ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಸದಸ್ಯರ ವೇತನವನ್ನು ಹೆಚ್ಚಿಸಲಾಗಿದ್ದು, ಸುಪ್ರೀಂ ಕೋರ್ಟ್ ನೇಮಿತ ಆಡಳಿತ ಸಮಿತಿಯ ಒಪ್ಪಿಗೆಯನ್ನು ಸಹ ಪಡೆಯಲಾಗಿದೆ ಎಂದು ಹೇಳಾಗಿದೆ.
ಹಿರಿಯರ ಪುರುಷರ ತಂಡದ ಪ್ರಧಾನ ಆಯ್ಕೆಗಾರರ ವೇತನವನ್ನು 82ಲಕ್ಷ ರೂಗಳಿಂದ 1ಕೋಟಿ ರೂ ಗೆ ಏರಿಸಲಾಗಿದೆ. ಸದಸ್ಯರ ವೇತನವನ್ನು 60ಲಕ್ಷದಿಂದ 90ಲಕ್ಷ ರೂಗಳಿಗೆ ಹೆಚ್ಚಿಸಲಾಗಿದೆ.
ಕಿರಿಯರ ತಂಡದ ಆಯ್ಕೆಗಾರರ ವೇತನವನ್ನು 65ಲಕ್ಷಕ್ಕೆ ಏರಿಸಲಾಗಿದೆ. ಮಹಿಳಾ ತಂಡದ ಆಯ್ಕೆಗಾರರ ವೇತನ 30ಲಕ್ಷ ರೂಗೆ ಏರಿಕೆ ಆಗಿದೆ.