಅವರಿಗೆ ಎಳ್ಳಷ್ಟು ಅಹಂಕಾರವಿಲ್ಲ. ತುಂಬಿದ ಕೊಡ ತುಳುಕುವುದಿಲ್ಲ ಅಂತಾರಲ್ಲಾ ಆ ರೀತಿ.
ನಂಜುಡಸ್ವಾಮಿ, ಲಂಕೇಶ್ ಅವರಂತಹ ಹಿರಿಯರು ನನಗೆ ಸ್ಪೂರ್ತಿ. ರಾಮೋಜಿರಾವ್, ವಿಜಯಸಂಕೇಶ್ವರ್ ಕೈಕೆಳಗೆ ಕೆಲಸ ಮಾಡಿದ್ದೀನಿ ಅನ್ನೋದು ಹೆಮ್ಮೆ ಎನ್ನುತ್ತಾರೆ ಸಮೀವುಲ್ಲಾ.
ರೈತಚಳುವಳಿ, ದಲಿತ ಚಳುವಳಿ, ಕನ್ನಡ ಚಳುವಳಿ, ಕಾವೇರಿ ಗಲಾಟೆ ಹೀಗೆ ಅನೇಕ ಚಳುವಳಿ, ಹೋರಾಟಗಳನ್ನು ಕವರ್ ಮಾಡಿದ್ದ ಅನುಭವ ಕೂಡ ಇವರ ಜೊತೆಗಿದೆ. ಪ್ರಮುಖ ಚುನಾವಣೆ ಸಂದರ್ಭಗಳಲ್ಲಿ ರಾಜ್ಯ ಸುತ್ತಿ ವರದಿ ಮಾಡಿದ ಅನುಭವ ದೊಡ್ಡದು. ಮಾಧ್ಯಮ ಕ್ಷೇತ್ರದಲ್ಲಿ ಇವರು ಸಲ್ಲಿಸಿರುವ, ಸಲ್ಲಿಸುತ್ತಿರುವ ಸೇವೆ ಅಪಾರ. ರಾಜ್ಯೋತ್ಸವ, ಮಾಧ್ಯಮ ಅಕಾಡೆಮಿ, ಪ್ರೆಸ್ ಕ್ಲಬ್‍ನ ಮ್ಯಾನ್ ಆಫ್ ದಿ ಈಯರ್, ಬುದ್ಧ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು, ಸನ್ಮಾನಗಳಿಗೆ ಇವರು ಪಾತ್ರರಾಗಿದ್ದಾರೆ.
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
10 ನವೆಂಬರ್ 2017 : ಈಶ್ವರ್ ದೈತೋಟ
11 ನವೆಂಬರ್ 2017 : ಭಾವನ
12 ನವೆಂಬರ್ 2017 : ಜಯಶ್ರೀ ಶೇಖರ್
13 ನವೆಂಬರ್ 2017 : ಶೇಷಕೃಷ್ಣ
14 ನವೆಂಬರ್ 2017 : ಶ್ರೀಧರ್ ಶರ್ಮಾ
15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
16 ನವೆಂಬರ್ 2017 : ಅರವಿಂದ ಸೇತುರಾವ್
17 ನವೆಂಬರ್ 2017 : ಲಿಖಿತಶ್ರೀ
18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
19 ನವೆಂಬರ್ 2017 : ಅಪರ್ಣಾ
20 ನವೆಂಬರ್ 2017 : ಅಮರ್ ಪ್ರಸಾದ್
21 ನವೆಂಬರ್ 2017 : ಸೌಮ್ಯ ಮಳಲಿ
22 ನವೆಂಬರ್ 2017 : ಅರುಣ್ ಬಡಿಗೇರ್
23ನವೆಂಬರ್ 2017 : ರಾಘವ ಸೂರ್ಯ
24ನವೆಂಬರ್ 2017 : ಶ್ರೀಲಕ್ಷ್ಮಿ
25ನವೆಂಬರ್ 2017 : ಶಿಲ್ಪ ಕಿರಣ್
26ನವೆಂಬರ್ 2017 : ಸಮೀವುಲ್ಲಾ