ಸಮಸ್ಯೆ ಹೊತ್ತು ಬಂದ ಮಹಿಳೆಯರಿಗೆ ಪೊಲೀಸ್ ಅಧಿಕಾರಿ ನಿಂದಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಆಲಕನೂರ ಗ್ರಾಮದಲ್ಲಿ ನಡೆದಿದೆ. ಹಾರೋಗೇರಿ ಪಿಎಸ್ ಐ ಮಹಮ್ಮದ್ ರಫೀಕ್ ಎಂ ತಹಶೀಲ್ದಾರ್ ಸೌಜನ್ಯ ತೋರದೆ ಸಾರ್ವಜನಿಕವಾಗಿ ಮಹಿಳೆಯರನ್ನು ನಿಂದಿಸಿ ದರ್ಪ ತೋರಿದ ಅಧಿಕಾರಿ.
ಸಮಸ್ಯೆ ಹೇಳಿಕೊಂಡು ಬಂದ ಒಂದು ಸಮುದಾಯದ ಮಹಿಳೆಯರಿಗೆ ಬಜಾರಿ, ಗಂಡುಬೀರಿ ಎಂದು ಕರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸ್ ಅಧಿಕಾರಿಯ ಈ ವರ್ತನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.