ಬಾಳೆಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಆದ್ರೆ , ಜ್ವರ ಬಂದವರು ಇದನ್ನು ತಿನ್ನದೇ ಇದ್ರೆ ಒಳ್ಳೇದು. ಹೆಚ್ಚು ಖಾರ ತಿನ್ನುವಾಗ ಬಾಳೆಹಣ್ಣು ತಿಂದ್ರೆ ಎದೆ ಉರಿ, ಹೊಟ್ಟೆ ಉರಿ ಶುರುವಾಗುತ್ತೆ.
ಬಾಳೆ ಹಣ್ಣನ್ನು ರಾತ್ರಿ ಮಲಗುವಾಗ ತಿನ್ನಲೇ ಬಾರದಂತೆ. ರಾತ್ರಿ ಬೇಗ ಜೀರ್ಣವಾಗದ ಕಾರಣ ಸೋಮಾರಿತನವನ್ನು ತಂದೊಡ್ಡಬಲ್ಲದು ಈ ಅಭ್ಯಾಸ. ಬೆಳಗ್ಗೆ ತಿಂದರೆ ಒಳ್ಳೆಯದು. ಅಥವಾ ಸ್ನ್ಯಾಕ್ಸ್ ರೂಪದಲ್ಲಿ ಸಂಜೆ ತಿಂದರೂ ಆಗಬಹುದು. ಫಿಟ್‌ನೆಸ್ ಹೆಚ್ಚು ಕಾಳಜಿ ವಹಿಸುವವರು ಜಿಮ್ ನಂತರ ತಿಂದರೂ ಒಳ್ಳೆಯದೇ.ಒಂದೊಂದು ದಿನ ರಾತ್ರಿ ಮಲಗುವಾಗ ಬಾಳೆಹಣ್ಣನ್ನು ತಿಂದರೆ ಓಕೆ. ಆದರೆ, ದಿನಾ ತಿನ್ನೋ ಅಭ್ಯಾಸವಿದ್ದರೆ ಸೈನಸ್ ಅಥವಾ ಅಸ್ತಮಾ ತಂದೊಡ್ಡುವ ಸಾಧ್ಯತೆ ಇರುತ್ತದೆ.ಸಿಹಿ ತಿನ್ನೋ ಅಭ್ಯಾಸ ಇರೋರು, ಕಡಿಮೆ ಕ್ಯಾಲರೀಸ್ ಇರೋ ಬಾಳೆಹಣ್ಣು ತಿಂದರೆ ತೂಕ ಹೆಚ್ಚುವುದಿಲ್ಲ ಎಂದು ಆಹಾರ ತಜ್ಞರು ಹೇಳುತ್ತಾರೆ.