ವಾಕಿಂಗ್ ಸ್ಟೈಲ್ ಹಾಗೂ ಹಾಕಿರುವ ಚಪ್ಪಲಿ ನೋಡಿಯೇ ಮಾಲೀಕನೊಬ್ಬ ಕಳ್ಳನನ್ನು ಹಿಡಿದಿರುವ ಘಟನೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಡೆದಿದೆ.
ಈ ತಿಂಗಳ ಮೊದಲ ವಾರದಲ್ಲಿ ಭರತ್ ರಾಥೋಡ್ ಎಂಬುವವರ ಪುನಾಗರ್ ಫ್ಯಾಷನ್ಸ್ ನಲ್ಲಿ ಕಳ್ಳ 35ಸಾವಿರ ರೂ ಕದ್ದಿದ್ದ. ಇದು ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.
ಸಿಸಿಟಿವಿ ಹಿಡಿದುಕೊಂಡ ಮಾಲೀಕ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಪೊಲೀಸರು ಎಲೆಕ್ಷನ್ ಮುಗಿದ ಮೇಲೆ ಬರುವಂತೆ ಹೇಳಿ ವಾಪಸ್ಸು ಕಳುಹಿಸಿದ್ದರು.
ಬಳಿಕ ಮಾಲೀಕ ಸಾಕಷ್ಟು ಸಕ ಸಿಸಿಟಿವಿ ದೃಶ್ಯಾವಳಿ ಗಮನಿಸಿದ್ದಾರೆ.
ವಾರದ ನಂತರ ಆ ಕಳ್ಳ ಚಿಕ್ಕಪೇಟೆಯ ಮತ್ತೊಂದು ಬೀದಿಯಲ್ಲಿ ಕಾಣಿಸಿಕೊಂಡಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಗಳು ಈ ಕಳ್ಳನ ವಾಕಿಂಗ್ ಸ್ಟೈಲ್ , ಚಪ್ಪಲಿ, ಹೇರ್ ಸ್ಟೈಲ್ ಒಂದೇಯಾಗಿತ್ತು…!
ಇದನ್ನು ಗಮನಿಸಿ ಮಾಲೀಕ ಭರತ್ ಸುಮಾರು 1ಕಿಮೀ ಚೇಸ್ ಮಾಡಿ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಈತನನ್ನು ಸಿಟಿ ಮಾರ್ಕೆಟ್ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ…! ಇದೀಗ ಡಿಸಿಪಿ ಚನ್ನಣ್ಣನವರ್ ಅವರಿಂದಾಗಿ ಕಳ್ಳನನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ.