ಬ್ಯಾಗ್ ರಹಿತ ದಿ‌ನ…! ಕೈ ಬಿಸ್ಕೊಂಡು ಶಾಲೆಗೆ ಹೋಗ್ಬನ್ನಿ ಮಕ್ಕಳೇ‌…!

Date:

ಮಕ್ಕಳ ಬೆನ್ನಿನ ಮೇಲಿನ ಭಾರವನ್ನು ಇಳಿಸಲು ಹಾಗೂ ಮಕ್ಕಳು ಲವಲವಿಕೆಯಿಂದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಶಿಕ್ಷಣ ಇಲಾಖೆ ಮತ್ತೊಂದು ಕ್ರಮ ಕೈಗೊಂಡಿದೇ…! ಆದೇ ‘ಬ್ಯಾಗ್ ರಹಿತ’ ದಿನ…!
ಭಾರದ ಬ್ಯಾಗ್ ಹೊತ್ತು ಹೋಗೋದು ಮಕ್ಕಳಿಗೆ ಕಷ್ಟವಾಗುತ್ತದೆ, ನೋವಾಗುತ್ತದೆ. ಅಷ್ಟೇ ಅಲ್ಲದ ಅದು ಅವತ ಓದಿನ ಮೇಲೂ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಬ್ಯಾಗ್ ಭಾರ ಇಳಿಕೆಗೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಬಹುಕಾಲದಿಂದ ಕೇಳಿ ಬರಯತ್ತಲೇ ಇದೆ.


ಪಠ್ಯ ಪುಸ್ತಕ ಪರಿಷ್ಕರಣೆ ವೇಳೆ ವಿಷಯದ ಪುಸ್ತಕಗಳನ್ನು ಎರಡು ಭಾಗಗಳಲ್ಲಿ ಮುದ್ರಿಸಿ, ಮೊದಲ ಭಾಗದ ಪುಸ್ತಕಗಳನ್ನು ಜೂನ್ ನಿಂದ ಸೆಪ್ಟೆಂಬರ್ ವರಗೆ, ಎರಡನೇ ಭಾಗದ ಪುಸ್ತಕಗಳನ್ನು ನವೆಂಬರ್ ನಿಂದ ಮಾರ್ಚ್ ವರೆಗೆ ಕೊಂಡೊಯ್ಯುವಂತೆ ಮಾಡಲಾಗುವುದು ಎಂದು ಹೇಳಲಾಗುತ್ತು.‌ಆದರೆ ಇದು ಅನುಷ್ಠಾನಕ್ಕೆ ಬಂದಿಲ್ಲ‌‌. ಈಗ ಹೊಸ ಆಲೋಚನೆಯೊಂದು ಇಲಾಖೆಗೆ ಹೊಳೆದಿದೆ ….ಅದೇ ಬ್ಯಾಗ್ ರಹಿತ ದಿ‌ನ‌.
ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ವಿಸ್ತ್ರತ ಚರ್ಚೆ ನಡೆದಿತ್ತು. ನಂತರ ಈ ಕುರಿತು ಮಾದರಿ ರೂಪಿಸಲು ಜಿಲ್ಲಾ ಶೈಕ್ಷಣಿಕ ಅಧಿಕಾರಿಗಳಿಗೆ (ಡಿಡಿಪಿಐ) ನಿರ್ದೇಶಿಸಲಾಗಿತ್ತು. ನಂತರ ನಾನಾ ಜಿಲ್ಲೆಗಳಿಂದ ಪ್ರಸ್ತಾವನೆ ಸಿದ್ದಪಡಿಸಲಾಗಿದ್ದು, ಮೈಸೂರು ನೀಡಿದ ಮಾದರಿ ಹಿಡಿಸಿದೆ.

ಬ್ಯಾಗ್ ರಹಿತ ದಿನಕ್ಕೆ ಎರಡು ಶನಿವಾರ ಆಯ್ಕೆ ಮಾಡಿಕೊಳ್ಳಬೇಕು ಎನ್ನೋದು ಇಲಾಖೆ ಸೂಚನೆ. ಈ ವಿಚಾರದಲ್ಲಿ ಮೈಸೂರು ಜಿಲ್ಲೆ ಒಂದು ಹೆಜ್ಜೆ ಮುಂದೆ ಹೋಗಿದೆ. 2018-19ರ ಶೈಕ್ಷಣಿಕ ವರ್ಷದಲ್ಲಿ ತಿಂಗಳವಾರು ಬ್ಯಾಗ್ ರಹಿತ ದಿನದ ಕ್ಯಾಲೆಂಡರ್ ಸಿದ್ಧಪಡಿಸಿದೆ. ಜಿಲ್ಲೆಯ ದೇವರಾಯ ಶೆಟ್ಟಿಪುರ ಕ್ಲಸ್ಟರ್ ಗೆ ಸಂಬಂಧಿಸಿದ ವೇಳಾಪಟ್ಟಿಯನ್ನು ಇಲಾಖೆಗೆ ಸಲ್ಲಿಸಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಒಳಗೊಂಡಂತೆ, ಬ್ಯಾಗ್ ರಹಿತವಾದ ವಾರಾಂತ್ಯದ ದಿನಗಳಲ್ಲಿ ಮಕ್ಕಳು ಯಾವೆಲ್ಲಾ ಚಟುವಟಿಕೆಗಳಲ್ಲಿ ಭಾಗಿಯಾಗಬಹುದು ಎಂಬುದನ್ನು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

Share post:

Subscribe

spot_imgspot_img

Popular

More like this
Related

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್ ಹಾಸನ: ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ದೇವಸ್ಥಾನದ...

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್!

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್! ಚಿನ್ನ ಖರೀದಿಗೆ...

ಕರ್ನಾಟಕದ 12 ಜಿಲ್ಲೆಗಳಲ್ಲಿ ವಿಪರೀತ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ!

ಕರ್ನಾಟಕದ 12 ಜಿಲ್ಲೆಗಳಲ್ಲಿ ವಿಪರೀತ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ! ಬೆಂಗಳೂರು:...

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್ ಬಿಗ್ ಬಾಸ್ ಕಾರ್ಯಕ್ರಮ...