ಮನುಷ್ಯರ ಹುಚ್ಚಾಟಕ್ಕೆ ಏನನ್ಬೇಕೋ ಗೊತ್ತಾಗ್ತಾ ಇಲ್ಲ..? ಸಾಹಸ ಪ್ರದರ್ಶನ ಮಾಡಿ ಹೆಸ್ರು ಮಾಡ್ಬೇಕು ಅಂತ ಏನೇಲ್ಲಾ ಲಾಗ ಹಾಕ್ತಾರೆ… ಆದ್ರೆ ಅದಕ್ಕೂ ಒಂದು ಮಿತಿ ಇರತ್ತೆ ಅಲ್ವಾ..? ಯಾಕಪ್ಪ ಹೇಳ್ದೆ ಅಂದ್ರೆ ಇಲ್ಲೊಬ್ಬ ಪುಣ್ಯಾತ್ಮ ಬಿಸ್ನೀರಲ್ಲೋ ಅಥವಾ ಹಾಲಿನಲ್ಲೋ ಸ್ನಾನ ಮಾಡಿ ಸಾಹಸ ಪ್ರದರ್ಶನ ಮಾಡಿದ್ರೆ ಅಸದೇನೋ ಅನ್ಬೋದಾಗಿತ್ತು, ಆದ್ರೆ ಆತ ಮಾಡಿದ್ದೆ ಬೇರೆ ಸ್ವಾಮೀ… ಆತ ಬರೋಬ್ಬರಿ 1250 ಬಾಟ್ಲಿ ಚಿಲ್ಲಿ ಸಾಸ್‍ನಲ್ಲಿ ಸ್ನಾನ ಮಾಡಿದ್ದಾನೆ…!
ಅಬ್ಬಬ್ಬಾ…! ಇವ್ನೇನ್ ಮನುಷ್ಯನೋ ಪ್ರಾಣಿನೋ… ಚಿಲ್ಲೀನ ಬಾಯಲ್ಲಿಟ್ರೇನೇ ತಡಿಯಲಾರದ ಉರಿ ಅತ್ಕೊಳತ್ತೆ ಅದ್ರಲ್ಲಿ ಈ ಪುಣ್ಯಾತ್ಮ ಸ್ನಾನ ಮಾಡಿದ್ದಾನಲ್ಲ ಅಂತ ಅನ್ಕೊಳ್ತೀರಾ..! ಈ ವ್ಯಕ್ತಿ ಜನಮನ್ನಣೆ ಪಡೆಯೋಕೆ ಇಷ್ಟೇಲ್ಲಾ ಮಾಡ್ತಾ ಇದಾನೆ ನೋಡಿ… ಮೂಲತಃ ಅಮೇರಿಕಾ ದೇಶದವನಾದ ಯೂಟ್ಯೂಬ್ ಸ್ಟಾರ್ ಎಂದೆ ಖ್ಯಾತಿಯಾಗಿರುವ ಮಿಸ್ಟರ್ ಕ್ಯಾಂಟರ್ ಇದೀಗ ಚಿಲ್ಲಿ ಸಾಸ್ ಬಾತ್ ಮೂಲಕ ಎಲ್ಲರ ಗಮನ ಸೆಳದಿದ್ದಾನೆ.. ಈ ಹಿಂದೆ ಚಾಕ್ಲೇಟ್, ಓರಿಯೋದಲ್ಲಿ ಸ್ನಾನ ಮಾಡಿ ಸುದ್ದಿ ಮಾಡಿದ್ದ ಈತ ಈ ಬಾರಿ ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದ್ದ. ಅದು ಒಂದಲ್ಲಾ ಎರಡಲ್ಲಾ ಸ್ವಾಮೀ…! ಬರೋಬ್ಬರಿ 1250 ಬಾಟ್ಲಿ ಚಿಲ್ಲಿ ಸಾಸ್ ಬಾತ್… ಅದಿರ್ಲಿ ಚಿಲ್ಲಿ ಸಾಸ್‍ನಲ್ಲಿ ಸ್ನಾನ ಮಾಡಿದ ಪುಣ್ಯತ್ಮ ಮುಂದೇನಾದ..? ಅಂತ ತಿಳ್ಕೊಳೋ ಕುತೂಹಲ ನಿಮ್ಮಲ್ಲಿದ್ರೆ ಈ ವಿಡಿಯೋ ನೋಡಿ..
POPULAR STORIES :
ನಿದ್ರೆ ಬಿಟ್ಟು ಜಿಯೋ 4ಜಿ ಫ್ರೀ ಸಿಮ್ ಪಡೆಯುತ್ತಿದ್ದಾರೆ ಗ್ರಾಹಕರು..!
ಟೆಸ್ಟ್ ನಲ್ಲಿ ಪಾಕ್ ನಂ1 ಪಟ್ಟ: ಕೋಹ್ಲಿಯನ್ನು ಲೇವಡಿ ಮಾಡಿದ ಪಾಕ್ ಅಭಿಮಾನಿಗಳು
ಬೆಳ್ಳಿತಾರೆ ಸಿಂಧು ಜೊತೆ ಜಾಹಿರಾತು ಒಪ್ಪಂದಕ್ಕಾಗಿ ಕಂಪನಿಗಳ ಪರೇಡ್..!
ಸುಲಭವಾಗಿ ಸಾಗಿಸಲು ಹೆಣದ ಮೂಳೆ ಮುರಿದು ಮುದ್ದೆ ಮಾಡಿದ್ದರು…!
ಲೈಫ್‍ನಲ್ಲಿ ಹೇಗೆ ಡಿಸಿಪ್ಲಿನ್ ಕಾಪಾಡೋದು,,? ಸ್ವಲ್ಪ ಜಪಾನಿಯರನ್ನ ನೋಡಿ..!
ಪತ್ನಿಯ ಮೃತ ದೇಹ ಹೊತ್ತು 10ಕಿ.ಮೀ ನಡೆದ..!
ರಿಯೋ ಒಲಿಂಪಿಕ್ಸ್ ನಲ್ಲಿ ಸೋತ ನಾರ್ತ್ ಕೊರಿಯಾ ಕ್ರೀಡಾಪಟುಗಳಿಗೆ ಶಿಕ್ಷೆ ಏನು ಗೊತ್ತಾ..?