ಪರೀಕ್ಷೆ ತಪ್ಪಿಸಿಕೊಳ್ಳೋಕೆ ತಲೆನೋವು ಸೊಂಟ ನೋವು, ಜ್ವರ ಅಂತೆಲ್ಲಾ ಕಥೆ ಕಟ್ಟೋ ವಿದ್ಯಾರ್ಥಿಗಳನ್ನು ನೋಡಿದ್ದೀರಿ..! ಆದರೆ ಸಿನಿಮಾ ಕಥೆ ಕಟ್ಟೋ ವಿದ್ಯಾರ್ಥಿಗಳನ್ನು ಕಂಡಿದ್ದೀರಾ..?! 20 ವರ್ಷದ ವಿದ್ಯಾರ್ಥಿಯೊಬ್ಬ ಆ ಘನಂದಾರಿ ಕೆಲಸವನ್ನೂ ಮಾಡಿದ್ದಾನೆ..! ಪರೀಕ್ಷೆಯನ್ನು ತಪ್ಪಿಸಿಕೊಳ್ಳೋಕೆ ಆತ ಸಿನಿಮಾ ಕಥೆ’ ಕಟ್ಟಿರೋದು ತಡವಾಗಿ ಬೆಳಕಿಗೆ ಬಂದಿದೆ. ಅವನು ಜಾನ್ ಆಂಟನಿ. ಬೆಂಗಳೂರಿನ ಕಾಲೇಜುವೊಂದರಲ್ಲಿ ಬಿಎ ವ್ಯಾಸಂಗ ಮಾಡ್ತಾ ಇದ್ದಾನೆ. ಮೊನ್ನೆ ಮೊನ್ನೆ, ಅಂದರೆ ಜನವರಿ 19ರಂದು ಸೆಮಿಸ್ಟರ್ ಪರೀಕ್ಷೆ ಇತ್ತು..! ಅವತ್ತು ಎಸ್ಜಿ ಪಾಳ್ಯದಲ್ಲಿನ ಮನೆಯಿಂದ ಕಾಲೇಜಿಗೆ ಹೋಗುತ್ತಿರುವಾಗ ಬೆಳಿಗ್ಗೆ 9 ಗಂಟೆಗೆ ಅಪಹರಣಕ್ಕೊಳಗಾಗಿದ್ದಾನೆ..! ತನ್ನನ್ನು ಅಪರಿಚಿತ ದುಷ್ಕರ್ಮಿಗಳು ಕಿಡ್ನಾಪ್ ಮಾಡಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ಹರಿಬಿಟ್ಟಿದ್ದಾನೆ..! ಫ್ರೆಂಡ್ಸ್, ಕಾಲೇಜು ಆಡಳಿತ, ಪ್ರಾದ್ಯಪಕರು, ಅವನ ಪೋಷಕರೆಲ್ಲಾ ವಿಷಯ ತಿಳಿಯುತ್ತಿದ್ದಂತೆ ಕಕ್ಕಾಬಿಕ್ಕಿಯಾಗಿದ್ದರು..! ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡಿ ಬಿಟ್ಟಿತ್ತು..! ಪೊಲೀಸರು ತಡಮಾಡದೇ ದೂರಿನ ಮೇರೆಗೆ ತನಿಖೆ ಆರಂಭಿಸಿದ್ರು..! ಸತತ 72 ಗಂಟೆಗಳ ಹುಡುಕಾಟದ ನಂತರ ಕಿಡ್ನಾಪ್ ಆಗಿದ್ದಾನೆಂದು ತಿಳಿದಿದ್ದ ಆಂಟನಿ ಚೆನ್ನೈನಲ್ಲಿ ಸಿಕ್ಕಿದ್ದಾನೆ..! ಪೊಲೀಸ್ ವಿಚಾರಣೆಯ ಆರಂಭದಲ್ಲಿ ನಾನೀಗಷ್ಟೇ ಬಿಡುಗಡೆಯಾಗಿದ್ದೇನೆಂದು ಮತ್ತೊಂದು ಕಥೆ ಹೆಣೆಯಲು ಶುರು ಮಾಡಿದ್ದ..! ಆದರೆ ಮುಂದಿನ ವಿಚಾರಣೆಯ ಬಳಿಕ ಆತ ಕಾಲೇಜಿನಲ್ಲಿ ಕಡಿಮೆ ಹಾಜರಾತಿ ಹೊಂದಿದ್ದ, ಪರೀಕ್ಷೆಗೆ ಕೂರಲಿಕ್ಕೂ ಅವನಿಗೆ ಆಸಕ್ತಿ ಇರಲಿಲ್ಲ ಎಂದು ತಿಳಿದು ಬಂದಿದೆ..! ಪರೀಕ್ಷೆ ತಪ್ಪಿಸಿಕೊಳ್ಳಲಿಕ್ಕೆ ತನ್ನ ಅಪಹರಣದ ಕಥೆ ಕಟ್ಟಿದ್ದ ಎಂದು ತಿಳಿದು ಬಂದಿದೆ..!
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಜುಕರ್ ಬರ್ಗ್ ಯಾಕೆ ಒಂದೇ ಬಣ್ಣದ ಶರ್ಟ್ ಧರಿಸುತ್ತಾರೆ..?
ಟ್ರಾಫಿಕ್ ಪೊಲೀಸ್ ಮೇಲೆ ಯುವತಿಯಿಂದ ಹಲ್ಲೆ…! ನಾರಿ ಮುನಿದರೆ ಮಾರಿ ಅನ್ನೋದು ಇದಕ್ಕೇ ಇರಬೇಕು..?!
ಜೈಲಲ್ಲಿ ಅರಳಿದ ಪ್ರೀತಿ..! ಜೈಲು ದಾಂಪತ್ಯ ನಡೆಸಿದ ಜೋಡಿಗಳೀಗ ದೂರ ದೂರ..!