ಹುಡುಗ-ಹುಡುಗಿ ಪ್ರೀತಿಸಿ ಓಡಿ ಹೋಗೋದು ಸರ್ವೇ ಸಾಮಾನ್ಯ. ಆದರೆ, ಒಂದೇ ಯುವತಿಯನ್ನು ಇಬ್ಬರು ಯುವಕರು ಪ್ರೀತಿಸಿ ಓಡಿ ಹೋಗಿರೋದನ್ನು ಎಲ್ಲಾದರು ಕೇಳಿದ್ದೀರ? ನೋಡಿದ್ದೀರ?
ಇಂಥಾ ಒಂದು ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಹರಿಹರ ತಾಲೂಕಿನ ಸಾಲುಕಟ್ಟಿ ಗ್ರಾಮದ ಯುವತಿ ಜೂನ್ 28ರಂದು ಮನೆಬಿಟ್ಟು ಓಡಿ ಹೋಗಿದ್ದಾಳೆ. ಆಕೆ ಜೊತೆ ಹೋಗಿರುವುದು ಪ್ರೀತಿಸಿದ ಇಬ್ಬರು ಯುವಕರು…! ಆದರೆ, ಆಕೆ ಯಾರನ್ನು ಮದುವೆಯಾಗಿದ್ದಾಳೆ ಅನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲ..! ಈ ಪ್ರಶ್ನೆ ಸ್ವತಃ ಮನೆಯವರನ್ನೂ ಕಾಡುತ್ತಿದೆ.
ಯುವತಿ ಗುತ್ತೂರ ಗ್ರಾಮದ ಬಸವರಾಜ ಹಾಗೂ ಹಡಗಲಿ ತಾಲೂಕಿನ ಕೊಂಬಳಿ ಗ್ರಾಮದ ಮಧುಕುಮಾರ ಎಂಬ ಯುವಕರ ಜೊತೆ ಓಡಿ ಹೋಗಿ, ತಾಳಿ ಕಟ್ಟಿಸಿಕೊಂಡಿರೋ ಫೋಟೋವನ್ನು ಮನೆಯವರಿಗೆ ಕಳುಹಿಸಿದ್ದಾಳೆ. ಆ ಫೋಟೋದಲ್ಲಿ ಅವಳೊಬ್ಬಳೇ ಇದ್ದಾಳೆ. ಆದ್ದರಿಂದ ಯಾರನ್ನು ಮದುವೆಯಾಗಿದ್ದಾಳೆ ಅನ್ನೋದು ತಿಳಿದುಬಂದಿಲ್ಲ.