ಪುಟ್ಟಮಕ್ಕಳನ್ನು ಕೆಲವೊಮ್ಮೆ ಕಾರಿನಲ್ಲಿಯೇ ಬಿಟ್ಟು ಗ್ಲಾಸ್ ಏರಿಸಿ, ಕಿಟಕಿ ಮುಚ್ಚಿ ಹೋಗಬೇಕಾಗುತ್ತದೆ. ಮಗು ನಿದ್ರೆ ಬಂದಿದೆ ಅಂತಲೋ ಅಥವಾ ಚಿಕ್ಕ ಮಗುವನ್ನು ಬಗಲಲ್ಲಿ ಎತ್ತೊಕೊಂಡು ಮಾರುಕಟ್ಟೆಯಲ್ಲಿ, ಮಾಲ್‍ಗಳಲ್ಲಿ ಸುತ್ತಲು ಆಗಲ್ಲ ಎಂದೋ ತಂದೆ ತಾಯಿಗಳು ಮಕ್ಕಳನ್ನು ಕಾರಿನೊಳಗೆ ಬಿಟ್ಟು ಕಿಟಕಿ ಏರಿಸಿ ಹೋಗೋದು ಕಾಮನ್ ಆಗುದೆ.ಆದರೆ,ವಿಷಯ ಏನಪ್ಪಾ ಅಂದ್ರೆ ಹೀಗೆ ಮಕ್ಕಳನ್ನು ಕಾರಿನಲ್ಲಿ ಕೂಡಿಹಾಕುವುದರಿಂದ ಆಮ್ಲಜನಕದ ಸಮಸ್ಯೆ ಉಂಟಾಗಿ ಮಕ್ಕಳು ಸಾವನ್ನಪ್ಪುತ್ತಿರುವುದು ಹೆಚ್ಚುತ್ತಿದೆ. ಅಮೇರಿಕಾದಲ್ಲಿ ಬರೊಬ್ಬರಿ 661 ಮಕ್ಕಳು ಹೀಗೆ ಸತ್ತಿವೆಯಂತೆ..! ಭಾರತದಲ್ಲಿ ಇದನ್ನು ಲೆಕ್ಕಹಾಕುವ ಗೋಜಿಗೆ ಹೋಗಿಲ್ಲ! ಆದ್ರೆ ಈ ಸಮಸ್ಯೆ ಬಗ್ಗೆ ಇನ್ನು ಚಿಂತೆ ಬೇಡ,
ಇನ್ನು ಇದಕ್ಕೆ ಹೆದರುವ ಅಗತ್ಯವಿಲ್ಲ, ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳಿಬ್ಬರು ಇದಕ್ಕೆ ಪರಿಹಾರ ಕಂಡುಹಿಡಿದಿದ್ದಾರೆ. ಈ ಯುವ ವಿಜ್ಞಾನಿಗಳು ಸಂಶೋಧಿಸಿರುವ ಸಿಸ್ಟಂ ಅನ್ನು ಕಾರಿನಲ್ಲಿ ಅಳವಡಿಸಿಕೊಂಡರೆ ನಿಶ್ಚಿಂತೆಯಿಂದ ಮಕ್ಕಳನ್ನು ಕಾರಿನಲ್ಲಿ ಬಿಟ್ಟು ಕೆಲಸ ಮುಗಿಸಿಕೊಂಡು ಬರಬಹುದು! ಅವರು ಎಲಕ್ಟ್ರಾನಿಕ್ಸ್ ಕಮ್ಯುನಿಕೇಶನ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಕಾರ್ತಿಕ್.ಸಿ ಮತ್ತು ವಿದ್ಯಾರ್ಥಿನಿ ಪೃಥ್ವಿ ಜಿ.ಎನ್. ವಿದ್ಯಾರ್ಥಿ ಕಾರ್ತಿಕ್ ಸಿ ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಗುಂಜಲ್ಲಿ ಕ್ಯಾಂಪ್ ಎಂಬ ಸಣ್ಣ ಹಳ್ಳಿಯವರು. ತಂದೆ ವೆಂಕಟೇಶ್ ಶೆಟ್ಟಿ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ, ತಾಯಿ ಧನಲಕ್ಷ್ಮೀ ಗೃಹಿಣಿ. ಬೆಂಗಳೂರಿನ ಪೃಥ್ವಿ ಜಿ. ಎನ್ ಅವರ ತಂದೆ ನಿರಂಜನ್ ಜಿ.ಟಿ ಕಾರ್ಮಿಕ ಇಲಾಖೆಯಲ್ಲಿ ಉದ್ಯೋಗಿ, ತಾಯಿ ರಂಗಲಕ್ಷ್ಮೀ ಗೃಹಿಣಿ.
ಕಾರಿನಲ್ಲಿ ಗ್ಲಾಸ್ ಏರಿಸಿ ಹೋದಾಗ ಕಾರಿನೊಳಗೆ ತಾಪಮಾನ, ಉಷ್ಣತೆ ಹೆಚ್ಚುತ್ತದೆ. ಹೊರಗಿನ ತಾಪಮಾನಕ್ಕಿಂತ ಇದು ಹೆಚ್ಚಿರುತ್ತದೆ. ಇದಲ್ಲದೆ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಮಕ್ಕಳ ಉಸಿರಾಟಕ್ಕೆ ತೊಂದರೆಯಾಗಿ ಸಾಯುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಮಸ್ಯೆಯನ್ನು ತಿಳಿದ ಈ ಇಬ್ಬರು ವಿದ್ಯಾರ್ಥಿಗಳು ತಂತ್ರಜ್ಞಾನ ಪರಿಚಯಿಸಿದ್ದಾರೆ. ತಂದೆ ತಾಯಿಯರು ಮೊಬೈಲ್‍ನಲ್ಲಿಯೇ ಕಾರಿನೊಳಗಿರುವ ಮಗು ಏನು ಮಾಡುತ್ತಿದೆ? ಎಂದು ನೋಡಬಹುದಾಗಿದೆ. ತಾಪಮಾನ ಹೆಚ್ಚಿ ಪರಿಸ್ಥಿತಿ ಮಿತಿ ಮೀರುವ ಲಕ್ಷಣಗಳಿದ್ದಾಗ ಈ ಸಿಸ್ಟಂ ಪೋಷಕರಿಗೆ ಸಂದೇಶ ರವಾನಿಸಿ ಎಚ್ಚರಿಸುತ್ತದೆ. ಇದರಿಂದ ಅಪಾಯ ತಪ್ಪಿಸಬಹುದಾಗಿದೆ.
ವಿದ್ಯಾರ್ಥಿಗಳು ಸಂಶೋಧಿಸಿರುವ ಈ ಸಿಸ್ಟಂ ,ಕ್ಯಾಮರ ಮತ್ತು ಅಕ್ಸೆಲೆರೊಮೀಟರ್ ಹೊಂದಿದ್ದು, ಕಾರ್ ನಿಲ್ಲಿಸಿ ಲಾಕ್ ಮಾಡಿ ಹೊರ ನಡೆಯುತ್ತಿದ್ದಂತೆ ಮೊದಲು ಕಾರಿನಲ್ಲಿ ಮಗು ಇದೆಯೇ ಎಂದು ಪರೀಕ್ಷಿಸುತ್ತದೆ. ಮಗು ಇದೆ ಎಂದ ಸ್ಪಷ್ಟಪಡಿಸಿಕೊಂಡು ನಿಗಾ ಇಡುತ್ತದೆ. ತಾಪಮಾನ 35ಡಿಗ್ರಿ ದಾಟಿದರೆ ಕೂಡಲೇ ಪೋಷಕರಿಗೆ ಮಗು ತೊಂದರೆಯಲ್ಲಿದೆ ಎಂದು ಸಂದೇಶವನ್ನು ಕಳುಹಿಸುತ್ತದೆ. ಪೋಷಕರು ಸಂದೇಶ ಗಮನಿಸದೇ ಇದ್ದರೆ, ಕೂಡಲೇ ಸಮೀಪಿದ ಪೊಲೀಸ್ ಠಾಣೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂದೇಶ ರವಾನಿಸುತ್ತದೆ. ಅವುಗಳಿಂದಲೂ ಸೂಕ್ತ ಪ್ರತಿಕ್ರಿಯೆ ಬರದೇ ಇದ್ದಾಗ ತಾನಾಗಿಯೇ ಗಾಳಿಯಾಡಲು ಅನುಕೂಲವಾಗುವಂತೆ ಸ್ವಲ್ಪ ಗಾಜನ್ನು ಇಳಿಸುತ್ತದೆ, ನಂತರ ಬಜ್ಹರ್ ಅಥವಾ ಎಚ್ಚರಿಕೆ ಘಂಟೆ ಬಾರಿಸಿ ಸಮೀಪವಿರುವ ಜನರ ಗಮನ ಸೆಳೆದು ಅಪಾದ ಅಂಚಿನಲ್ಲಿರುವ ಮಗುವನ್ನು ಕಾಪಾಡಲು ನೆರವಾಗುತ್ತದೆ. ಇದಲ್ಲದೆ ಪೋಷಕರು ಈ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮೊಬೈಲ್ ಅಪ್ಲಿಕೇಷನ್ ಡೌನ್‍ಲೋಡ್ ಮಾಡಿಕೊಂಡಿದ್ದರೆ, ಮಗು ಕಾರಿನಲ್ಲಿ ಏನು ಮಾಡುತ್ತಿದೆ? ಎಂದು ಆಗಿಂದಾಗ ಗಮನಿಸುತ್ತಿರಬಹುದು.
ಯೋಜನಾಕಾರ್ಯವನ್ನು ಅಂಕಕ್ಕಾಗಿ ಬೇಕಾಬಿಟ್ಟಿ ಮಾಡುವ ವಿದ್ಯಾರ್ಥಿಗಳ ನಡುವೆ ಇಂಥವರು ಅಪರೂಪ ಎನಿಸುತ್ತಾರೆ. ಇವರಿಗೆ ಪ್ರಾಜೆಕ್ಟ್‍ವರ್ಕ್ ಮಾಡಿದ್ರೆ ನಾವು ಅಂಕ ಪಡೆಯಲಿಕ್ಕೆ ಮಾತ್ರ ಉಪಯೋಗ ಆಗ್ಬೇಕು ಅಂತ, ಸಮಸ್ಯೆಯನ್ನು ಕಂಡುಹಿಡಿದು ಅದಕ್ಕೆ ಪರಿಹಾರ ನೀಡಿದ್ದಾರೆ. ಈ ಯುವ ಪ್ರತಿಭೆಗಳಿಗೊಂದು ಸಲಾಂ
POPULAR STORIES :
ಹಾಯ್ ಸ್ವೀಟು… ನಿನ್ನಲ್ಲಿರೋ ಪ್ರಶ್ನೆಗಳಿಗೆ ನನ್ನ ಹತ್ತಿರ ಉತ್ತರ ಇಲ್ಲ..!
100% ಕಾಮಿಡಿ, ಸಖತ್ ಮೂವಿ ಈಗಲೇ ನೋಡಿ ಸ್ವಾಮಿ..!
ಐಪಿಎಲ್ ಸೀಸನ್ 9ರಲ್ಲಿ ಪ್ರೇಕ್ಷಕನೇ 3ನೇ ಅಂಪೈರ್ ಅಂತೆ..!
ಟ್ಯಾಂಕರ್ ಮುಷ್ಕರದ ಎಫೆಕ್ಟ್..! ಪೆಟ್ರೋಲ್ ಸಿಗ್ದಿದ್ರೇ ಏನಾಗುತ್ತೆ ಗೊತ್ತಾ..?
ಆರು ಪ್ರಶ್ನೆ ಪತ್ರಿಕೆಗಳು `ಲೀಕ್’, ಬೆಚ್ಚಿಬೀಳಿಸಿದ ಸಿಐಡಿ ತನಿಖೆ..!?
ಭಾರತೀಯ ನಟಿ ಜೊತೆ ಒಬಾಮಾ ಡಿನ್ನರ್..!
ಭಾರತದ ಮೇಲೆ ಗೂಬೆ ಕೂರಿಸಿದ ಪಾಕಿಸ್ತಾನ..!? ಈ ಜನ್ಮದಲ್ಲಿ ಇವ್ರಿಗೆ ಬುದ್ಧಿ ಬರಲ್ಲ ಬಿಡಿ..!!
ಅಶ್ಲೀಲ ಚಿತ್ರಗಳನ್ನು ನೋಡುವುದು ತಪ್ಪಲ್ಲ..!? ಲವ್ ಗೇಮ್ ಚಿತ್ರದಲ್ಲಿ ಅಂಥದ್ದೇನಿದೆ..?