ನಾಯಿ ಅಂದರೆ ಯಾರಿಗೆ ತಾನೇ ಇಷ್ಟವಾಗೋದಿಲ್ಲ. ಒಂದು ಚೂರು ಬಿಸ್ಕೆಟ್ ಹಾಕಿಬಿಟ್ಟರೇ ಸಾಯುವವರೆಗೆ ನಿಯ್ಯತ್ತಾಗಿರುತ್ತವೆ. ಅವುಗಳ ಪ್ರೀತಿಗೆ ಅವೇ ಸರಿಸಾಟಿ. ಹಲವರು ನಾಯಿಗಳನ್ನು ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಲಾಲಿಸುತ್ತಾರೆ. ಪೋಷಿಸುತ್ತಾರೆ. ಆದರೆ ಇಲ್ಲೊಬ್ಬಳು ಹೆಂಗಸು ಕರುಣೆಯಿಲ್ಲದೆ ಏಳು ನಾಯಿಮರಿಗಳನ್ನು ರಸ್ತೆಗೆ ಬಿಸಾಕಿ ಕೊಂದಿದ್ದಾಳೆ. ಏನೂ ಅರಿಯದ ಜೀವಿಗಳನ್ನು ಕೊಂದು ತಾನೊಬ್ಬ ದೊಡ್ಡ ಸಾಹಸಿ ಎಂದುಕೊಂಡ ಈ ಹೆಂಗಸಿನ ಹೆಸರು ಪೊನ್ನಮ್ಮ. ಈಕೆ ತುಮಕೂರು ರಸ್ತೆಯ ಕೃಷ್ಣರಾಜನಗರದವಳು. ಈಕೆ ಮಾಜಿ ಸೈನಿಕನ ಪತ್ನಿ ಬೇರೆ.
ಅಷ್ಟಕ್ಕೂ ಆಗಿದ್ದು ಇಷ್ಟು. ಪೊನ್ನಮ್ಮ ವಾಸವಿದ್ದ ಮನೆಯ ಚರಂಡಿಯಲ್ಲಿ ಬೀದಿ ನಾಯಿಯೊಂದು ಏಳು ಮರಿಗಳಿಗೆ ಜನ್ಮ ನೀಡಿತ್ತು. ಮೊನ್ನೆ ಬೆಂಗಳೂರಿನಲ್ಲಿ ಅಕಾಲಿಕ ಮಳೆ ಸುರಿದ ದಿನದಂದು ಈ ಪೊನ್ನಮ್ಮ ಚರಂಡಿಯಲ್ಲಿದ್ದ ನಾಯಿ ಮರಿಗಳನ್ನು ಎತ್ತಿ ರಸ್ತೆಗೆ ಬಿಸಾಕಿದ್ದಾಳೆ. ಜೋರಾಗಿ ಸುರಿಯುವ ಮಳೆ, ಥಂಡಿಯನ್ನು ತಾಳದ ಆ ನಾಯಿಮರಿಗಳು ಸತ್ತುಹೋಗಿವೆ. ಇದನ್ನು ಗಮನಿಸಿದ ಸೇವಾ ಸಂಸ್ಥೆಯೊಂದು ಪೊನ್ನಮ್ಮನ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿತ್ತು. ಪೊನ್ನಮ್ಮನನ್ನು ಬಂಧಿಸಿದ ಪೀಣ್ಯ ಪೊಲೀಸರು ಜಾಮೀನಿನ ಮೇಲೆ ಅವಳನ್ನು ಬಿಡುಗಡೆ ಮಾಡಿದ್ದಾರೆ. ಪೊಲೀಸರ ಮುಂದೆ ಪೊನ್ನಮ್ಮ ನಾಯಿಗಳಿಗೆ ಬುದ್ಧಿ ಕಲಿಸಲು ಹೀಗೆ ಮಾಡಿದೆ ಎಂದಿದ್ದಾಳೆ. ಅಂದರೆ ಮಕ್ಕಳು ತಪ್ಪು ಮಾಡಿದರೇ ಬುದ್ಧಿ ಕಲಿಸಲು ಜೋರಾಗಿ ಸುರಿಯುವ ಮಳೆಯಲ್ಲಿ ರಸ್ತೆಗೆ ಬಿಸಾಡುತ್ತೀರಾ..? ಎಂಬ ಪ್ರಶ್ನೆ ನಮ್ಮದು.
ಮಿಕ್ಕಂತೆ ಇಲ್ಲಿ ಪೊನ್ನಮ್ಮಳನ್ನು ಅವಳು, ಇವಳು ಎಂದು ಸಂಭೋದಿಸಿದ್ದಕ್ಕೆ ಕ್ಷಮೆಯಿರಲಿ. ಯಾರನ್ನು ಏಕವಚನದಿಂದ ಕರೆಯುವ ಸಂಪ್ರದಾಯ ನಮಗಿಲ್ಲ. ಆದರೆ ನಿಷ್ಪಾಪಿ ಜೀವಿಗಳನ್ನು ಕೊಂದು ತಾನೊಬ್ಬ ನಿಯ್ಯತ್ತಿಲ್ಲದ ಹೆಂಗಸು ಎಂದು ತೋರಿಸಿಕೊಂಡ ಈಕೆಯನ್ನು ಬಹುವಚನದಿಂದ ಕರೆದು ಮರ್ಯಾದೆ ಕೊಡಲು ಮನಸ್ಸಿಲ್ಲ. ನಾಯಿಗಳ ನಿಯ್ಯತ್ತಿನ ಒಂದಂಶವನ್ನು ಈಯಮ್ಮ ಅಳವಡಿಸಿಕೊಂಡಿದ್ದರೂ ಸಾಕಿತ್ತು. ಅಷ್ಟು ಜೀವಿಗಳು ಬದುಕುತ್ತಿದ್ದವು. ಪೊನ್ನಮ್ಮ ನಿನಗೆ ಕ್ಷಮೆಯಿಲ್ಲ.
(ಪೋಟೊ ಕೃಪೆ : ಬೆಂಗಳೂರು ಮಿರರ್)
POPULAR STORIES :
ಖಂಡೀಲ್ ಬೆತ್ತಲಾಗದಿದ್ರೇ ಏನಂತೆ..? ಆರ್ಷಿ ಖಾನ್ ಬೆತ್ತಲಾದಳಲ್ಲ..!!
ಅಮ್ಮನಿಗೆ ಸೇಟು ದುಡ್ಡು ಕೊಟ್ಟಿದ್ದು ಯಾಕೆ..? ಫ್ರಾಕ್ ಹುಡ್ಗೀಯ ಚಾಕೊಲೇಟ್ ಸ್ಟೋರಿ..!
ಶಿವಣ್ಣನ ಜೊತೆಗೆ ಬಿಬಿಸಿ ರೇಡಿಯೋ ನಡೆಸಿದ ಸಂದರ್ಶನ ಇಲ್ಲಿದೆ.. ಕೇಳಿ..!
ಇಲ್ಲಿ ಮುಚ್ಚಿಕೊಂಡರು.. ಅಲ್ಲಿ ಬಿಚ್ಚಿಕೊಂಡರು..!! ಏನಿದೆಲ್ಲಾ ದೀಪಿಕಾ..?
ಭಾರತದಲ್ಲಿದ್ದಾರೆ ಮೂವತ್ತು ಲಕ್ಷಕ್ಕಿಂತ ಹೆಚ್ಚು ವೇಶ್ಯೆಯರು..!? ಮೈ ಮಾರಾಟ ದಂಧೆ ಲೀಗಲೈಜ್ ಆಗುತ್ತಾ..?
ಹೆಂಗಿದ್ದ ಹೆಂಗಾದ ಗೊತ್ತಾ ಅಂಬಾನಿ ಪುತ್ರ..! ಐಪಿಎಲ್ ವೇಳೆ ಅಚ್ಚರಿಗೊಳ್ಳಲು ಸಿದ್ಧರಾಗಿ..!
ಪಾಕಿಸ್ತಾನಕ್ಕಾಗಿ ಖಂಡೀಲ್ ಬಲೋಚ್ ಬೆತ್ತಳಾಗುತ್ತಾಳಂತೆ..!? #Video
`ಆ್ಯಮ್ ಸಾರೀ ಗೇಲ್’ ಅಂದ ಬಿಗ್ಬಿ ಅಮಿತಾಬ್..!? ಅಮಿತಾಬ್ ಮಾಡಿದ ತಪ್ಪೇನು..?
ಇಸ್ಲಾಂ ಮಹಾನ್ ಧರ್ಮ ಎಂದ ನಮೋ..!? ಪಾಕಿಸ್ತಾನ ಮನಃಸ್ಥಿತಿ, ಭಾರತ ಯಥಾಸ್ಥಿತಿ..!?
ಪ್ರೀತಿಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ..! ಪ್ರೀತಿ `ಬೆಂಕಿ’ ಹುಷಾರು..!?