ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರ ಸಂಘಟನೆ ಫೋರಂ( ಯುಎಫ್ ಆರ್ ಬಿಒಇ) ಸೆ.4 ಮತ್ತು 5ರಂದು ಎರಡು ದಿನಗಳ ಸಾಮೂಹಿಕ ರಜೆಗೆ ಕರೆನೀಡಿದೆ.
ರೀಟೇನರ್ ಗಳಿಗೆ ಸಿಪಿಎಫ್ (ಕಾಂಟ್ರಿಬಿಟರಿ ಪಿಎಫ್) ಯೋಜನೆ ಹಾಗೂ 2012ರಿಂದ ನೇಮಕ ಆದವರಿಗೆ ಹೆಚ್ಚುವರಿ ಪಿಎಫ್ ನೀಡಬೇಕು ಎಂಬುದು ಫೋರಂ ಒತ್ತಾಯ.
ಬ್ಯಾಂಕ್ ನ ಎಲ್ಲಾ ಅಧಿಕಾರಿಗಳು , ಸಿಬ್ಬಂದಿ ಇದರಲ್ಲಿ ಭಾಗವಹಿಸಲಿದ್ದಾರೆ. ಇದರಿಂದ ಕೇಂದ್ರಿಯ ಬ್ಯಾಂಕ್ ಮತ್ತು ರಾಷ್ಟ್ರಾದ್ಯಂತ ಇರುವ ಇದರ ಅಧೀನ ಬ್ಯಾಂಕ್ ಗಳ ವ್ಯವಹಾರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನಲಾಗಿದೆ.