ದಿ ನ್ಯೂ ಇಂಡಿಯನ್ ಟೈಮ್ಸ್ ಆನ್ ಲೈನ್ ಪೋರ್ಟಲ್ ಆರಂಭವಾದ ಮೂರನೇ ತಿಂಗಳಲ್ಲೇ ಲಕ್ಷಾಂತರ ಕನ್ನಡಿಗರನ್ನು ತಲುಪಿದ ಸಂಭ್ರಮದಲ್ಲಿದೆ. ಕರ್ನಾಟಕ ಮಾತ್ರವಲ್ಲದೇ ದೇಶದ ಎಲ್ಲಾ ಪ್ರಮುಖ ನಗರದ ಹಾಗೂ ವಿಶ್ವದ ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ನ್ಯೂ ಇಂಡಿಯನ್ ಟೈಮ್ಸ್ ಓದುಗರಿದ್ದಾರೆ. ಪ್ರತಿದಿನ ಕನಿಷ್ಟ 30ರಿಂದ ನಲವತ್ತು ಸಾವಿರ ಬಾರಿ ನಮ್ಮ ವೆಬ್ ಸೈಟ್ ಪುಟಗಳು ವಿಶ್ವಾದ್ಯಂತ ತೆರೆದುಕೊಳ್ಳುತ್ತಿದೆ. ಇದೆಲ್ಲ ಕನ್ನಡಿಗರ ಪ್ರೋತ್ಸಾಹದಿಂದ ಮಾತ್ರ ಸಾಧ್ಯ..! ಈಗ ಮತ್ತೊಂದು ಹೊಸ ಪ್ರಯೋಗದೊಂದಿಗೆ ನಿಮ್ಮೆದುರು ಬರಲಿಚ್ಚಿಸಿದ್ದೇವೆ. ಅದೇ `ಬೆಂಗಳೂರು ಡೇಸ್’
ಬೆಂಗಳೂರು ಡೇಸ್ ನಿಮ್ಮ ಮನೆ ಮನ ತಲುಪಲು ಸಿದ್ಧವಾಗಿರೋ ಮಾಸಪತ್ರಿಕೆ. ಪ್ರತಿ ತಿಂಗಳು ನಿಮ್ಮನ್ನು ನಾವು ಹೊಸತನದೊಂದಿಗೆ ತಲುಪುತ್ತೇವೆ. ಅದಕ್ಕೆ ನಿಮ್ಮ ಸಾಥ್ ಬೇಕು. ನಾವು ಪತ್ರಿಕೆ ಹೊರತರೋ ನಿರ್ಧಾರ ಮಾಡಿದ್ದಾಗಿದೆ. ಆದ್ರೆ ಅದು ಹೇಗಿರಬೇಕು ಅಂತ ನಿರ್ಧರಿಸಬೇಕಾದವರು ನೀವು. ನಿಮ್ಮ ಪತ್ರಿಕೆಯಲ್ಲಿ ನಿಮಗೇನು ಬೇಕು..? ಸುದ್ದೀ ಬೇಕಾ..? ಭಾವನಾತ್ಮಕ ಬರಹಗಳು ಬೇಕ..? ಒಳ್ಳೊಳ್ಳೆ ಲೇಖನಗಳು ಬೇಕಾ.? ಸಿನಿಮಾ ಸುದ್ದಿಗಳಿರಬೇಕಾ..? ಹಾಸ್ಯ ಬರಹಗಳಿಂದ ತುಂಬಿರಬೇಕಾ..? ಸಕ್ಸಸ್ ಸ್ಟೋರಿಗಳು ನಿಮ್ಮ ಮನಸ್ಸು ಗೆಲ್ಲಬೇಕ..? ಏನು ಬೇಕು ಹೇಳಿ.. ನಾವದನ್ನು ನಿಮಗೆ ಕೊಡುತ್ತೇವೆ. ಇದು ನಿಮ್ಮದೇ ಪತ್ರಿಕೆ. ಇದಕ್ಕೆ ನೀವೂ ಬರೆಯಬಹುದು..!
ತಿಂಗಳೊಳಗೆ ಪತ್ರಿಕೆಯ ಮೊದಲ ಲುಕ್ ರೆಡಿ ಇರುತ್ತೆ. ಅದನ್ನು ಆದಷ್ಟು ಬೇಗ ನಿಮ್ಮ ರುಚಿಗೆ ತಕ್ಕ ಹಾಗೆ ಉಣಬಡಿಸೋ ಪ್ರಯತ್ನ ಚಾಲ್ತಿಯಲ್ಲಿದೆ. ದಿ ನ್ಯೂ ಇಂಡಿಯನ್ ಟೈಮ್ಸ್ ಗೆ ಕೊಟ್ಟ ಪ್ರೋತ್ಸಾಹ `ಬೆಂಗಳೂರು ಡೇಸ್’ ಗೂ ಇರಲಿ. ಹೆಸರಷ್ಟೇ ರಾಜಧಾನಿಯದ್ದು ಆದ್ರೆ ಪತ್ರಿಕೆ ಇಡೀ ವಿಶ್ವದ ಕನ್ನಡಿಗರದ್ದು..!
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಶಂಕ್ರಣ್ಣನ ಬಗ್ಗೆ ನಿಮಗೆಷ್ಟು ಗೊತ್ತು..?
ಗುದ್ದಿದ ಕಾರನ್ನ ನಾಯಿ ಏನ್ ಮಾಡ್ತು ಗೊತ್ತಾ.. ?
ಭಾರತ ಬದಲಾಗ್ಲೇ ಬೇಕು..! ಅದಕ್ಕೆ ನಾವೇನ್ ಮಾಡ್ಬೇಕು..?
ಧರ್ಮಕ್ಕಿಂತ “ಸ್ನೇಹ”ವೇ ದೊಡ್ಡದೆಂದು ಸಾರಿದ “ರಜಾಕ್ ಖಾನ್ ಟಿಕಾರಿ”..!
ಟೀಂ ಇಂಡಿಯಾ ನಾಯಕ ಇಂಗ್ಲೆಂಡಿನ ಮಾಜಿ ಕ್ರಿಕೆಟಿಗನನ್ನು ಸೋಲಿಸಿದ್ದು ಹೇಗೆ ಗೊತ್ತಾ..?
ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ
ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!
ಲೈಫ್ ನಲ್ಲಿ ಒಮ್ಮೆಯಾದ್ರೂ ಟ್ರಾವೆಲ್ ಮಾಡ್ಲೇಬೇಕಾದ ರಸ್ತೆಗಳು..! ಇಂಡಿಯಾದ ಅಮೇಜಿಂಗ್ ರಸ್ತೆಗಳು..!
ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!
ಹೋಗ್ತಾ ಸಿಂಗಲ್ ಬರ್ತಾ ಡಬಲ್..!
ಊದುಗೊಳವೆ ಸಹಾಯದಿಂದ ಬಲ್ಪ್ ಹೊತ್ತಿಸ್ಬಹುದು..! ಬೋರ್ ನಿಂದ ನೀರೂ ಪಡೆಯ ಬಹುದು..!