ಧಾರಾಕಾರ ಮಳೆಗೆ ತೊರೆಗಳಂತಾದ ರಸ್ತೆಗಳು, 10ಕ್ಕೂ ಹೆಚ್ಚು ಅಪಾರ್ಟ್‍ಮೆಂಟ್ ಜಲಾವೃತ.
ಸತತ ಮೂರು ದಿನಗಳಿಂದ ಬೆಂಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಗೆ ಬೆಂಗಳೂರು ನಗರ ತತ್ತರಿಸಿದ್ದು, ಭಾರೀ ಮಳೆಯಿಂದಾಗಿ ಹಲವು ನಗರಗಳು ಜಲಾವೃತಗೊಂಡಿದೆ. ಬೆಂಗಳೂರಿನ ಕೆಂಗೇರಿ ನಾಯಂಡಳ್ಳಿ ಬಾಪೂಜಿ ನಗರ ಶಿವಾಜಿ ನಗರ ಸೇರಿದಂತೆ ಹಲವು ನಗರದ ರಸ್ತೆಯ ಮೇಲೆ ನೀರಿನ ಪ್ರವಾಹವಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದೆ. ಈ ವೇಳೆ ರಸ್ತೆಯ ತುಂಬೆಲ್ಲಾ ನೀರು ನಿಂತಿರುವ ಪರಿಣಾಮ ಟ್ರಾಫಿಕ್ ಜಾಮ್ ಆಗಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಮಳೆನೀರು ಸಮೀಪದ ಕೊಳಗೇರಿಗಳಿಗೆ ನುಗ್ಗಿದ ಪರಿಣಾಮ ಹಲವು ಮನೆಗಳಿಗೆ ನೀರು ನುಗ್ಗಿದೆ. ಇನ್ನು ಬೆಂಗಳೂರಿನ ಹೊರ ವಲಯಲವಾದ ಬಿಳೇಕಹಳ್ಳಿಯ ಕೋಡಿ ಚಿಕ್ಕನಹಳ್ಳಿ ಕೆರೆ ಭರ್ತಿಯಾಗಿ ಹರಿದ ಪರಿಣಾಮ ಅಲ್ಲಿನ 10 ಕ್ಕೂ ಹೆಚ್ಚು ಅಪಾರ್ಟ್‍ಮೆಂಟ್‍ಗಳಿಗೆ ನೀರು ನುಗ್ಗಿದೆ. ನೀರಿನ ಮಧ್ಯ ಸಿಲುಕಿಕೊಂಡಿರುವ ಜನರು ಹೊರಬರಲು ಸಾಧ್ಯವಾಗದಿದ್ದರಿಂದ ಅಗ್ನಿ ಶಾಮಕ ಧಳ ಸಿಬ್ಬಂದಿಯ ನೆರವಿನಿಂದ ರಕ್ಷಿಸಲಾಗಿದೆ.
ನಗರದಲ್ಲಿ ಇನ್ನು ಮೂರು ದಿನ ಮಳೆ ಸಾಧ್ಯತೆ.
ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಇದು ಜುಲೈನಲ್ಲಿ ಬಂದ ದಾಖಲೆಯ ಮಳೆ ಎನ್ನಲಾಗಿದೆ. ಈ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು ಬೆಂಗಳೂರಿನಲ್ಲಿ ಇನ್ನು ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.
POPULAR STORIES :
ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !
ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!
ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!